April 20, 2024

Bhavana Tv

Its Your Channel

ಚೆಸ್ಕಾಂ ಇಂಜಿನಿಯರ್ ರಕ್ಷಣೆಗೆ ಮುಂದಾದ ಶಾಸಕ ಸುರೇಶ್ ಗೌಡ ನಡೆಯ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನ

ನಾಗಮಂಗಲ: ತಾಲೂಕಿನ ನಿರಂತರ ಜ್ಯೋತಿ ಯೋಜನೆಯಲ್ಲಿ ಬಾರಿ ಅಕ್ರಮ ನಡೆದಿದ್ದು ಪ್ರತಿ ಮನೆಗೆ ೫೦೦೦ ಸಾವಿರ ಲಂಚ ಪಡೆದ ಬಗ್ಗೆ ರೈತರು ಬಹಿರಂಗ ಆರೋಪ ಮಾಡಿದರೂ ಚೆಸ್ಕಾಂ ಇಂಜಿನಿಯರ್ ರಕ್ಷಣೆಗೆ ಮುಂದಾದ ಶಾಸಕ ಸುರೇಶ್ ಗೌಡ ನಡೆಯ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ಇಂಜಿನಿಯರ್ ಓರ್ವ ಶಾಸಕರ ವಿರುದ್ಧವೇ ವರ್ಗಾವಣೆ ಆರೋಪ ಮಾಡಿದ ಬೆಳವಣಿಗೆಯಲ್ಲಿ ಸಭೆ ಗದ್ದಲದಲ್ಲಿ ಮುಳುಗಿ ಅರ್ಧಕ್ಕೆ ಮೊಟಕುಗೂಂಡ ಘಟನೆ ನಡೆಯಿತು. ನಾಗಮಂಗಲದ ಚೆಸ್ಕಾಂ ಸಭಾಂಗಣದಲ್ಲಿ ಶಾಸಕ ಸುರೇಶ್ ಗೌಡರ ಅಧ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕರ ಕುಂದು-ಕೊರತೆ ಸಭೆಯಲ್ಲಿ ಚೆಸ್ಕಾಂ ಬ್ರಹ್ಮಾಂಡ ಭ್ರಷ್ಟಾಚಾರ ಅನಾವರಣ ಗೊಂಡಿದೆ.

ತಾಲ್ಲೂಕಿನ ಗೊಂಡೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕದಬಹಳ್ಳಿ ವೃತ್ತದ ಎಇ ನವೀನ್ ಎಂಬ ಅಧಿಕಾರಿ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ನೀಡಲು ಪ್ರತಿ ಮನೆಗೆ ೫೦೦೦ ಸಾವಿರ ಲಂಚ ಪಡೆದು ಕೆಲಸ ಅರ್ಧಕ್ಕೆ ಬಿಟ್ಟಿದ್ದಾರೆ ಎಂದು ಸಭೆಯಲ್ಲಿ ರೈತರು ಗಂಭೀರ ಆರೋಪ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಅಪ್ಪಾಜಿಗೌಡ, ಚೆಸ್ಕಾಂ ಮೈಸೂರು ವಿಭಾಗದ ಸಿಇ ರಮೇಶ್ ಬಂಡಿಗೇರಿ ಮತ್ತು ಮಂಡ್ಯ ಜಿಲ್ಲೆ ಅಧೀಕ್ಷಕ ಇಂಜಿನಿಯರ್ ಸ್ವಾಮಿ ಎದುರಲ್ಲೇ ಬಹಿರಂಗವಾದ ಈ ಅಕ್ರಮದ ..ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಶಾಸಕರು ನಾಳೆಯೇ ವಸೂಲಿ ಮಾಡಿರುವ. ಹಣ ರೈತರಿಗೆ ವಾಪಸ್ ಕೊಟ್ಟು ಬಾಕಿ ಕೆಲಸ ಮುಗಿಸುವಂತೆ ಇಂಜಿನಿಯರ್‌ಗೆ ತಾಕೀತು ಮಾಡಿದರು.

ಶಾಸಕರ ಈ ನಡೆ ಸಭೆಯಲ್ಲಿದ್ದ ಸಾರ್ವಜನಿಕರಲ್ಲಿ. ಅನುಮಾನದ ಗುಸು ಗುಸು ಮಾತಿಗೆ ಮತ್ತು ಸಮಾಧಾನಕ್ಕೆ ಕಾರಣವಾಯಿತು. ಇನ್ನು. ತಾಲ್ಲೂಕಿನ ಬೆಳ್ಳೂರು ಹೂಬಳಿ ಸೇರಿದಂತೆ ವಿವಿಧ ಹಳ್ಳಿಗಳಿಗೆ ಸಮರ್ಪಕ ವಿದ್ಯುತ್ ನೀಡುತ್ತಿಲ್ಲ ಹಾಗು ಟ್ರಾನ್ಸ್ ಫಾರ್ಮ್ ರಿಪೇರಿಗೆ ಹಣ ವಸೂಲಿ, ಗಂಗಾಕಲ್ಯಾಣ ಬೋರ್‌ಗೆ ವಿದ್ಯುತ್ ಸಂಪರ್ಕ ನೀಡಿದೆ ಬಗ್ಗೆ. ಕೇಳಿಬಂದ ದೂರುಗಳಿಗೆ ಹಾಗೂ ಇಲಾಖೆ ಅನುದಾನ ಬಳಕೆ ಕುರಿತು ಸದನಕ್ಕೆ ತಪ್ಪು ಮಾಹಿತಿ ನೀಡಿದ ಎಇಇ ಮರಿಸ್ವಾಮಿ ಮತ್ತು ಅಧಿಕಾರಿಗಳ ವಿರುದ್ಧ ಎಂಎಲ್ಸಿ ಅಪ್ಪಾಜಿ ಗೌಡ ತರಾಟೆ ತೆಗೆದುಕೊಂಡರು.

ಈ ವೇಳೆ ಬೆಳ್ಳೂರು ಉಪವಿಭಾಗದ ಜೆಇ ವೇಣುಗೋಪಾಲ್ ನನ್ನನ್ನು ಶಾಸಕರು ವರ್ಗಾವಣೆ ಮಾಡಿಸ್ತಾರಂತೆ ಎಂಬ ನೇರ ಆರೋಪ ಮಾಡಿದರು. ಅಧಿಕಾರಿಯ ಆರೋಪಕ್ಕೆ ಶಾಸಕ ಸುರೇಶ್ ಗೌಡ ಇದು ನನ್ನ ಗಮನಕ್ಕೆ ಇಲ್ಲ ಯಾವ ಆಧಾರದ ಮೇಲೇ ನನ್ನ ವಿರುದ್ಧ ಆರೋಪ ಮಾಡಲು ಎಷ್ಟು ಧೈರ್ಯ ಎಂದು ಕೆಂಡಾಮAಡಲವಾದರು.
ಶಾಸಕರನ್ನು ಎಂಎಲ್ಸಿ ಅಪ್ಪಾಜಿಗೌಡರು ಸಮಾಧಾನ ಪಡಿಸಿದರೂ ಇಂಜಿನಿಯರ್ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರ ದೂರಿನ ಸುರಿಮಳೆ ಗೈದ ಕುಡಿಯುವ ನೀರಿಗೂ ಸಮರ್ಪಕ ವಿದ್ಯುತ್ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಭೆ ಗೊಂದಲ ಗದ್ದಲಕ್ಕೀಡಾದ್ದರಿಂದ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದ ಶಾಸಕ ಸುರೇಶ್ ಗೌಡ. ಅಧಿಕಾರಿಗಳೊಂದಿಗೆ ಗೌಪ್ಯ ಸಭೆಗೆ ಮುಂದಾದರು

ಈಗಾಗಲೇ ನಾಗಮಂಗಲದಲ್ಲಿ ಲಂಚಾವತಾರ ತಾಂಡವವಾಡುತ್ತಿದೆ ಎಂದು ಸ್ವಪಕ್ಷ ದ ಮಾಜಿ ಸಂಸದ ಶಿವರಾಮೇಗೌಡ ಹಾಗೂ ಕೆಆರೆಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಮಾಡಿರುವ ಆರೋಪಗಳು ಮಾಸುವ ಮುನ್ನವೇ ಚೆಸ್ಕಾಂ ಭ್ರಷ್ಟಾಚಾರ ಅನಾವರಣ, ಭ್ರಷ್ಟ ಇಂಜಿನಿಯರ್ ರಕ್ಷಣೆಗೆ ಮುಂದಾದ ಶಾಸಕ ಸುರೇಶ್ ಗೌಡ ನಡೆ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

error: