May 11, 2021

Bhavana Tv

Its Your Channel

ನಾಗಮಂಗಲದಲ್ಲಿ ಉಲ್ಬಣಗೊಂಡ ಕೊರೋನಾ: ಮೈಮರೆತ ಜನತೆ: ಅಧಿಕಾರಿಗಳ ಆತಂಕ

ನಾಗಮOಗಲ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಮಾರಣಾಂತಿಕ ಮಟ್ಟಕ್ಕೆ ತಲುಪಿದ್ದು ನಾಗಮಂಗಲ ಕೊರೊನಾ ಹಾಟ್ ಸ್ಪಾಟ್ ಆಗುತ್ತಿರುವುದಕ್ಕೆ ತಹಶೀಲ್ದಾರ್ ಕುಂಞ ಅಹಮ್ಮದ್ ಆತಂಕ ವ್ಯಕ್ತಪಡಿಸಿದ್ದಾರೆ.

ನಾಗಮಂಗಲ ಮಿನಿ ವಿಧಾನಸೌಧದಲ್ಲಿ ಕಲ್ಯಾಣ ಮಂಟಪಗಳ ಮಾಲೀಕರ ಸಭೆ ನಡೆಸಿದ ತಹಶೀಲ್ದಾರ್ ಕುಂಞ ಅಹಮ್ಮದ್ ತಾಲ್ಲೂಕಿನಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿವೆ, ಬೆಳ್ಳೂರಿನಲ್ಲಿ ಹುಟ್ಟು ಹಬ್ಬದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಬಂದ ೯೦ ಮಂದಿಯಲ್ಲಿ ಪಾಸಿಟಿವ್ ಕಂಡುಬAದಿದ್ದು ಐವರು ಸಾವನ್ನಪ್ಪಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಹಾಗೂ ೨೦೦ ಜನಕ್ಕಿಂತ ಹೆಚ್ಚು ಸೇರಿ ಕೋವಿಡ್ ನಿಯಮ ಉಲ್ಲಂಘಿನೆಯಾದರೆ ಕಾನೂನು ಕ್ರಮ ಖಚಿತ ಎಂದು ಮಾಲೀಕರಿಗೆ ಎಚ್ಚರಿಕೆ ನೀಡಿದರು.

ಇನ್ನು ತಾಲ್ಲೂಕು ಆರೋಗ್ಯಾಧಿಕಾರಿ ರಮೇಶ್ ಮಾತನಾಡಿ ತಾಲ್ಲೂಕಿನಲ್ಲಿ ಪ್ರತಿದಿನ ಕನಿಷ್ಠ ೩೦. ಕೋವಿಡ್ ಪ್ರಕರಣ ದಾಖಲಾಗುತ್ತಿವೆ, ಆದರೂ ಜನತೆ ಮಾಸ್ಕ್ ಧರಿಸದೆ ಮತ್ತು ಸಾಮಾಜಿಕ ಅಂತರ ಕಾಯದೆ ಮೈಮರೆಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು

ಹಾಗೂ ತಾಲ್ಲೂಕಿನಲ್ಲಿ ಎರಡನೇ ಅಲೆಗೆ ೩೪೪ ಪಾಸಿಟಿವ್ ಮತ್ತು ೧೭೮ ಸಕ್ರೀಯ ಪ್ರಕರಣಗಳು ಇದ್ದು ಸೋಂಕಿತರಿಗೆ ಐಸಿಯು ಚಿಕಿತ್ಸೆಗಾಗಿ ಆದಿಚುಂಚನಗಿರಿ ಏಮ್ಸ್ ಗೆ ಕಳುಹಿಸಲಾಗುತ್ತಿದೆ, ಉಳಿದಂತೆ ಪಟ್ಟಣದ ಎಸ್ಸಿ ಎಸ್ಟಿ ಹಾಸ್ಟಲ್ ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ, ಹೆಚ್ಚುವರಿಯಾಗಿ ಕೋಟೆ ಬೆಟ್ಟ ಮೂರಾರ್ಜೀ ವಸತಿ ನಿಲಯ ಬಳಕೆಗೆ ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಆದರೆ ಕೊರೊನ ಸೊಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಗಳಿಗೆ ಅಗತ್ಯವಾದ ಮಾಸ್ಕ್,ಸ್ಯಾನಿಟೈಸ್, ಮತ್ತು ಗ್ಲೌಸ್ ಗಳ ಕೊರತೆ ಎದುರಾಗಿದ್ದು ಸರ್ಕಾರಕ್ಕೆ ಬೇಡಿಕೆ ಪಟ್ಟಿ ಸಲ್ಲಿಸಲಾಗಿದೆ ಎಂದು ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.

error: