May 11, 2021

Bhavana Tv

Its Your Channel

ಕೆ.ಆರ್.ಪೇಟೆ ಪಟ್ಟಣದಲ್ಲಿ ಶ್ರೀರಾಮನವಮಿಯ ಸಂಭ್ರಮ, ಮೊಳಗಿದ ರಾಮನಾಮ, ಶ್ರೀ ರಾಮ ಭಜನೆ ಮಾಡಿ ಸಂಭ್ರಮಿಸಿದ ಭಕ್ತವೃಂದ

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ವನಾಗಮಂಗಲ ರಸ್ತೆಯಲ್ಲಿರುವ ಕಾರ್ಯಸಿದ್ಧಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀ ರಾಮಭಕ್ತ ಆಂಜನೇಯನಿಗೆ ವಿಶೇಷಪೂಜೆ ,ನೂರಾರು ಭಕ್ತರು ಶ್ರೀರಾಮನವಮಿ ಪೂಜಾ ಕಾರ್ಯಕ್ರಮದಲ್ಲಿ ಭಾಗಿ.

ಕೆ.ಆರ್.ಪೇಟೆ ಪಟ್ಟಣದಲ್ಲಿ ಶ್ರೀರಾಮನವಮಿಯ ಅಂಗವಾಗಿ ವಿಶೇಷ ಪೂಜೆಗಳು ಹಾಗೂ ಭಜನಾ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನಡೆದವು.

ಮರ್ಯಾದಾಪುರುಷೋತ್ತಮ ಶ್ರೀರಾಮಚಂದ್ರ ಭಗವಂತನ ಆದರ್ಶ ಗುಣಗಳನ್ನು ಪಾಲಿಸುವಂತೆ ಯುವಜನರಿಗೆ ಅಗ್ರಹಾರದ ಶ್ರೀರಾಮ ಭಜನಾಮಂಡಳಿಯ ವ್ಯವಸ್ಥಾಪಕ ಕಡ್ಲೇಕಾಯಿ ಕೃಷ್ಣ ಮನವಿ ಮಾಡಿದರು..

ಈ ಸಂದರ್ಭದಲ್ಲಿ ಹಣ್ಣಿನ ಅಂಗಡಿ ರಾಮಣ್ಣ, ಪುರಸಭೆ ಸದಸ್ಯ ಕೆ.ಆರ್.ರವೀಂದ್ರಬಾಬೂ, ಸಚಿವ ನಾರಾಯಣಗೌಡರ ಆಪ್ತಸಹಾಯಕರಾದ ದಯಾನಂದ ಮತ್ತಿತರರು ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ..

error: