April 22, 2021

Bhavana Tv

Its Your Channel

ಚಲನಚಿತ್ರ ನಟ, ಸಾಹಸಸಿಂಹ ಡಾ.ವಿಷ್ಣುವರ್ಧನ್ ೧೧ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ವಿಷ್ಣು ಉತ್ಸವ ಕಾರ್ಯಕ್ರಮ

ಮಂಡ್ಯ: ಜಿಲ್ಲೆಯ ಕೆ ಆರ್ ಪೇಟೆ ತಾಲೂಕು ದಡದಹಳ್ಳಿ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಚಲನಚಿತ್ರ ನಟ,ಸಾಹಸಸಿಂಹ ಡಾ.ವಿಷ್ಣುವರ್ಧನ್ ೧೧ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ವಿಷ್ಣು ಉತ್ಸವ ಕಾರ್ಯಕ್ರಮ ನಡೆಯಿತು.

ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರರಾದ ಎ.ಆರ್.ರಘು ಅವರು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ರಘು ಅವರು ವಿಷ್ಣು ವರ್ಧನ್ ಅವರು ಮಂಡ್ಯ ಜಿಲ್ಲೆಯ ಹಲಗೂರಿನವರು ಎನ್ನುವುದು ಮಂಡ್ಯ ಜಿಲ್ಲೆಯ ನಮಗೆ ಹೆಮ್ಮೆಯ ವಿಚಾರವಾಗಿದೆ. ವಿಷ್ಣುವರ್ಧನ್ ಅವರ ಪ್ರತಿಯೊಂದು ಸಿನಿಮಾಗಳು ಸಮಾಜ ಉತ್ತಮ ಸಂದೇಶವನ್ನು ಸಾರುವ ಕುಟುಂಬ ಸಮೇತರಾಗಿ ನೋಡಬೇಕೆನಿಸುವ ಉತ್ತಮ ಚಿತ್ರಗಳಾಗಿದ್ದವು ಇಂತಹ ನಾಯಕ ನಟ ಕೇವಲ ೫೯ವರ್ಷ ಮಾತ್ರ ಬದುಕಿದ್ದರು. ಇವರ ಸರಳ ವ್ಯಕ್ತಿತ್ವ, ಸ್ನೇಹಗುಣ ಮತ್ತಿತರರ ಆದರ್ಶ ಗುಣಗಳನ್ನು ಯುವ ಜನತೆ ಪಾಲಿಸಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದು ರಘು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಡಿಎಸ್ ಯುವ ಪ್ರಧಾನ ಕಾರ್ಯದರ್ಶಿ ಅಶ್ವಿನ್ ಗೌಡ ಮಾತನಾಡಿ ವಿಷ್ಟುವರ್ದನ್ ರವರು ಕನ್ನಡ ಚಿತ್ರರಂಗದ ಮರೆಯಲಾಗದ ಮಾಣಿಕ್ಯ ಎಂದರೇ ತಪ್ಪಾಗಲಾರದು ಅದೇ ರೀತಿ ಇಂದಿಗೂ ವಿಷ್ಣುವರ್ಧನ್‌ರವರ ಆದರ್ಶಗಳನ್ನು ರೂಢಿಸಿಕೊಂಡು ಸಾಕಷ್ಟು ಜನರು ಜೀವನ ನಡೆಸುತ್ತಿದ್ದಾರೆ.. ವಿಷ್ಣುವರ್ಧನ್ ರವರನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ಅನಾಥವಾಗಿದೆ ಎಂದರು.
ಅಲ್ಲದೆ ರಾಜ್ಯದಲ್ಲಿ ಕೊರೋನಾ ಮತ್ತೆ ಹೆಚ್ಚಾಗುತ್ತಿದ್ದು ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡುವ ಜೊತೆಗೆ ಮಾಸ್ಕ್ ಹಾಕಬೇಕು. ಆಗಾಗ್ಗೆ ಸ್ಯಾನಿಟೈಸರ್ ಬಳಕೆಯನ್ನು ಕಡ್ಡಾಯವಾಗಿ ಮಾಡಿ ಕೊರೋನಾ ಸೋಂಕಿನಿAದ ದೂರವಿರಬೇಕು ಎಂದು ಮನವಿ ಮಾಡಿದರು.
ಮುಂದಿನ ದಿನಗಳಲ್ಲಿ ನಮ್ಮ ತಾಲ್ಲೂಕಿನ ಪ್ರತಿ ಹಳ್ಳಿ ಹಳ್ಳಿಗಳಲ್ಲಿಯೂ, ಕ್ರೀಡಾ ಚಟುವಟಿಕೆ ಕಾರ್ಯಕ್ರಮ, ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ, ಮನರಂಜನಾ ಕಾರ್ಯಕ್ರಮ ಪೌರಾಣಿಕ ನಾಟಕಗಳನ್ನು ಯುವಕರು ಹಾಗೂ ಗ್ರಾಮಸ್ಥರು ಹಮ್ಮಿಕೊಂಡರೆ ನಾನು ನನ್ನ ಕೈಲಾದ ಸಹಾಯ ನಾನು ಮಾಡುತ್ತೇನೆ ಎಂದು ಅಶ್ವಿನ್ ಗೌಡ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತಾಲ್ಲೂಕು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ವಿ ಎಸ್ ಧನಂಜಯಕುಮಾರ್ ಮಾತನಾಡಿ ಯುವಕರು ಮೊಬೈಲ್ ಗೀಳಿಗೆ ಬಲಿಯಾಗಬಾರದು, ಮಹಿಳೆಯರು ಧಾರಾವಾಹಿಗಳಿಗೆ ಅಂಟಿಕೊಳ್ಳಬಾರದು, ಅಂದರೆ ಮೊಬೈಲ್ ಮತ್ತು ಧಾರಾವಾಹಿ ಬೇಡವೇ ಬೇಡಾ ಅಂತ ಅಲ್ಲ ಎಷ್ಟು ಬೇಕೋ ಮಾತ್ರ ಉಪಯೋಗಿಸಬೇಕು ಉಳಿದಂತೆ ಇಂತಹ ಸಾರ್ವಜನಿಕ ಉಪಯುಕ್ತ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ನೈಸರ್ಗಿಕ ಮನರಂಜನೆ ಪಡೆದುಕೊಳ್ಳಬೇಕು. ಯಾವಾಗಲು ಟಿವಿ, ಮೊಬೈಲ್ ನೋಡುವುದರಿಂದ ಕಣ್ಣಿಗೆ ಹಾನಿಯಾಗಬಹುದು ಆದರೆ ಸಾರ್ವಜನಿಕ ಮನರಂಜನಾ ಕಾರ್ಯಕ್ರಮದಿಂದ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ವಿಷ್ಣುವರ್ಧನ್, ಅಂಬರೀಶ್, ಡಾ.ರಾಜ್ ಕುಮಾರ್ ಅವರಂತಹ ಅತ್ಯುತ್ತಮ ನಟರ ಉತ್ತಮ ಗುಣಗಳನ್ನು ಯುವಕರು ರೂಢಿಸಿಕೊಳ್ಳಬೇಕು. ಉತ್ತಮ ಚಲನಚಿತ್ರಗಳಲ್ಲಿ ಬರುವ ಸಾಮಾಜಿಕ ಪರಿವರ್ತನೆಯ ಸಂದೇಶಗಳನ್ನು ರೂಢಿಸಿಕೊಂಡು ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು. ಜೊತೆಗೆ ವಿಧ್ಯಾಭ್ಯಾಸವನ್ನು ಮಾತ್ರ ಮರೆಯಬಾರದು. ಒಳ್ಳೆಯ ಶಿಕ್ಷಣ ಪಡೆದು ಉತ್ತಮ ನೌಕರಿ ಪಡೆದು ಸಮಾಜ ಗುರುತಿಸುವಂತಹ ವ್ಯಕ್ತಿಗಳಾಗಿ ನಿಮ್ಮ ಗ್ರಾಮಕ್ಕೆ ಹಾಗೂ ತಂದೆ ತಾಯಿಗಳಿಗೆ ಕೀರ್ತಿ ತರಬೇಕು ಎಂದು ಧನಂಜಯಕುಮಾರ್ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮೂರು ಮತ್ತೊಂದು ಚಲನಚಿತ್ರದ ಉದಯೋನ್ಮುಖ ನಾಯಕ ನಟರಾದ ಮಣೀಸ್ ರಾಜ್ , ನಾಯಕ ನಟಿ ಮಮತಾ, ಹಿಟ್ಲರ್ ಚಲನಚಿತ್ರ ನಾಯಕ ನಟ ಲೋಹಿತ್, ತಾಲ್ಲೂಕು ವಿಷ್ಣುಸೇನಾ ಸಂಘಟನೆಯ ಅಧ್ಯಕ್ಷರಾದ ರಾಜು , ಮೊಹಮ್ಮದ್ ಅಜರುದ್ದೀನ್ ಅಕ್ಕಿಹೆಬ್ಬಾಳು, ರಾಕೇಶ್, ಧರ್ಮರಾಜ್, ನಿಶಾಂತ್, ಕೆಂಪರಾಜು, ರಾಜು,ಕುಮಾರ್, ಸ್ವಾಮಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಅಣ್ಣಯ್ಯ, ಎ.ಜೆ.ಕುಮಾರ್, ದಡದಹಳ್ಳಿ ರಿಹಾನ್ ಬೇಗ್, ಅತೀಕ್, ವಾಸು, ಆರ್.ಶ್ರೀನಿವಾಸ್ ಸಜ್ಜನ್, ಸೊಸೈಟಿ ಅಧ್ಯಕ್ಷ ಕುಮಾರ್, ಉದ್ಯಮಿ ಇಂತಿಯಾಜ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಇದೇ ಸಂದರ್ಭದಲ್ಲಿ ಗಣ್ಯರನ್ನು ವಿಷ್ಣುಸೇನಾ ಸಂಘಟನೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿಯ ನೀತು ಮೆಲೋಡೀಸ್ ತಂಡದ ಸದಸ್ಯರುವ ವಿಷ್ಣುವರ್ಧನ್ ಚಲನಚಿತ್ರಗಳ ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ವರದಿ: ಮೊಹಮ್ಮದ್ ಅಜರುದ್ದೀನ್ ಅಕ್ಕಿಹೆಬ್ಬಾಳು

error: