
ಮಂಡ್ಯ: ನಾಗಮಂಗಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಾಲೂಕಿನ ಶಾಸಕ ಸುರೇಶ್ ಗೌಡ ನಿಷ್ಕ್ರಿಯ ಕಾರ್ಯವೈಖರಿ ಕುರಿತು ಇಂದು ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಶಾಸಕರ ವಿರುದ್ಧ ಘೋಷಣೆ ಕೂಗಿದರು
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸತೀಶ್ ಹಾಗೂ ತಹಸೀಲ್ದಾರ್ ಕುಂಞ ಅಹಮದ್ ಅವರಿಗೆ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಮನವಿ ಪತ್ರ ಸಲ್ಲಿಸಲಾಯಿತು
ಮಾರ್ಕೋನಹಳ್ಳಿ ಗ್ರಾಮದಿಂದ ೧೨೮ ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ ಸ್ಥಗಿತಗೊಂಡಿರುವುದು ನಾಗಮಂಗಲ ಶ್ರಾವಣಬೆಳಗೊಳ ಮುಖ್ಯ ರಸ್ತೆ ಕಾಮಗಾರಿ ಸ್ಥಗಿತಗೊಂಡಿರುವುದು ಬಿಂಡಿಗನವಿಲೆ ಹೋಬಳಿ ಕದಬಹಳ್ಳಿ ಗ್ರಾಮದಿಂದ ಶಿಖರಹಳ್ಳಿ ರಸ್ತೆ ಕಾಮಗಾರಿ ಸ್ಥಗಿತಗೊಂಡಿರುವುದು ಹಾಗೂ ಬಿಂಡಿಗನವಿಲೆ ಹೋಬಳಿಯ ಗ್ರಾಮಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಹಿಂದಿನ ಶಾಸಕರು ಅನುಮೋದೆ ಯಾಗಿದ್ದರು ಕಾರ್ಯರೂಪಕ್ಕೆ ತರದೆ ಕಾಮಗಾರಿ ಸ್ಥಗಿತಗೊಂಡಿರುವುದು
ಪಾಲಅಗ್ರಹಾರ ದಿಂದ ಕೋಟೆ ಬೆಟ್ಟ ರಸ್ತೆ ಕಳಪೆ ಕಾಮಗಾರಿ .ರೈತರ ಬೆಳೆಗಳಿಗೆ ವಿದ್ಯುತ್ ಸಂಪರ್ಕ ಕೊರತೆ ಹಾಗೂ ನಾಗಮಂಗಲ ತಾಲೂಕಿನಲ್ಲಿ ಶಾಸಕರು ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ ವಹಿಸಿರುವುದರ ಕುರಿತು ಎಂದು ಪ್ರತಿಭಟನೆ ನಡೆಸಲಾಯಿತು
ಪ್ರತಿಭಟನೆಯಲ್ಲಿ ಜಿಲ್ಲಾ ಮಟ್ಟದ ಕಾಂಗ್ರೆಸ್ ಮುಖಂಡರು ಹಾಗೂ ತಾಲೂಕು ಮಟ್ಟದ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು
More Stories
ಕೆ.ಆರ್.ಪೇಟೆ ಪುರಸಭೆ ಅಧ್ಯಕ್ಷರಾಗಿ ಮಹದೇವಿನಂಜುoಡ, ಉಪಾಧ್ಯಕ್ಷೆ ಗಾಯತ್ರಿ ಆಯ್ಕೆ ಕ್ರಮಬದ್ಧ- ರಾಜ್ಯ ಉಚ್ಛ ನ್ಯಾಯಾಲಯದ ತೀರ್ಪು.
ಕೆ.ಆರ್.ಪೇಟೆ ಪಟ್ಟಣದಲ್ಲಿ ಶ್ರೀರಾಮನವಮಿಯ ಸಂಭ್ರಮ, ಮೊಳಗಿದ ರಾಮನಾಮ, ಶ್ರೀ ರಾಮ ಭಜನೆ ಮಾಡಿ ಸಂಭ್ರಮಿಸಿದ ಭಕ್ತವೃಂದ
ನಾಗಮಂಗಲದಲ್ಲಿ ಉಲ್ಬಣಗೊಂಡ ಕೊರೋನಾ: ಮೈಮರೆತ ಜನತೆ: ಅಧಿಕಾರಿಗಳ ಆತಂಕ