March 29, 2024

Bhavana Tv

Its Your Channel

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಮಾದಾಪುರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಜಿಲ್ಲಾಧಿಕಾರಿ ಭೇಟಿ

ಮಂಡ್ಯ: ಕೃಷ್ಣರಾಜಪೇಟೆ ತಾಲ್ಲೂಕಿನ ಗಡಿ ಗ್ರಾಮವಾದ ಕಿಕ್ಕೇರಿ ಹೋಬಳಿಯ ಮಾದಾಪುರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ್ದ ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆoಕಟೇಶ್ ಸಾಂಸ್ಥಿಕ ಹೋಂ ಕ್ವಾರಂಟೈನ್ ಆಗಿರುವ ೨೫೦ಕ್ಕೂ ಹೆಚ್ಚಿನ ಮುಂಬೈ ಕನ್ನಡಿಗರ ಆರೋಗ್ಯ ವಿಚಾರಿಸಿ ಕುಶಲೋಪರಿ ನಡೆಸಿದರು.

ಮುಂಬೈ ಹಾಗೂ ನಮ್ಮ ಜಿಲ್ಲೆಯ ಊಟ ತಿಂಡಿಗಳ ಆಹಾರದ ರುಚಿಯಲ್ಲಿ ತುಂಬಾ ವ್ಯತ್ಯಾಸವಿದೆ..ಊಟದ ತಯಾರಿಕೆಗೆ ಸ್ವಲ್ಪ ಸಪ್ಪೆ ಮಸಾಲೆ ಪದಾರ್ಥಗಳನ್ನು ಕಡಿಮೆ ಹಾಕಿದ್ದರೂ ನಮ್ಮ ಗ್ರಾಮೀಣ ಸೊಗಡಿನ ಮುದ್ದೆ ಸೊಪ್ಪಿನ ಸಾರು ಹಾಗೂ ತರಕಾರಿಗಳ ಊಟ ತುಂಬಾ ಪೌಷ್ಟಿಕಾಂಶಗಳಿoದ ಕೂಡಿರುವ ಆಹಾರವಾಗಿದ್ದು ಹೈಜನಿಕ್ ಆಗಿದೆ. ಅತ್ಯುತ್ತಮವಾದ ಪರಿಸರದಲ್ಲಿರುವ ಕಟ್ಟಡದಲ್ಲಿ ಹೋಂ ಕ್ವಾರಂಟೈನ್ ಆಗಿರುವ ನಿಮಗೆ ಆತ್ಮಶಕ್ತಿ ಹೆಚ್ಚಾಗಲು ಒಳ್ಳೆಯ ಗಾಳಿ, ಅತ್ಯುತ್ತಮ ವಾತಾವರಣವಿದೆ..ಗುಣಮಟ್ಟದ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಲಾಗುತ್ತಿದೆ. ಒಂದೆರಡು ದಿನಗಳಲ್ಲಿ ಹೋಂ ಕ್ವಾರಂಟೈನ್‌ನಿoದ ಬಿಡುಗಡೆಯಾಗುವ ನೀವು ನಿಮ್ಮ ಗ್ರಾಮಕ್ಕೆ ತೆರಳಿ ೧೪ ದಿನಗಳ ಕಾಲ ಕಡ್ಡಾಯವಾಗಿ ಮನೆಯಲ್ಲಿಯೇ ಹೋಂ ಕ್ವಾರಂಟೈನ್ ಆಗಬೇಕು. ಅನವಶ್ಯಕವಾಗಿ ಮನೆಯಿಂದ ಹೊರಗೆ ಓಡಾಡಬಾರದು. ಗ್ರಾಮದಲ್ಲಿ ಏನೇ ಅಡ್ಡಿ ಆತಂಕಗಳು ಎದುರಾದರೂ ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಬೇಕು.ಶಾಂತಿ ಸೌಹಾರ್ಧತೆಯನ್ನು ಕಾಪಾಡಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು…

ಈ ಸಂದರ್ಭದಲ್ಲಿ ತಹಶೀಲ್ದಾರ್ ಎಂ.ಶಿವಮೂರ್ತಿ, ಕೋವಿಡ್ ನಿಯಂತ್ರಣ ನೋಡಲ್ ಅಧಿಕಾರಿ ಡಾ.ಬೆಟ್ಟಸ್ವಾಮಿ, ಜಿಲ್ಲಾ ಬಿಸಿಎಂ ಅಧಿಕಾರಿ ಸೋಮಶೇಖರ್, ತಾಲ್ಲೂಕು ಬಿಸಿಎಂ ಅಧಿಕಾರಿ ವೆಂಕಟೇಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್, ಮೊರಾರ್ಜಿ ದೇಸಾಯಿ ವಸತಿಶಾಲೆಯ ಪ್ರಾಂಶುಪಾಲ ಪ್ರಸನ್ನಕುಮಾರ್, ಸರ್ಕಲ್ ಇನ್ಸ್ ಪೆಕ್ಟರ್ ಆನಂದೇಗೌಡ, ಉಪತಹಶೀಲ್ದಾರ್ ಲಕ್ಷ್ಮೀಕಾಂತ್, ತಾಲ್ಲೂಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಹರೀಶ್, ಕಿಕ್ಕೇರಿ ಹೋಬಳಿಯ ರಾಜಶ್ವನಿರೀಕ್ಷಕ ಗೋಪಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು…

ವರದಿ:- ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ ….

error: