April 20, 2024

Bhavana Tv

Its Your Channel

ದಾಸವಾಳದ ಗಿಡದಲ್ಲಿ ಅಡಗಿದ್ದ ೬ಅಡಿ ಉದ್ದದ ಅಪರೂಪದ ಹಸಿರು ಹಾವು ಪತ್ತೆ.

ಮಂಡ್ಯ: ಕೃಷ್ಣರಾಜಪೇಟೆ ತಾಲ್ಲೂಕಿನ ಸಿಂದಘಟ್ಟ ಗ್ರಾಮದ ನಿವೃತ್ತ ಶಿಕ್ಷಕ ವೀರಭದ್ರಶೆಟ್ಟಿ ಅವರ ಮನೆಯ ಬಳಿ ದಾಸವಾಳದ ಗಿಡದಲ್ಲಿ ಅಡಗಿದ್ದ ೬ಅಡಿ ಉದ್ಧದ ಅಪರೂಪದ ಹಸಿರು ಹಾವು ಪತ್ತೆ. ಕಪ್ಪು, ಬಿಳಿ ಹಾಗೂ ಹಳದಿ ಬಣ್ಣಗಳ ಚಿತ್ತಾರದಿಂದ ಕೂಡಿರುವ ೬ಅಡಿ ಉದ್ದದ ಹಸಿರುಹಾವು ಹಿಡಿದು ಸಂರಕ್ಷಣೆ ಮಾಡಿದ ಕೆ.ಆರ್.ಪೇಟೆಯ ಉರಗತಜ್ಞ ಸ್ನೇಕ್ ಮುನ್ನಾ. ಮಾನವನಿಗೆ ಅಪಕಾರಿಯಲ್ಲದ ಹಾವುಗಳು ಹಾಗೂ ಹುಳು ಹುಪ್ಪಟೆಗಳನ್ನು ತಿಂದು ಜೀವಿಸುವ ಹಸಿರುಹಾವು,ಕೆ.ಆರ್.ಪೇಟೆ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿ ಸುರಕ್ಷಿತವಾಗಿ ಬೆಳ್ಳಿಬೆಟ್ಟದ ಕಾವಲು ಅರಣ್ಯಕ್ಕೆ ಬಿಡುವುದಾಗಿ ಪತ್ರಕರ್ತರಿಗೆ ಸ್ನೇಕ್ ಮುನ್ನಾ ತಿಳಿಸಿದರು.
ನಾನು ೧೦ಸಾವಿರಕ್ಕೂ ಹೆಚ್ಚಿನ ಹಾವುಗಳನ್ನು ಹಿಡಿದು ಅರಣ್ಯಕ್ಕೆ ಬಿಟ್ಟು ಸಂರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದೇನೆ.ಮೂರು ನಾಲ್ಕು ಅಡಿಗಳಷ್ಟು ಉದ್ದದ ಹಸಿರು ಹಾವು ಕಂಡುಬರುವುದು ಸಾಮಾನ್ಯವಾಗಿದೆ. ಆದರೆ ೬ಅಡಿ ಉದ್ದದ ಹಸಿರು ಹಾವನ್ನು ನೋಡಿರುವುದು ಇದೇ ಮೊದಲು ಎಂದು ಸ್ನೇಕ್ ಮುನ್ನಾ ಹೇಳಿದರು.
ಸ್ನೇಕ್ ಮುನ್ನಾ ಅವರ ಹಾವುಗಳ ಸಂರಕ್ಷಣಾ ಕಾರ್ಯವನ್ನು ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಅಭಿನಂದಿಸಿವೆ..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: