
ಮಂಡ್ಯ: ರಾಜ್ಯದ ಯುವಜನಸೇವೆ, ಕ್ರೀಡೆ, ಯೋಜನೆ, ಸಾಂಖ್ಯಿಕ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ ಅವರಿಂದ ಕೆ.ಆರ್.ಪೇಟೆ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಿದರು
ಪುಟಾಣಿ ಮಕ್ಕಳು ಹಾಗೂ ಹಸುಗೂಸುಗಳಿಗೆ ಪೋಲಿಯೋ ಹನಿಗಳನ್ನು ಹಾಕಿ ಮಕ್ಕಳ ತಾಯಂದಿರಿಗೆ ಶುಭ ಹಾರೈಸಿದ ಸಚಿವರು.
ದೇಶಾದ್ಯಂತ ಆಂದೋಲನದ ಮಾದರಿಯಲ್ಲಿ ನಡೆಯುತ್ತಿರುವ ಪಲ್ಸ್ ಪೋಲಿಯೊ ಅಭಿಯಾನವು ಮಂಡ್ಯ ಜಿಲ್ಲೆಯಲ್ಲಿ ಶೇ.೧೦೦ಕ್ಕೆ ೧೦೦ರಷ್ಟು ಯಶಸ್ವಿಯಾಗಬೇಕು. ಮಹಾಮಾರಿ ಪೋಲಿಯೋ ವನ್ನು ದೇಶದಿಂದ ಶಾಶ್ವತವಾಗಿ ಹೊಡೆದೋಡಿಸಲು ಸಂಪೂರ್ಣವಾದ ಸಹಕಾರ ನೀಡಬೇಕು. ಒಂದೇ ಒಂದು ಮಗುವೂ ಕೂಡ ಪಲ್ಸ್ ಪೋಲಿಯೊ ಲಸಿಕೆಯ ಹನಿಗಳನ್ನು ಹಾಕಿಸಿಕೊಳ್ಳುವುದರಿಂದ ವಂಚಿತವಾಗಬಾರದು ಎಂದು ಸಚಿವ ನಾರಾಯಣಗೌಡ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನದಲ್ಲಿ ತಹಶೀಲ್ದಾರ್ ಎಂ.ಶಿವಮೂರ್ತಿ, ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಗಾಯತ್ರಿ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಜಯಲಕ್ಷ್ಮೀ, ಜಿಲ್ಲಾ ಪಂಚಾಯತಿ ಸದಸ್ಯ ರಾಮದಾಸು, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಜಯಪ್ರಕಾಶ್, ಜಿಲ್ಲಾ ಪಂಚಾಯತಿ ಮಾಜಿಉಪಾಧ್ಯಕ್ಷ ಎಸ್.ಅಂಬರೀಶ್, ಉಧ್ಯಮಿ ಪೂನಾಶಂಕರ್, ಸಿಡಿಪಿಓ ದೇವಕುಮಾರ್, ತಾಲ್ಲೂಕು ಆರೋಗ್ಯಶಿಕ್ಷಣಾಧಿಕಾರಿ ಶಿವಮ್ಮ, ತಜ್ಞವೈದ್ಯರಾದ ಡಾ.ಶಿವಕುಮಾರ್, ಡಾ.ರವಿ, ಡಾ.ಶಶಿಧರ್, ಡಾ.ಶ್ರೀಕಾಂತ್, ಮಹಿಳಾ ಮತ್ತು ಮಕ್ಕಳ ಇಲಾಖೆಯ ಮೇಲ್ವಿಚಾರಕಿ ಪದ್ಮಾ,ಶಾಂತವ್ವ, ದಿಲ್ ಶಾಧ್ ಬಿ.ನಧಾಫ್, ಮಂಜುಳಾ ಸೇರಿದಂತೆ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ನೌಕರರು ಉಪಸ್ಥಿತರಿದ್ದರು…
ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ
More Stories
ಕೆ.ಆರ್.ಪೇಟೆ ಪುರಸಭೆ ಅಧ್ಯಕ್ಷರಾಗಿ ಮಹದೇವಿನಂಜುoಡ, ಉಪಾಧ್ಯಕ್ಷೆ ಗಾಯತ್ರಿ ಆಯ್ಕೆ ಕ್ರಮಬದ್ಧ- ರಾಜ್ಯ ಉಚ್ಛ ನ್ಯಾಯಾಲಯದ ತೀರ್ಪು.
ಕೆ.ಆರ್.ಪೇಟೆ ಪಟ್ಟಣದಲ್ಲಿ ಶ್ರೀರಾಮನವಮಿಯ ಸಂಭ್ರಮ, ಮೊಳಗಿದ ರಾಮನಾಮ, ಶ್ರೀ ರಾಮ ಭಜನೆ ಮಾಡಿ ಸಂಭ್ರಮಿಸಿದ ಭಕ್ತವೃಂದ
ನಾಗಮಂಗಲದಲ್ಲಿ ಉಲ್ಬಣಗೊಂಡ ಕೊರೋನಾ: ಮೈಮರೆತ ಜನತೆ: ಅಧಿಕಾರಿಗಳ ಆತಂಕ