April 20, 2024

Bhavana Tv

Its Your Channel

ಸೋಂಕಿತರ ಆರೋಗ್ಯ ವಿಚಾರಿಸಿದ ಶಾಸಕ ಡಾ.ಕೆ.ಅನ್ನದಾನಿ

ಮಳವಳ್ಳಿ: ಆಕ್ಸಿಜನ್, ಲಸಿಕೆ, ಆಸ್ಪತ್ರೆ, ಬೆಡ್, ವೆಂಟಿಲೇಟರ್ ಕೊರತೆ ಮತ್ತು ಕೋವಿಡ್ ಸೋಂಕು ವ್ಯಾಪಕವಾಗಿ ಹರಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ನೇರ ಹೊಣೆ ಎಂದು ಶಾಸಕ ಡಾ.ಕೆ.ಅನ್ನದಾನಿ ಆರೋಪಿಸಿದರು.

ಪಟ್ಟಣದ ಕೆಎಸ್‌ಆರ್ ಟಿಸಿ ತರಬೇತಿ ಕೇಂದ್ರ ಹಾಗೂ ತಾಲ್ಲೂಕಿನ ವಡ್ಡರಹಳ್ಳಿ ವಸತಿ ಶಾಲೆಯಲ್ಲಿನ ಕೋವಿಡ್ ಕೇಂದ್ರಗಳಿಗೆ ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸಿ ಅವರು ಮಾತನಾಡಿದರು.
ಲಕ್ಷಾಂತರ ಕೋಟಿ ರೂ.ಬಜೆಟ್ ಮಾಡುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋವಿಡ್ ನಿಯಂತ್ರಣದಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ನೇರವಾಗಿ ಹೇಳುವೆ ಆದರಲ್ಲೂ ಪ್ರಧಾನಿಗಳು ವೈಫಲ್ಯ ಎದ್ದುಕಾಣುತ್ತಿದೆ. ನಮ್ಮ ಲಸಿಕೆಯನ್ನು ಬೇರೆ ದೇಶಗಳಿಗೆ ಅವರು ಕೊಟ್ಟಿದ್ದು, ಪ್ರಸುತ್ತ ಸಂದರ್ಭದಲ್ಲಿ ಲಸಿಕೆ ಇಲ್ಲದೇ ದೇಶದ ಜನರು ಪರದಾಟ ನಡೆಸುತ್ತಿದ್ದಾರೆ. ಎಷ್ಟು ದೇಶಗಳು ನಮಗೆ ಲಸಿಕೆ ನೀಡುತ್ತಿದ್ದಾರೆ ಎನ್ನುವುದನ್ನು ನೋಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ರಾಜಕೀಯ ಹೊರತುಪಡಿಸಿ ಹೇಳುದ್ದಾದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆಡಳಿತ ಸಂಪೂರ್ಣವಾಗಿ ಹಾಳಾಗಿದ್ದು, ಇದಕ್ಕೆ ಸಾಕ್ಷಿ ಇವತ್ತಿನ ವ್ಯವಸ್ಥೆಯಲ್ಲಿ ಬೆಡ್, ಆಸ್ಪತ್ರೆ, ಆಕ್ಸಿಜನ್, ಆಂಬುಲೇನ್ಸ್ ಸಿಗದೇ ಜನರು ಪುಟ್ ಬಾತ್ ನಲ್ಲಿ ಸಾಯುತ್ತಿರುವುದು, ವಿಶೇಷವಾಗಿ ಯುವಕರು ವೈದ್ಯಕೀಯ ಕೊರತೆಗಳಿಂದ ಸಾಯುವುದಕ್ಕೆ ಮೋದಿ ಅವರೇ ಕಾರಣ ಎಂದರು.


ತಾಲ್ಲೂಕಿನಲ್ಲಿ ಕೋವಿಡ್ ಸೋಂಕಿತರ ಆರೈಕೆಗೆ ಸುಮಾರು ೩೦೦ ಬೆಡ್ ಗಳ ವ್ಯವಸ್ಥೆ ಕಲ್ಪಿಸುತ್ತಿದ್ದು, ಅಗತ್ಯವಿದ್ದಲ್ಲಿ ಮತ್ತಷ್ಟು ಬೆಡ್ ಗಳನ್ನು ಸಿದ್ದಪಡಿಸಲಾಗುವುದು. ಅವರ ಆರೋಗ್ಯ ಸುಧಾರಣೆಗೆ ತಾಲ್ಲೂಕು ಆಡಳಿತದಿಂದ ಪೌಷ್ಠಿಕಾಂಶವುಳ್ಳ ಆಹಾರ, ಉತ್ತಮ ವೈದ್ಯಕೀಯ ಸೌಲಭ್ಯ ನೀಡಲಾಗುತ್ತಿದ್ದು, ಜನರು ಸೋಂಕಿನ ಬಗ್ಗೆ ಎಚ್ಚರಿಕೆಯಿಂದ ಇರಬೇಕು, ಅನಗತ್ಯವಾಗಿ ಹೊರಗಡೆ ಬರಬಾರದು, ಅಂತರ ಕಾಯ್ದುಕೊಂಡು ಆರೋಗ್ಯ ಇಲಾಖೆ ಸೂಚಿಸುವ ಕ್ರಮಗಳನ್ನು ಅನುಸರಿಸಬೇಕು ಎಂದು ಹೇಳಿದರು.
ಪಟ್ಟಣ ಸೇರಿದಂತೆ ಹಲವೆಡೆ ಪೊಲೀಸರು ನೂನ್ಯತೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು ಜನರೇ ಸರ್ಕಾರ, ಮೊದಲು ಅವರು ಜಾಗೃತರಾಗಬೇಕು. ಕಾನೂನು ಪಾಲನೆಯನ್ನು ಸರಿಯಾದ ರೀತಿಯಲ್ಲಿ ಮಾಡಬೇಕು, ಪೊಲೀಸ್ ಇಲಾಖೆಯಲ್ಲಿ ಲೋಪದೋಷಗಳ ಬಗ್ಗೆ ಸಭೆ ನಡೆಸಿ ಮುಂದಿನ ದಿನಗಳಲ್ಲಿ ಅವುಗಳು ಮರುಕಳಿಸದಂತೆ ನೋಡಿಕೊಳ್ಳಲಾಗುವುದು ಎಂದರು.

ವ್ಯವಸ್ಥೆಗೆ ಜೈ ಎಂದ ಸೋಂಕಿತರು: ಶಾಸಕ ಡಾ.ಕೆ.ಅನ್ನದಾನಿ ಅವರು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಕೋವಿಡ್ ಕೇಂದ್ರಗಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸೋಂಕಿತರನ್ನು ಶಾಸಕರು ನಿಮಗೆ ಊಟ, ವೈದ್ಯಕೀಯ, ಸ್ವಚ್ಛತೆ ಸೇರಿದಂತೆ ಏನಾದರೂ ಕೊರತೆ ಇದ್ದೀಯಾ ಎಂದು ಪ್ರಶ್ನಿಸಿದರು. ಇದಕ್ಕೆ ಸೋಂಕಿತರು ಎಲ್ಲವೂ ಉತ್ತಮವಾಗಿ ಇದ್ದು, ಅಧಿಕಾರಿಗಳು, ವೈದ್ಯರು ಸೇರಿದಂತೆ ಇಲ್ಲಿನ ಸಿಬ್ಬಂದಿಗಳು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದರು.
ತಹಶೀಲ್ದಾರ್ ಎಂ.ವಿಜಯಣ್ಣ, ತಾಲ್ಲೂಕು ನೋಡೆಲ್ ಅಧಿಕಾರಿ ಆಶ್ವಥ್, ತಾಲ್ಲೂಕು ಪಂಚಾಯಿತಿ ಇಒ ಬಿ.ಎಸ್.ಸತೀಶ್, ತಾಲ್ಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ, ಸಿಡಿಪಿಒ ಕುಮಾರ್ ಸೇರಿದಂತೆ ಹಲವರು ಇದ್ದರು.

ವರದಿ ; ಮಲ್ಲಿಕಾರ್ಜುನಸ್ವಾಮಿ
ಮಳವಳ್ಳಿ ತಾಲೂಕು ವರದಿಗಾರರು, ಮಂಡ್ಯ ಜಿಲ್ಲೆ

error: