
ಮಂಡ್ಯ: ಸೊಸೆಯೊಂದಿಗೆ ಅನೈತಿಕ ಸಂಬOಧ ಹೊಂದಿರುವುದನ್ನು ಪ್ರಶ್ನಿಸಿದ್ದಕ್ಕೆ ವ್ಯಕ್ತಿಯೊಬ್ಬ ಮಹಿಳೆಯೊಬ್ಬರನ್ನು ಕೊಡಲಿಯಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ಶೀಳನೆರೆ ಹೋಬಳಿಯ ಹುಣಸನಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ . ಹುಣಸನಹಳ್ಳಿ ಗ್ರಾಮದ ಕಾಳಯ್ಯ ಅವರ ಪತ್ನಿ ದೊಡ್ಡತಾಯಮ್ಮ(೫೫) ಕೊಲೆಯಾದ ಮಹಿಳೆಯಾಗಿದ್ದಾರೆ. ಅದೇ ಗ್ರಾಮದ ಕುಮಾರ್ ಅವರ ಮಗ ವಾಸು(೩೦) ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ.
ಮೃತ ದೊಡ್ಡತಾಯಮ್ಮ ಅವರ ಸೊಸೆಯೊಂದಿಗೆ ವಾಸು ಅನೈತಿಕ ಸಂಬAಧ ಹೊಂದಿದ್ದನು ಎಂದು ಹೇಳಲಾಗಿದೆ ಇದನ್ನು ವಿರೋಧಿಸಿ ಮನೆಗೆ ಬರಬೇಡ ಎಂದು ವಾಸು ಅವರಿಗೆ ಹಲವು ಭಾರಿ ತಿಳುವಳಿಕೆ ನೀಡಿದ್ದರು. ಇದರಿಂದ ಆರೋಪಿ ವಾಸು ತನ್ನ ಅನೈತಿಕ ಸಂಬAಧಕ್ಕೆ ಅಡ್ಡಿಯಾಗಿರುವ ದೊಡ್ಡತಾಯಮ್ಮ ಅವರನ್ನು ಮಂಗಳವಾರ ರಾತ್ರಿ ಸುಮಾರು ೮ಗಂಟೆ ಸಮಯದಲ್ಲಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಘಟನಾ ಸ್ಥಳಕ್ಕೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅಶ್ವಿನಿ, ನಾಗಮಂಗಲ ಡಿವೈಎಸ್ ಪಿ ನವೀನ್ ಕುಮಾರ್, ಸಿಪಿಐ ಎಂ.ಕೆ. ದೀಪಕ್, ಸಬ್ ಇನ್ಸ್ ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ ಅವರು ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನೆ ಕುರಿತು ಕೆ.ಆರ್.ಪೇಟೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ವಾಸು ಪತ್ತೆಗೆ ಪೊಲೀಸರು ವ್ಯಾಪಕ ಶೋಧ ಕಾರ್ಯ ಕೈಗೊಂಡಿದ್ದಾರೆ.
ವರದಿ: ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ. ಮಂಡ್ಯ.
More Stories
ಕೆ.ಆರ್.ಪೇಟೆ ಪುರಸಭೆ ಅಧ್ಯಕ್ಷರಾಗಿ ಮಹದೇವಿನಂಜುoಡ, ಉಪಾಧ್ಯಕ್ಷೆ ಗಾಯತ್ರಿ ಆಯ್ಕೆ ಕ್ರಮಬದ್ಧ- ರಾಜ್ಯ ಉಚ್ಛ ನ್ಯಾಯಾಲಯದ ತೀರ್ಪು.
ಕೆ.ಆರ್.ಪೇಟೆ ಪಟ್ಟಣದಲ್ಲಿ ಶ್ರೀರಾಮನವಮಿಯ ಸಂಭ್ರಮ, ಮೊಳಗಿದ ರಾಮನಾಮ, ಶ್ರೀ ರಾಮ ಭಜನೆ ಮಾಡಿ ಸಂಭ್ರಮಿಸಿದ ಭಕ್ತವೃಂದ
ನಾಗಮಂಗಲದಲ್ಲಿ ಉಲ್ಬಣಗೊಂಡ ಕೊರೋನಾ: ಮೈಮರೆತ ಜನತೆ: ಅಧಿಕಾರಿಗಳ ಆತಂಕ