April 26, 2024

Bhavana Tv

Its Your Channel

ನಾಗಮಂಗಲ ತಾಲ್ಲೂಕು ಆಡಳಿತ ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಜನ್ಮ ದಿನ ಜಯಂತಿ ಕಾರ್ಯಕ್ರಮ

ನಾಗಮಂಗಲ ತಾಲ್ಲೂಕು ಆಡಳಿತ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ರವರ. ಪ್ರತಿಮೆಗೆ. ಮಾಲಾರ್ಪಣೆ. ಮಾಡುವ ಮೂಲಕ. ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಜನ್ಮ ದಿನ ಜಯಂತಿ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಚರಿಸಲಾಯಿತು.

ನಾಗಮಂಗಲ ; ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಸುರೇಶ್ ಗೌಡ ಅಂಬೇಡ್ಕರ್ ಯಾವುದೇ ಒಂದು ಸಮಾಜದ ಆಸ್ತಿಯಲ್ಲ. ಶೋಷಿತ ವರ್ಗಗಳ ಏಳಿಗೆಗಾಗಿ ಹೋರಾಟ ಮಾಡಿದವರು, ಅಂಬೇಡ್ಕರ್ ಬರೆದ ಪ್ರಜಾಪ್ರಭುತ್ವ ಸಂವಿಧಾನ ವಿಶ್ವದ ಹಲವು ದೇಶಗಳಿಗೆ ಮಾದರಿಯಾಗಿದೆ,ಮಿನಿ ವಿಧಾನಸೌಧದ ಮುಂದೆ ಅಂಬೇಡ್ಕರ್ ಪ್ರತಿಮೆ ನಾಗಮಂಗಲದಲ್ಲಿ ಇದ್ದು ಪ್ರತಿಮೆ ಪ್ರತಿಷ್ಠಾಪನೆಗೆ ದಲಿತ ಸಂಘಟನೆಗಳ ಹೋರಾಟ, ಮತ್ತು ಎದುರಾದ ಸಮಸ್ಯೆ ನಿವಾರಣೆಗೆ ಮಾಜಿ ಪ್ರಧಾನಿ ದೇವೇಗೌಡರ ಕೂಡುಗೆ ಅವಿಸ್ಮರಣೀಯ, ಈ ವಿಚಾರದಲ್ಲಿ ರಾಜಕೀಯ ಲಾಭ ಪಡೆಯೋದು ಸರಿಯಲ್ಲ , ಹಾಗೆ ಹಸಿರು ಕ್ರಾಂತಿ ಹರಿಕಾರ ಜಗಜೀವನರಾಂ ಮತ್ತು. ಅಂಬೇಡ್ಕರ್ ಮಹನೀಯರ ತತ್ವ ಸಿದ್ದಾಂತ ಗಳನ್ನ ನಾವುಗಳು ಸ್ಮರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಸಂಪನ್ಮೂಲ ವ್ಯಕ್ತಿ, ಮತ್ತು ಉಪನ್ಯಾಸಕ ಮಂಜುದಾನವ ಅಂಬೇಡ್ಕರ್ ಹೋರಾಟ ದ ಫಲವಾಗಿ ದೇಶದಲ್ಲಿ ಶೋಷಿತ ವರ್ಗಗಳಿಗೆ.ಸಂವಿಧಾನದ ಕಾರಣಕ್ಕಾಗಿ ವಿದ್ಯೆ ನೌಕರಿ, ಸ್ವಾಭಿಮಾನದ ಬದುಕು ಸಿಕ್ಕಿದೆ, ಆದರೆ ಈ ದೇಶದ ಭವಿಷ್ಯ ರೂಪಿಸಬೇಕಾದ ಯುವ ಸಮ್ಮೂಹ ಸ್ವಾರ್ಥಿಗಳಾಗಿದ್ದಾರೆ, ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು ಬಾಬು ಜಗಜೀವನರಾಂ ರವರ. ವಿದ್ಯಾರ್ಥಿ ದಿಸೆಯಲ್ಲಿ ನಾ ಹೋರಾಟದ ದಿನಗಳನ್ನ ನೆನೆದರು

ತಹಸೀಲ್ದಾರ್ ಕುಂಞ ಅಹಮ್ಮದ್ ಮಾತನಾಡಿ ಅಂಬೇಡ್ಕರ್ ಅವರು ತಮ್ಮ ಜೀವನದಲ್ಲಿ ಅನುಭವಿಸಿದ ಕಷ್ಟಗಳೇ ಅವರನ್ನು ವಿಶ್ವಮಾನವನ್ನಾಗಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಮಂಡ್ಯ ಪರಿವರ್ತನೆ ತಂಡದ ಚೆಲುವರಾಜು, ಮತ್ತು ಗಾಯಕ ಚಂದ್ರಪ್ಪ ಅಂಬೇಡ್ಕರ್ ಗೀತೆಗಳನ್ನು ಹಾಡಿದರು.
ಅಂಬೇಡ್ಕರ್ ಪ್ರತಿಮೆಗೆ ದಲಿತ ಸಂಘಟನೆ ಮುಖಂಡರು ಗಳಾದ ಮುಳುಕಟ್ಟೆ ಶಿವರಾಮಯ್ಯ, ಚಂದ್ರು, ಕಂಚಿನ ಕಟೆ, ಮೂರ್ತಿ, ಮಂಡ್ಯ ವೆಂಕಟಗಿರಿ. ಬೆಳ್ಳೂರು ವೆಂಕಟೇಶ, ಬೆಟ್ಟದ ಮಲ್ಲೇನಹಳ್ಳಿ ರಮೆಶ್, ಪುಟ್ಟರಾಜು ಅಂದೇನಹಳ್ಳಿ ಕಾಲೋನಿ ಯುವಕರು ಸೇರಿದಂತೆ ನೂರಾರು ಮಂದಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷ ದಾಸೇಗೌಡ, ಪುರಸಭೆ ಅಧ್ಯಕ್ಷೆ ಆಶಾ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರಲಿAಗೇಗೌಡ, ಡಿವೈಎಸ್ಪಿ ನವೀನ್ ಕುಮಾರ್, ಸಿಪಿಐ ಸುಧಾಕರ್, ತಾ.ಪಂ.ಇಒ ಸತೀಶ್ ಕುಮಾರ್, ಬಿಇಒ ಜಗದೀಶ್, ಎಡಿಎಲ್ ಆರ್ ಪ್ರಮೋದ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಶಾಂತ ಇದ್ದರು.

error: