April 24, 2024

Bhavana Tv

Its Your Channel

ಹನುಮ ಜಯಂತಿ ಅಂಗವಾಗಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ

ಕಿಕ್ಕೇರಿ:- ಹನುಮ ಜಯಂತಿ ಅಂಗವಾಗಿ ಇಂದು ಹೇಮಗಿರಿಯ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿಗಳಾದ ಡಾ ರಾಮಕೃಷ್ಣೇಗೌಡ್ರು ರವರ ನೇತೃತ್ವದಲ್ಲಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ನಂತರ ಮಾತನಾಡಿ ಹನುಮನು ಭಕ್ತರ ಪ್ರಾರ್ಥನೆಗಳಿಗೆ ಬೇಗ ಸ್ಪಂದಿಸುತ್ತಾನೆ ಎಂಬ ನಂಬಿಕೆ ಇದೆ. ಆದ್ದರಿಂದ ಕೆಲವರು ಹನುಮಂತನನ್ನು ವಿಶೇಷವಾಗಿ ಪೂಜಿಸುತ್ತಾರೆ. ಇದು, ಬ್ರಹ್ಮಚಾರಿಗಳಿಗೆ, ಕುಸ್ತಿಪಟುಗಳಿಗೆ ಹಾಗೂ ಹನುಮಂತನ ಆರಾಧಕರಿಗೆ ಬಹಳ ವಿಶೇಷವಾದ ದಿನವಾಗಿದೆ.
ಹಿಂದೂಗಳು ಆರಾಧಿಸುವ ದೇವರಲ್ಲಿ ಆಂಜನೇಯನಿಗೆ ಕೂಡಾ ಪ್ರಮುಖ ಸ್ಥಾನವಿದೆ. ಶಕ್ತಿದೇವತೆಯ ಪ್ರತೀಕ ಎಂದೇ ಪೂಜಿಸಲ್ಪಡುವ ಆಂಜನೇಯನಿಗೆ ವಾಯುಪುತ್ರ, ಅಂಜನಿಪುತ್ರ, ಹನುಮಂತ, ಹನುಮಾನ್, ಶ್ರೀರಾಮನ ಬಂಟ, ಪವನಸುತ, ಬಜರಂಗಬಲಿ, ಮಾರುತಿ ಎಂದೆಲ್ಲಾ ಕರೆಯಲಾಗುತ್ತದೆ. ಜನರು ತಮ್ಮ ವಿವಿಧ ಕಷ್ಟಗಳನ್ನು ಪರಿಹಾರ ಮಾಡುವಂತೆ ಹನುಮಂತನ ಇಂದು ವಿಶೇಷ ಪೂಜೆ ಸಲ್ಲಿಸಲಾಗಿದೆ..

ಹೇಮಾಗಿರಿಯ ಶ್ರೀ ರಂಗನಾಥಸ್ವಾಮಿ ಬೆಟ್ಟದ ಮೇಲಿರುವ ಆಂಜನೇಯ ಸ್ವಾಮಿಯ ದೇವಾಲಯ ಶಿತಲವಾಗಿದ್ದು ಮಳೆ ಸಮಯದಲ್ಲಿ ತೊಂದರೆ ಆಗುತ್ತಿತ್ತು ಆದರೆ ಈಗ ದೇವಾಲಯವನ್ನು ನವೀಕರಣ ಮಾಡಿದ್ದು ದೇವಾಲಯಕ್ಕೆ ಇಂದು ಭಕ್ತರ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಿ ಗೋಪುರಕ್ಕೆ ಕಳಸ ಪ್ರತಿಷ್ಟಾಪನೆ ಮಾಡಿದ್ದೇವೆ ಎಂದರು..

ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಶಾಲಾ ಮಕ್ಕಳು, ಉಪಾನ್ಯಾಸಕರು ಸೇರಿದಂತೆ ಮತ್ತಿತ್ತರರು ಇದ್ದರು..

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: