April 22, 2021

Bhavana Tv

Its Your Channel

ಸಚಿವ ನಾರಾಯಣಗೌಡರು ಸ್ವಾರ್ಥ ಸಾಧನೆಗಾಗಿ ಪಕ್ಷದಿಂದ ಪಕ್ಷಕ್ಕೆ ಹಾರುತ್ತಾ ಜಿಲ್ಲಾ ಉಸ್ತುವಾರಿ ಸಚಿವರಾಗಿ ದುರಾಡಳಿತ ನಡೆಸುತ್ತಿದ್ದಾರೆ – ಡಿಎಸ್೪ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಕಿಡಿ

ಮಂಡ್ಯ: ಕೆ.ಆರ್.ಪೇಟೆ ತಾಲ್ಲೂಕು ಸೇರಿದಂತೆ ಜಿಲ್ಲೆಯಲ್ಲಿ ದಲಿತರ ಸಮಸ್ಯೆಗಳು ಜ್ವಲಂತವಾಗಿವೆ. ದಲಿತರ ಕುಂದುಕೊರತೆಗಳನ್ನು ಆಲಿಸದ ಸಚಿವ ನಾರಾಯಣಗೌಡರು ಸ್ವಾರ್ಥ ಸಾಧನೆಗಾಗಿ ಪಕ್ಷದಿಂದ ಪಕ್ಷಕ್ಕೆ ಹಾರುತ್ತಾ ಜಿಲ್ಲಾ ಉಸ್ತುವಾರಿ ಸಚಿವರಾಗಿ ದುರಾಡಳಿತ ನಡೆಸುತ್ತಿದ್ದಾರೆ ಎಂದು ಡಿಎಸ್೪ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಕಿಡಿ ಕಾರಿದರು.

ಅವರು ಇಂದು ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿಯ ತಾಲ್ಲೂಕು ಶಾಖೆಗೆ ನೂತನ ಅಧ್ಯಕ್ಷರನ್ನಾಗಿ ಮಾಣಿಕನಹಳ್ಳಿ ಶಿವಣ್ಣ ಅವರನ್ನು ಆಯ್ಕೆ ಮಾಡಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ದಲಿತರು ಸಂಘಟಿತರಾಗಬೇಕು, ಅನ್ಯಾಯ ಅಕ್ರಮಗಳ ವಿರುದ್ಧ ಹೋರಾಟ ನಡೆಸಬೇಕು. ಮನುವಾಧಿ ಪಕ್ಷವಾದ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಸೇರಿದಂತೆ ಮೂರೂ ಪಕ್ಷಗಳು ರೈತರು ಹಾಗೂ ಶೋಷಿತ ಸಮುದಾಯಗಳ ಜನರನ್ನು ವಂಚಿಸಿ ಅಂಬಾನಿ, ಅದಾನಿ, ಟಾಟಾ ಬಿರ್ಲಾ ಅವರಂತಹ ಶ್ರೀಮಂತ ಉಧ್ಯಮಿಗಳ ಪದತಳಕ್ಕೆ ದೇಶವನ್ನು ಒಪ್ಪಿಸುವ ಹುನ್ನಾರ ನಡೆಸುತ್ತಿವೆ. ವಿಶ್ವಮಾನ್ಯವಾದ ಸಂವಿಧಾನವನ್ನು ದೇಶಕ್ಕೆ ಕೊಡುಗೆಯಾಗಿ ನೀಡಿರುವ ಸಂವಿಧಾನದ ಮೂಲ ಆಶಯಗಳಿಗೆ ಭಂಗ ತರಲು ಹೊರಟಿರುವ ಬಿಜೆಪಿ ಪಕ್ಷಕ್ಕೆ ಕಾರ್ಯಕರ್ತರು ಸಂಘಟಿತ ಹೋರಾಟದ ಮೂಲಕ ತಕ್ಕ ಉತ್ತರ ನೀಡಬೇಕು ಎಂದು ವೆಂಕಟಗಿರಿಯಯ್ಯ ಮನವಿ ಮಾಡಿದರು.

ದಲಿತರು, ಶೋಷಿತರು, ತುಳಿತಕ್ಕೊಳಗಾದವರಿಗೆ ಸಾಮಾಜಿಕ ನ್ಯಾಯಕೊಡಿಸಲು ಕೆ.ಆರ್.ಪೇಟೆಯ ಡಿಎಸ್೪ ಘಟಕದ ಕಾರ್ಯಕರ್ತರು ಸಂಘಟಿತ ಹೋರಾಟ ನಡೆಸಬೇಕು ಎಂದು ವೆಂಕಟಗಿರಿಯಯ್ಯ ಮನವಿ ಮಾಡಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಶಿವಣ್ಣ, ಉಪಾಧ್ಯಕ್ಷ ಗುರುವ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಸ್ವಾಮಿ ಅವರನ್ನು ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಮತ್ತು ಜಿಲ್ಲಾಧ್ಯಕ್ಷ ವೆಂಕಟೇಶ್ ಅಭಿನಂದಿಸಿ ಗೌರವಿಸಿದರು..

ನೂರಾರು ಡಿಎಸ್೪ ಸಂಘಟನೆಯ ಕಾರ್ಯಕರ್ತರು ಸಮಾರಂಭದಲ್ಲಿ ಭಾಗವಹಿಸಿದ್ದರು..

ವರದಿ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ.

error: