September 16, 2024

Bhavana Tv

Its Your Channel

ಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ

ಕೆ.ಆರ್.ಪೇಟೆ ಕಪ್ ಹೆಸರಿನಲ್ಲಿ ಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಪಟ್ಟಣದ ಪುರಸಭೆ ಆವರಣದಲ್ಲಿ ಅದ್ದೂರಿಯಾಗಿ ಆಯೋಜನೆ ಮಾಡಲಾಗಿತ್ತು

ಕೃಷ್ಣರಾಜಪೇಟೆ ಪಟ್ಟಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಕಾರ್ಯಕ್ರಮಕ್ಕೆ ಹಾಸನ ನಗರದ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಉದ್ಘಾಟಿಸಿ ಮಾತನಾಡಿ ಈಗಿನ ಯುವಕರು ತಮ್ಮ ವಿದ್ಯಾಭ್ಯಾಸ ಜೊತೆಗೆ ಕ್ರೀಡೆಗೂ ಸಹ ಹೆಚ್ಚು ಗಮನ ಕೊಡಬೇಕು ಕ್ರೀಡೆಯಿಂದ ಮನುಷ್ಯ ಆರೋಗ್ಯ, ಮನಸ್ಸು ಸದೃಢವಾಗುತ್ತದೆ ಎಂದು ಕ್ರೀಡೆಗಳಿಗೆ ಸದಾ ಕಾಲ ನಮ್ಮ ಸಹಕಾರ ಇರುವುದು ಎಂದು ಹೇಳಿ ಆಟಗಾರರಿಗೆ ಶುಭಕೋರಿದರು

ಸಮಾಜ ಸೇವಕರು, ತಾಲ್ಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಮಹೇಂದ್ರ.ಡಿ.ಎoರವರು ಕಾರ್ಯಕ್ರಮದಲ್ಲಿ ಭಾಗವಹಿಸಿಸಿ ಮಾತನಾಡಿ ಅವರು ಗ್ರಾಮೀಣ ಭಾಗದ ಯುವಕರು ಅತ್ಯುತ್ತಮ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವ ಆಟಗಾರರಿದ್ದಾರೆ, ಆದರೆ ಸೂಕ್ತ ವೇದಿಕೆ ಇಲ್ಲದೆ ಅವಕಾಶ ವಂಚಿತರಾಗಿ ಬೆಳಕಿಗೆ ಬರುತ್ತಿಲ್ಲ ಕ್ರೀಡಾಸಕ್ತರಿಂದ ಆಯೋಜಿಸಿರುವ ಕಾರ್ಯಕ್ರಮಗಳಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಸಂಘಟಿಸುವುದರಿAದ ನೈಪುಣ್ಯತೆ ಉಳ್ಳ ಆಟಗಾರರು ಬೆಳಕಿಗೆ ಬರಲು ಸಾಧ್ಯವುಗುವುದು ಎಂದು ತಿಳಿಸಿದರು ಅಲ್ಲದೆ ಆಟಗಾರರಿಗೆ ಟೀ ಶರ್ಟ್ ವಿತರಿಸಿ ಶುಭಕೋರಿದರು,

ವಾಲಿಬಾಲ್ ಪಂದ್ಯಾವಳಿ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ಟಿ.ಎ.ಪಿ.ಎಂ.ಎಸ್ ಅದ್ಯಕ್ಷ ಬಿ ಎಲ್ ದೇವರಾಜ್, ಪುರಸಭಾ ಸದಸ್ಯ ಬಸ್ ಸಂತೋಷ್, ತಾಲ್ಲೂಕು ಯೂಥ್ ಕಾಂಗ್ರೇಸ್ ಅದ್ಯಕ್ಷ ಮಹೇಂದ್ರ ಡಿ.ಎಂ, ಮಂಡ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದೀಪಕ್, ಸೇರಿದಂತೆ ಮತ್ತಿತ್ತರರು ಇದ್ದರು

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: