April 19, 2024

Bhavana Tv

Its Your Channel

ಸಾರಿಗೆ ನೌಕರರ ೬ ನೇ ವೇತನ ಆಯೋಗದ ಬೇಡಿಕೆ ನ್ಯಾಯ ಸಮ್ಮತವಾಗಿದೆ; ಬಿಎಸ್ಪಿ ರಾಜ್ಯಾಧ್ಯಕ್ಷ ಡಾ.ಎಂ.ಕೃಷ್ಣಮೂರ್ತಿ

ನಾಗಮಂಗಲ : ರಾಜ್ಯ ಸಾರಿಗೆ ನೌಕರರ ೬ನೇ ವೇತನ ಆಯೋಗದ ನ್ಯಾಯ ಸಮ್ಮತ ಬೇಡಿಕೆಯನ್ನು ಈಡೇರಿಸುವ ಬದಲು ಕೆಎಸ್‌ಆರ್‌ಟಿಸಿ ನೌಕರರ ಹೋರಾಟವನ್ನೇ ರಾಜ್ಯ ಬಿಜೆಪಿ ಸರ್ಕಾರ ಹತ್ತಿಕ್ಕಲು ಹೊರಟಿರುವುದು. ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಡಾ.ಎಂ.ಕೃಷ್ಣಮೂರ್ತಿ ಸಿಎಂ.ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಾಗಮಂಗಲದಲ್ಲಿ ನಡೆದ ಬಹುಜನ ಸಮಾಜ ಪಕ್ಷದ ಸಂಸ್ಥಾಪಕ, ರಾಜಕೀಯ ತಜ್ಞ ಕಾನ್ಷೀರಾಂಜೀ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಬಹುಜನರ ಐಕ್ಯತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜ್ಯದಲ್ಲಿ ಉಪಚುನಾವಣೆಗಳಿಗೆ ತೋರುತ್ತಿರುವ ಆಸಕ್ತಿಯನ್ನ ಸಾರಿಗೆ ನೌಕರರ ಬೇಡಿಕೆ ಹಾಗೂ ಬೆಲೆ ಏರಿಕೆ ಸಮಸ್ಯೆ ಗಳಿಗೆ ತೊರದ ಬಿಜೆಪಿ ಸರ್ಕಾರ ದೇಶವನ್ನು ಖಾಸಗಿಯವರಿಗೆ ಮಾರಲು ಹೊರಟಿದೆ ಎಂದು ಆರೋಪಿಸಿದರು ಸಾರಿಗೆ ನೌಕರರ ಮುಷ್ಕರ ದಿಂದ ರಾಜ್ಯದಲ್ಲಿ ಜನಸಾಮಾನ್ಯರು ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ

ದೇಶದಲ್ಲಿ ಶೋಷಿತ ವರ್ಗಗಳ ಜನರನ್ನ ಬಡತನಕ್ಕೆ ದೂಡಿ ಗುಲಾಮರನ್ನಾಗಿಸುವ ಜನವಿರೋಧಿ ಆಡಳಿತ ಮಾಡುತ್ತಿರುವ ಬಿಜೆಪಿ ಸರ್ಕಾರ ಕಾರ್ಮಿಕರ ವಿರೋಧಿಯಾಗಿದ್ದು ಉಪಚುನಾವಣೆ ಅಧಿಕಾರವೇ ಮುಖ್ಯ ವಾಗಿದೆ ಎಂದು ಕಿಡಿಕಾರಿದರು. ಕೆಎಸ್‌ಆರ್‌ಟಿಸಿ ನೌಕರರ ಹೋರಾಟಕ್ಕೆ ಬಿಎಸ್ಪಿ ಬೆಂಬಲ ವಾಗಿದೆ ಸಿಎಂ ಯಡಿಯೂರಪ್ಪ ಕೂಡಲೇ ತಾವೇ ಕೊಟ್ಟ ಭರವಸೆಯಂತೆ ಮುಷ್ಕರ ನಿರತ ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ಹಾಗೂ ಕಾನ್ಷೀರಾಂಜೀ ಮನುವಾದಿಗಳ ಕುತಂತ್ರ ಅರಿತು ಒಡೆದ ಸಮಾಜವನ್ನ ಆಳುವ ಸಮಾಜವನ್ನಾಗಿಸಲು ಅಂಬೇಡ್ಕರ್ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಬಿಎಸ್ಪಿ ಮೂಲಕ ಯಶಸ್ವಿ ರಾಜಕಾರಣ ಮಾಡಿ ಶೋಷಿತ ವರ್ಗಗಳಿಗೆ ಆಶಾಕಿರಣ ವಾಗಿದ್ದಾರೆ ಚುನಾವಣೆ ಬಂದಾಗ ಹಣ ಹೆಂಡಕ್ಕೆ ಮತ ಮಾಡಿಕೊಳ್ಳದೆ ಅವರ ತತ್ವ ಸಿದ್ದಾಂತ ಗಳಿಗೆ ಬದ್ಧರಾಗಿ ನಡೆಯೋಣ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬಿಎಸ್ಪಿ ಜಿಲ್ಲಾ ಸಂಯೋಜಕ ಕೆ ಹೆಚ್ ಮಹದೇವ, ತಾಲ್ಲೂಕು ಅಧ್ಯಕ್ಷ ಮುಳುಕಟ್ಟೆ ಚಂದ್ರು, ಮುಖಂಡರಾದ ಲೋಕೇಶ್, ಕುಮಾರ್, ವಿಜಿ ಸುರೇಶ್ ಮುಂತಾದವರು ಉಪಸ್ಥಿತರಿದ್ದರು.

error: