April 25, 2024

Bhavana Tv

Its Your Channel

ಕೋವ್ಯಾಕ್ಸಿನ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ತಹಶೀಲ್ದಾರ್ ಎಂ.ಶಿವಮೂರ್ತಿ

ಮಂಡ್ಯ (ಜ.೧೬): ಕೊರೋನಾ ಮಹಾಮಾರಿಯ ತಡೆಗೆ ಕೋವ್ಯಾಕ್ಸಿನ್ ಲಸಿಕಾ ಅಭಿಯಾನಕ್ಕೆ ಕೆ.ಆರ್.ಪೇಟೆ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಾಲನೆ ನೀಡಿದ ತಹಶೀಲ್ದಾರ್ ಎಂ.ಶಿವಮೂರ್ತಿ ..

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಜಯಪ್ರಕಾಶ್ ಅವರ ಸಮಕ್ಷಮದಲ್ಲಿ ತಾಲ್ಲೂಕಿನ ಮೊದಲ ಕೋವ್ಯಾಕ್ಸಿನ್ ಲಸಿಕೆಯನ್ನು ಫಾರ್ಮಸಿಸ್ಟ್ ಸತೀಶ್ ಮತ್ತು ಆಡಳಿತ ವೈದ್ಯಾಧಿಕಾರಿ ಡಾ.ಜಯಪ್ರಕಾಶ್ ಪಡೆದುಕೊಂಡರು…

ದೇಶಾದ್ಯಂತ ಕೊರೋನಾ ತಡೆಗೆ ಕೋವ್ಯಾಕ್ಸಿನ್ ಲಸಿಕಾ ಅಭಿಯಾನವು ಆರಂಭವಾಗಿದೆ. ಲಸಿಕೆ ತೆಗೆದುಕೊಂಡವರ ಮೇಲೆ ಅರ್ಧ ಗಂಟೆ ನಿಗಾ ಇರಿಸಿ ಯಾವುದೇ ಅಡ್ಡಪರಿಣಾಮ ಆಗುವುದಿಲ್ಲವೆಂದು ಧೃಡೀಕರಿಸಿಕೊಂಡು ಬೇರೆಯವರಿಗೆ ಲಸಿಕೆ ನೀಡಲಾಗುತ್ತಿದೆ ಎಂದು ತಹಶೀಲ್ದಾರ್ ಎಂ.ಶಿವಮೂರ್ತಿ ವಿವರಿಸಿದರು..

ಕೆ.ಆರ್.ಪೇಟೆ ತಾಲ್ಲೂಕಿನ ೪೧೦ ಜನರಿಗೆ ಟೆಸ್ಟ್ ಡೋಸ್ ಲಸಿಕೆ ನೀಡಲಾಗುತ್ತಿದೆ. ಮೊದಲ ದಿನವಾದ ಇಂದು ೧೦೦ ಜನ ಕೊರೋನಾ ವಾರಿಯರ್ಸ್ ಗೆ ಲಸಿಕೆಯನ್ನು ನೀಡಲಾಗುತ್ತಿದೆ. ನಂತರದ ದಿನಗಳಲ್ಲಿ ಈಗಾಗಲೇ ತಮ್ಮ ಹೆಸರನ್ನು ನೋಂದಾಯಿಸಿರುವ ವಾರಿಯರ್ಸ್ ಗಳಿಗೆ ಲಸಿಕೆ ನೀಡಲಾಗುವುದು ಎಂದು ನೋಡಲ್ ಅಧಿಕಾರಿ ಡಾ.ಅನಿಲ್ ತಿಳಿಸಿದರು..

ಈ ಸಂದರ್ಭದಲ್ಲಿ ಕೋವ್ಯಾಕ್ಸಿನ್ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಸಿಡಿಪಿಓ ದೇವಕುಮಾರ್, ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ, ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್, ಹಿರಿಯ ನಾಗರಿಕರಾದ ವೆಂಕಟಕೃಷ್ಣಶೆಟ್ಟಿ, ತಜ್ಞ ವೈದ್ಯರಾದ ಡಾ.ಶ್ರೀಕಾಂತ್, ಡಾ.ಶಶಿಧರ್, ಡಾ.ಅಪೂರ್ವ, ಡಾ.ಶಿವಕುಮಾರ್, ಹಿರಿಯ ಶುಶ್ರೂಷಕಿ ಸೀತಮ್ಮ, ಕಲ್ಪನಾ, ಹಿರಿಯ ಆರೋಗ್ಯ ಪರಿವೀಕ್ಷಕ ಶೀಳನೆರೆ ಸತೀಶ್ ಮತ್ತಿತರರು ಉಪಸ್ಥಿತರಿದ್ದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: