May 11, 2021

Bhavana Tv

Its Your Channel

ಕೊರೊನಾ ಸೋಂಕಿತರು ಹೆಚ್ಚಳ ಹಿನ್ನೆಲೆ, ಸ್ವಯಂಪ್ರೇರಿತ ಲಾಕ್ ಡೌನ್

ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ 5 ದಿನಗಳ ಕಾಲ ಸ್ವಯಂ ಪ್ರೇರಿತ ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗಿದೆ.

ಪಾಂಡವಪುರ ತಾಲೂಕು ಸೇರಿದಂತೆ ಚಿನಕುರಳಿ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚಿನಕುರಳಿ ಗ್ರಾಮಸ್ಥರು ಹಾಗೂ ಸ್ಥಳೀಯ ಆಡಳಿತ ವರ್ಗದವರು ಹಾಗೂ ವರ್ತಕರು ಪರಸ್ಪರ ಚರ್ಚಿಸಿ ಶುಕ್ರವಾರದಿಂದ ಮಂಗಳವಾರದವರೆಗೆ ಐದು ದಿನಗಳ ಕಾಲ ಸ್ವಯಂ ಪ್ರೇರಿತವಾಗಿ ಲಾಕ್ ಡೌನ್ ಘೋಷಿಸಿಕೊಂಡು ಸ್ಚಯಂ ಪ್ರೇರಿತವಾಗಿ ಎಲ್ಲಾ ಅಂಗಡಿ ಮುಂಗಟ್ಟುಗಳ ಬಾಗಿಲು ಮುಚ್ಚಿ ಬಂದ್ ಮಾಡಲಾಗಿದೆ.

ರಾಜ್ಯ ಸರ್ಕಾರ ಮೇ.12 ರವರೆಗೆ 14 ದಿನಗಳ ಜನತಾ ಕರ್ಪ್ಯೂ ಜಾರಿ ಮಾಡಿ ಬೆಳಗ್ಗೆ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿ,ವ್ಯಾಪಾರಕ್ಕೆ ಅವಕಾಶ ನೀಡಿತ್ತು. ಆದರೆ ಚಿನಕುರಳಿ ಸುತ್ತಮುತ್ತಲ ಗ್ರಾಮಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ವ್ಯಾಪಾರ ವಹಿವಾಟಿಗೂ ಅವಕಾಶ ನೀಡದೆಯೇ ಬೆಳಗ್ಗೆಯಿಂದಲೇ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.

ಚಿನಕುರಳಿಯಲ್ಲಿರುವ ದಿನಸಿ ಅಂಗಡಿಗಳು, ತರಕಾರಿ, ಹೂ, ಹಣ್ಣು ಅಂಗಡಿ, ಹೋಟೆಲ್, ಹಾರ್ಡ್ ವೇರ್, ವರ್ಕ್ ಷಾಪ್, ಗಿರವಿ ಅಂಗಡಿ, ಬೇಕರಿ, ಮಾಂಸದಂಗಡಿ ಸೇರಿದಂತೆ ಎಲ್ಲವನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡುವ ಮೂಲಕ ಕೊರೊನಾ ತಡೆಗೆ ಮುಂದಾಗಿದ್ದಾರೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರು ಯಾರು ಸಹ ಅನಗತ್ಯವಾಗಿ ಹೊರಗೆ ತಿರುಗಾಡುವಂತಿಲ್ಲ ಎನ್ನುವ ಸೂಚನೆಯನ್ನು ಸಹ ನೀಡಲಾಗಿದೆ.

ಇದರಿಂದಾಗಿ ಚಿನಕುರಳಿ ಗ್ರಾಮದಲ್ಲಿ ವಾಹನ ಸಂಚಾರ ಹಾಗೂ ಜನರಿಲ್ಲದೇ ರಸ್ತೆಗಳು ಬಿಕೋ ಎನ್ನುತ್ತಿವೆ.

ಟಿ ಎಸ್ ಶಶಿಕಾಂತ್
ಪಾಂಡವಪುರ

error: