April 18, 2024

Bhavana Tv

Its Your Channel

ರಾಷ್ಟ್ರಕವಿ ಕುವೆಂಪು ಅವರ ೧೧೬ನೇ ಜನ್ಮದಿನದ ಕಾರ್ಯಕ್ರಮ ಸರಳವಾಗಿ ಆಚರಣೆ

ಮಂಡ್ಯ: ಕೃಷ್ಣರಾಜಪೇಟೆ ತಾಲ್ಲೂಕು ಆಡಳಿತದ ವತಿಯಿಂದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಪ್ರವಾಸಿ ಮಂದಿರದ ಆವರಣದಲ್ಲಿ ರಾಷ್ಟ್ರಕವಿ ಕುವೆಂಪು ಅವರ ೧೧೬ನೇ ಜನ್ಮದಿನದ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು.
ಕೆ.ಆರ್.ಪೇಟೆ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ತಹಶೀಲ್ದಾರ್ ಎಂ.ಶಿವಮೂರ್ತಿ ಯುಗದಕವಿ, ಜಗದಕವಿ ಕುವೆಂಪು ಅವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರೆ ಪ್ರವಾಸಿ ಮಂದಿರದ ಆವರಣದಲ್ಲಿ ನಡೆದ ಕುವೆಂಪು ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಹೊನ್ನೇನಹಳ್ಳಿ ವೇಣು ರಾಷ್ಟ್ರಕವಿ ಕುವೆಂಪು ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಮಾಡಿದರು.

ಮನುಜಮಥ ವಿಶ್ವಪಥ ಎಂಬ ಸಂದೇಶ ನೀಡಿ ವಿಶ್ವಮಾನವ ಸಂದೇಶವನ್ನು ನಾಡಿಗೆ ಕೊಡುಗೆಯಾಗಿ ನೀಡಿದ ರಸಋಷಿ ಕುವೆಂಪು ಅವರ ತತ್ವ ಸಂದೇಶಗಳನ್ನು ಯುವಜನರು ಪಾಲಿಸುವ ಮೂಲಕ ಬದಲಾವಣೆಯ ದಿಕ್ಕಿನತ್ತ ಸಾಗಬೇಕು ಎಂದು ಕರವೇ ಅಧ್ಯಕ್ಷ ವೇಣು ಮನವಿ ಮಾಡಿದರು…

ತಹಶೀಲ್ದಾರ್ ಎಂ.ಶಿವಮೂರ್ತಿ ಮಾತನಾಡಿ ಕನ್ನಡ ಸಾಹಿತ್ಯಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಕುವೆಂಪು ಅವರ ಸಾಹಿತ್ಯವು ಆಂಗ್ಲಭಾಷೆಗೆ ತರ್ಜುಮೆಗೊಂಡಿದ್ದರೆ ನೊಬೆಲ್ ಪ್ರಶಸ್ತಿಯು ಎಂದೋ ಸಿಗುತ್ತಿತ್ತು. ಕುವೆಂಪು ಅವರ ಸಮಗ್ರ ಸಾಹಿತ್ಯವು ಆಂಗ್ಲಭಾಷೆಗೆ ತರ್ಜುಮೆಯಾದರೆ ವಿಶ್ವಮಾನ್ಯ ಕವಿಯಾಗುತ್ತಾರೆ ಎಂದು ಅಭಿಮಾನದಿಂದ ಹೇಳಿದರು..

ಈ ಸಂದರ್ಭದಲ್ಲಿ ಉಪತಹಶೀಲ್ದಾರ್ ಲಕ್ಷ್ಮೀಕಾಂತ್, ರಾಜಶ್ವನಿರೀಕ್ಷಕರಾದ ರಾಜಮೂರ್ತಿ, ಚಿಕ್ಕಲಕ್ಷ್ಮಿ, ಹಿರಿಯಣ್ಣ, ಗ್ರಾಮಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಹರೀಶ್, ಕರವೇ ಪದಾಧಿಕಾರಿಗಳಾದ ಟೆಂಪೋ ಶ್ರೀನಿವಾಸ್, ಶ್ರೀನಿಧಿ ಶ್ರೀನಿವಾಸ್, ಬಲ್ಲೇನಹಳ್ಳಿ ಮಂಜುನಾಥ್ , ಚೇತನಕುಮಾರ್, ಆರ್.ಶ್ರೀನಿವಾಸ್, ಕಾಮನಹಳ್ಳಿ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು…

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: