April 23, 2024

Bhavana Tv

Its Your Channel

ಜೆಡಿಎಸ್-ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು.ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಹೀನಾಯ ಸೋಲು

ಕೃಷ್ಣರಾಜಪೇಟೆ ; ತಾಲ್ಲೂಕು ಶೀಳನೆರೆ ಹೋಬಳಿಯ ಸಿಂಧಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೀನಾಯವಾಗಿ ಸೋಲೊಪ್ಪಿಕೊಂಡಿದ್ದಾರೆ ..

ಗೆಲುವು ಪಡೆದ ಅಭ್ಯರ್ಥಿಗಳ ವಿವರ
ಸಾಮಾನ್ಯ ಕ್ಷೇತ್ರದಿಂದ ಸತೀಶ್ (ಮಾರಿಗುಡಿ) ಅವರು ಎದುರಾಳಿ ವಿರುದ್ಧ ಕೇವಲ ೧ ಮತದ ಅಂತರದಿAದ ಜಯಭೇರಿ ಬಾರಿಸಿದರೆ ಉಳಿದಂತೆ ಎಸ್.ಆನಂದ್, ಈರಯ್ಯ, ನಾಗೇಶ್, ನಂಜಮ್ಮ, ಎಸ್.ಎಂ. ಮಂಜೇಗೌಡ, ಮಂಜಮ್ಮ, ಮಂಜೇಗೌಡ, ಎಸ್.ಮಂಜೇಗೌಡ, ಎಸ್.ಟಿ.ವಸಂತಕುಮಾರ್, ಎಸ್.ಬಿ. ಶಿವಕುಮಾರ್ ಹಾಗೂ ಎಸ್ಟಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಭಾರತಿರಾಜಶೇಖರ್ ಅವಿರೋಧವಾಗಿ ಆಯ್ಕೆಯಾಗಿದ್ದರು.

ಮನ್ ಮುಲ್ ನಿರ್ದೇಶಕರು ಹಾಗೂ ಜಿ.ಪಂ.ಸದಸ್ಯರಾದ ಹೆಚ್. ಟಿ. ಮಂಜು ಅವರ ನೇತೃತ್ವದಲ್ಲಿ ಒಟ್ಟು ೧೨ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ೦೮ ಸ್ಥಾನಗಳಲ್ಲಿ ಜಯಭೇರಿ ಬಾರಿಸಿದರೆ ಕಾಂಗ್ರೆಸ್ ೩ ಸ್ಥಾನಗಳನ್ನು ಗೆದ್ದುಕೊಂಡಿತು. ಈಗಾಗಲೇ ಓರ್ವ ಮಹಿಳಾ ಅಭ್ಯರ್ಥಿಯಾದ ಭಾರತಿರಾಜಶೇಖರ್ ಎಸ್ಟಿ ಮೀಸಲು ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದರು. ಸಂಘದ ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿಯಲು ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಗಳು ಯಶಸ್ಸು ಗಳಿಸಿದರೆ ಏಕಾಂಗಿಯಾಗಿ ಸ್ಪರ್ಧಾಕಣದಲ್ಲಿದ್ದು ಹೋರಾಟ ನೀಡಿದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಶೂನ್ಯ ಸಂಪಾದನೆ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಜೆಡಿಎಸ್ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ವರದಿ.ಡಾ.ಕೆ.ಆರ್.ನೀಲಕ0ಠ.
ಕೃಷ್ಣರಾಜಪೇಟೆ. ಮಂಡ್ಯ

error: