March 29, 2024

Bhavana Tv

Its Your Channel

ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ರವರ ಮಾತು ಮತ್ತು ಕೃತಿಗಳಲ್ಲಿ ಭಿನ್ನತೆ ಕಾಣದ ಕಾರಣಕ್ಕಾಗಿ ಅವರು ವಿಶ್ವದಲ್ಲಿ ಮಹಾನಾಯಕನಾಗಿ ಬೆಳೆದಿದ್ದಾರೆ – ಸಾಹಿತಿ ಕಲೀಂ ಉಲ್ಲಾ

ನಾಗಮಂಗಲ ; ಭಾರತದಲ್ಲಿ ದಲಿತ ವರ್ಗಗಳ ಮೇಲಿನ ಜಾತಿ ತಾರತಮ್ಯ ದೌರ್ಜನ್ಯ ದ ವಿರುದ್ಧ ಹೋರಾಡಿದ. ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ರವರ ಮಾತು ಮತ್ತು ಕೃತಿಗಳಲ್ಲಿ ಭಿನ್ನತೆ ಕಾಣದ ಕಾರಣಕ್ಕಾಗಿ ಅವರು ವಿಶ್ವದಲ್ಲಿ ಮಹಾನಾಯಕನಾಗಿ ಬೆಳೆದಿದ್ದಾರೆ ಎಂದು ಸಾಹಿತಿ ಕಲೀಂ ಉಲ್ಲಾ ಬಣ್ಣಿಸಿದ್ದಾರೆ.

ದೇಶದಲ್ಲಿ ಸಮಸಮಾಜ ನಿರ್ಮಾಣ ಬಯಸಿದ್ದ. ಅಂಬೇಡ್ಕರ್ ಮೌಢ್ಯಾಚರಣೆ, ಧಾರ್ಮಿಕ ಕಟ್ಟುಪಾಡುಗಳಿಂದ ಮಹಿಳೆಯರನ್ನು. ಮುಖ್ಯವಾಹಿನಿಗೆ ತರಲು ಶ್ರಮಿಸಿದರು, ಅಲ್ಲದೆ ಜಾತಿ ವ್ಯವಸ್ಥೆ ನಿರ್ಮೂಲನೆ ಗಾಗಿ ದಲಿತ ವರ್ಗಗಳಿಗೆ ನಿಗದಿಯಾಗಿದ್ದ ಉಡುಗೆ ತೊಡುಗೆ ಗಳ ಬದಲಿಸುವಂತೆ ಕರೆ ನೀಡಿದ್ದರು ದೇಶದಲ್ಲಿ ಎದುರಾಗಿರುವ ಸಮಸ್ಯೆಗಳಿಗೆ ಅಂಬೇಡ್ಕರ್ ರವರ ತತ್ವ ಸಿದ್ದಾಂತ ಗಳ ಪಾಲನೆಯಲ್ಲಿ ಪರಿಹಾರವಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಡ್ಯ ಎಸ್ಸಿ ಎಸ್ಟಿ ವೈದ್ಯರ ಸಂಘದ ಜಿಲ್ಲಾಧ್ಯಕ್ಷರಾದ ಡಾ.ರವಿಂದ್ರಮೂರ್ತಿ ಜ್ಞಾನದ ಪ್ರತೀಕವಾದ ಅಂಬೇಡ್ಕರ್ ಮತ್ತು ಅವರ ಹೋರಾಟ ಫಲವಾಗಿ ದಲಿತ ವರ್ಗದ ಜನರಿಗೆ ಹಕ್ಕು ಅಧಿಕಾರ ಗಳು ಸಿಕ್ಕಿವೆ, ಆದರೆ ಸಾಮಾಜಿಕ, ಆರ್ಥಿಕ ಅಸಮಾನತೆಯಿಂದ ಶೋಷಿತ ವರ್ಗಗಳ ಬದುಕು ದುಸ್ತರವಾಗಿದೆ, ಇಂತಹ ಮಹಾನ್ ಚೇತನಗಳ ಜಯಂತಿ, ಅವರ ತತ್ವಾದರ್ಶಗಳನ್ನು ಒಂದು ಸಮುದಾಯಕ್ಕೆ ಸಿಮಿತ ಗೊಳಿಸುವ ಹುನ್ನಾರ ಭಾರತದಲ್ಲಿ ಮಾತ್ರ ನಡೆಯುತ್ತಿದ್ದು ವಿಶ್ವದಾದ್ಯಂತ ಅಂಬೇಡ್ಕರ್ ಜನ್ಮ ದಿನವನ್ನು ಜ್ಞಾನದ ದಿನ ಎಂದು ಆಚರಿಸಿ ಗೌರವಿಸಲಾಗುತ್ತಿದೆ ಆದ್ದರಿಂದ ಯುವ ಸಮ್ಮೂಹ ಅವರು ತೋರಿದ ಸಿದ್ದಾಂತ ಮಾರ್ಗದರ್ಶನದಲ್ಲಿ ನಡೆಯುವಂತೆ ಕರೆ ನೀಡಿದ್ದರು.

ಕಾರ್ಯಕ್ರಮದ ಅಂಗವಾಗಿ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆಮಾಡಿತ್ತು, ಅಂಬೇಡ್ಕರ್ ಸಮವಸ್ತ್ರ ದಾರಿ ಮನೋಜ್ ಗಮನಸೆಳೆದರು. ವೇದಿಕೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಪುಟ್ಟರಾಜು, ತೇಜಸ್ವಿ ಸ್ವಾಮಿ, ತಾಲ್ಲೂಕು ಎಸ್ಸಿ ಎಸ್ಟಿ ನೌಕರರ ಸಂಘದ ಶಂಕರಪ್ಪ, ವಕೀಲ ಮಹಾದೇವ್, ಬಾಲಾಜಿ, ಮುಖಂಡರಾದ ಮುಳುಕಟ್ಟೆ ಚಂದ್ರು, ಲೋಕೆಶ್ ಇತರರು ಭಾಗವಹಿಸಿದ್ದರು.

error: