April 25, 2024

Bhavana Tv

Its Your Channel

ವಿದ್ಯುತ್ ಗ್ರಾಹಕರು ಹಾಗೂ ನಾಗರೀಕರಿಗೆ ವಿದ್ಯುತ್ ಸೇವೆಗಳ ಅರಿವು ಹಾಗೂ ಜಾಗೃತಿ ಕಾರ್ಯಕ್ರಮ

ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ಪಟ್ಟಣದ ಸೆಸ್ಕ್ ವಿಭಾಗೀಯ ಕಛೇರಿಯ ಆವರಣದಲ್ಲಿ ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕೆ.ಆರ್.ಪೇಟೆ ಉಪವಿಭಾಗ-೨ರ ವತಿಯಿಂದ ವಿದ್ಯುತ್ ಗ್ರಾಹಕರು ಹಾಗೂ ನಾಗರೀಕರಿಗೆ ವಿದ್ಯುತ್ ಸೇವೆಗಳ ಅರಿವು ಹಾಗೂ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು .

ಕೃಷ್ಣರಾಜಪೇಟೆ ವಿಭಾಗದ ಸೆಸ್ಕ್ ಕಾರ್ಯಪಾಲಕ ಅಭಯಂತರ ನಾಗರಾಜು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ವಿದ್ಯುತ್ ಗ್ರಾಹಕರು ಹಾಗೂ ನಾಗರೀಕರನ್ನು ಉದ್ದೇಶಿಸಿ ಮಾತನಾಡಿ ಗ್ರಾಹಕರು ಹಾಗೂ ರೈತ ಬಾಂಧವರಿಗೆ ಗುಣಮಟ್ಟದ ವಿದ್ಯುತ್ತನ್ನು ನೀಡುವ ದಿಕ್ಕಿನಲ್ಲಿ ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಬದ್ಧತೆಯಿಂದ ಕೆಲಸ ಮಾಡುತ್ತಾ ಗ್ರಾಹಕ ಸ್ನೇಹಿಯಾಗಿದೆ. ಗ್ರಾಹಕರು ವಿದ್ಯುತ್ ಬಳಕೆಯಲ್ಲಿ ಎಚ್ಚರ ವಹಿಸಿ ಯಾವುದೇ ವಿದ್ಯುತ್ ಅವಘಡಗಳು ಸಂಭವಿಸದAತೆ ಕಾಳಜಿ ವಹಿಸಬೇಕು ಎಂದು ಮನವಿ ಮಾಡಿದ ನಾಗರಾಜು ಕೃಷ್ಣರಾಜಪೇಟೆ ಪಟ್ಟಣಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡುವ ಹೇಮಗಿರಿ ಪಂಪ್ ಹೌಸ್ ಎಕ್ಸ್ ಪ್ರೆಸ್ ವಿದ್ಯುತ್ ಲೈನ್ ಸೇರಿದಂತೆ ಗ್ರಾಮೀಣ ಭಾಗದ ಕುಡಿಯುವ ನೀರು ಸರಬರಾಜಿನ ಪರಿವರ್ತಕಗಳನ್ನು ದುರಸ್ಥಿಪಡಿಸಿ ಯಾವುದೇ ತೊಂದರೆಯಾಗದAತೆ ಕ್ರಮಕೈಗೊಂಡಿದೆ. ಕುಡಿಯುವ ನೀರು ಸರಬರಾಜು ಘಟಕಗಳ ವಿದ್ಯುತ್ ಪರಿವರ್ತಕಗಳು ಕೆಟ್ಟರೆ ೨೪ಗಂಟೆಗಳ ಒಳಗಾಗಿ ದುರಸ್ಥಿಪಡಿಸಿ ಜನರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ನಾಗರಾಜು ವಿವರಿಸಿದರು.

ವಿದ್ಯುತ್ ಗ್ರಾಹಕರಾದ ಪ್ರಗತಿಪರ ರೈತ ಕೃಷ್ಣೇಗೌಡ, ಪುರಸಭೆ ಸದಸ್ಯ ಡಿ.ಪ್ರೇಮಕುಮಾರ್, ಜಿಲ್ಲಾ ಪಂಚಾಯತಿ ಮಾಜಿಅಧ್ಯಕ್ಷ ಆರ್.ಕೆ.ಕುಮಾರ್, ತಾಲ್ಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಎಸ್.ನಾಗೇಂದ್ರ ಸಭೆಯಲ್ಲಿ ಮಾತನಾಡಿ ಕೃಷ್ಣರಾಜಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ವಿದ್ಯುತ್ ಸಮಸ್ಯೆಗಳನ್ನು ಸಂಪೂರ್ಣವಾಗಿ ಬಗೆಹರಿಸಿ ತಾಲ್ಲೂಕಿನ ವಿದ್ಯುತ್ ಸಮಸ್ಯೆಗಳ ಪರಿಹಾರಕ್ಕೆ ಶಾಶ್ವತ ಕ್ರಮಗಳನ್ನು ಕೈಗೊಂಡಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಸಾರ್ಥಕ ಸೇವೆಯನ್ನು ಶ್ಲಾಘಿಸಿದರು..

ಸೆಸ್ಕ್ ಕೆ.ಆರ್.ಪೇಟೆ-೨ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಯಂತರ ಕೃಷ್ಣ ಮಾತನಾಡಿ ಪ್ರತೀ ಮೂರು ತಿಂಗಳಿಗೊಮ್ಮೆ ಸ್ಥಳೀಯ ಮಟ್ಟದಲ್ಲಿ ಜನಸಂಪರ್ಕ ಸಭೆಯನ್ನು ಹಮ್ಮಿಕೊಂಡು ಗ್ರಾಹಕರ ಮನವಿ ಹಾಗೂ ದೂರುಗಳಿಗೆ ಶಾಶ್ವತವಾದ ಪರಿಹಾರ ನೀಡುವ ನಿಟ್ಟಿನಲ್ಲಿ ಇಲಾಖೆಯ ಸಿಬ್ಬಂಧಿಗಳು ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ. ಎನ್.ಜೆ.ವೈ, ಐಪಿಡಿಎಸ್, ಆರ್.ಎ.ಪಿ.ಡಿ.ಆರ್.ಪಿ ಯೋಜನೆಯನ್ನು ಬಳಸಿಕೊಂಡು ವಿದ್ಯುತ್ ಜಾಲವನ್ನು ಸದೃಡಗೊಳಿಸಲಾಗಿದೆ. ಗ್ರಾಹಕರೊಂದಿಗೆ ಉತ್ತಮವಾಗಿ ವ್ಯವಹರಿಸುವ ನಿಟ್ಟಿನಲ್ಲಿ ನೌಕರರಿಗೆ ವ್ಯಕ್ತಿತ್ವ ವಿಕಸನ ತರಬೇತಿ ನೀಡಿ ಗ್ರಾಹಕಸ್ನೇಹಿಯಾಗಿ ಕೆಲಸ ಮಾಡಲು ಇಲಾಖೆಯ ಸಿಬ್ಬಂಧಿಗಳನ್ನು ಸಜ್ಜುಗೊಳಿಸಲಾಗಿದೆ. ಗ್ರಾಹಕರ ದೂರುಗಳನ್ನು ನಿರ್ವಹಿಸಲು ೨೪*೭ ಸೇವಾಕೇಂದ್ರ ಹಾಗೂ ಶುಲ್ಕರಹಿತವಾದ೧೯೧೨ ದೂರವಾಣಿ ಸಂಖ್ಯೆಗೆ ಕರೆ ಮಾಡುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಕೃಷ್ಣ ಸಭೆಗೆ ಮಾಹಿತಿ ನೀಡಿದರು.

ಸೆಸ್ಕ್ ನಗರ ವಿಭಾಗದ ಸಹಾಯಕ ಎಂಜಿನಿಯರ್ ಮನುಕುಮಾರ್ ಮಾತನಾಡಿ ರೈತಬಾಂಧವರ ಪಂಪ್ ಸೆಟ್ಟುಗಳಿಗೆ ಹಗಲಿನ ವೇಳೆಯಲ್ಲಿ ೭ಗಂಟೆಗಳ ಕಾಲ ನಿರಂತರವಾಗಿ ಗುಣಮಟ್ಟದ ವಿದ್ಯುತ್ ನೀಡುವ ಎನ್.ಜೆ.ವೈ ಯೋಜನೆಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲಾಗಿದೆ. ವಿದ್ಯುತ್ ಅಪಘಾತಗಳನ್ನು ತಡೆಗಟ್ಟಲು ವಿದ್ಯುತ್ ಸುರಕ್ಷತಾ ಕ್ರಮಗಳ ಬಗ್ಗೆ ಗ್ರಾಹಕರಿಗೆ ಅರಿವು ಮೂಡಿಸಲಾಗುತ್ತಿದೆ. ಗ್ರಾಹಕರಿಗೆ ಸಮರ್ಥ ಸೇವೆಯನ್ನು ನೀಡಲು ಸಕಾಲ ಸೇವಾ ಕೌಂಟರ್ ಮತ್ತು ಸೌಜನ್ಯ ಕೌಂಟರ್ ಗಳನ್ನು ತೆರೆದು ಗುಣಮಟ್ಟದ ಸೇವೆ ನೀಡುವ ಜೊತೆಗೆ ಗ್ರಾಹಕರ ದೂರುಗಳಿಗೆ ತಕ್ಷಣದಲ್ಲಿಯೇ ಸ್ಪಂದಿಸಿ ಗ್ರಾಹಕ ಸ್ನೇಹಿಯಾಗಿದೆ ಎಂದು ಅಭಿಮಾನದಿಂದ ಹೇಳಿದರು ..

ಈ ಸಂದರ್ಭದಲ್ಲಿ ಸಕಾಲದಲ್ಲಿ ವಿದ್ಯುತ್ ಬಿಲ್ ಪಾವತಿಸುವ ಗ್ರಾಹಕರು ಹಾಗೂ ಇಲಾಖೆಗೆ ಸಹಕಾರ ನೀಡುವ ಗ್ರಾಹಕರಾದ ಕೃಷ್ಣೇಗೌಡ, ಮಹದೇವಮ್ಮ ಬೋರೇಗೌಡ, ಚೆಲುವಯ್ಯ ಅವರನ್ನು ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ಪ್ರಶಂಸಾ ಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ನೂರಾರು ವಿದ್ಯುತ್ ಗ್ರಾಹಕರು ಹಾಗೂ ಸಾರ್ವಜನಿಕರು ವಿದ್ಯುತ್ ಸೇವೆಗಳ ಅರಿವು ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: