March 29, 2024

Bhavana Tv

Its Your Channel

ಪೊಲೀಸ್ ಸಿಬ್ಬಂದಿ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಕೋವಿಡ್ ಕಿಟ್ ವಿತರಣೆ

ಮಳವಳ್ಳಿ : ಮಂಡ್ಯ ಜಿಲ್ಲೆಯ ೭೦ ಮಂದಿ ಪೊಲೀಸರಿಗೆ ಕೊರೋನ ಪಾಸಿಟೀವ್ ಬಂದಿತ್ತಾದರೂ ಅದರಲ್ಲಿ ಬಹುತೇಕರು ಗುಣ ಮುಖರಾಗಿದ್ದು ಇನ್ನೂ ಸುಮಾರು ೪೦ ಮಂದಿಗೆ ಯಾವುದೇ ರೋಗ ಲಕ್ಷಣಗಳು ಇಲ್ಲದೆ ಎ ಸಿಮ್ಟಾಮಿಕ್ ಆಗಿರುವ ಕಾರಣ ಅವರೆಲ್ಲರೂ ಹೋಂ ಐಸೋಲೇಷನ್ ನಲ್ಲಿ ಇದ್ದಾರೆ ಎಂದು ಜಿಲ್ಲಾ ಎಸ್ಪಿ ಡಾ. ಅಶ್ವಿನಿ ತಿಳಿಸಿದ್ದಾರೆ.
ಮಳವಳ್ಳಿ ಪಟ್ಟಣದ ಗ್ರಾಮಾಂತರ ಸರ್ಕಲ್ ಇನ್ಸ್ ಪೆಕ್ಟರ್ ಅವರ ವತಿಯಿಂದ ಕಚೇರಿ ಆವರಣದಲ್ಲಿ ಅಯೋಜಿಸಿದ್ದ ಕಾರ್ಯಕ್ರಮ ದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಮಾಧ್ಯಮ ಪ್ರತಿನಿಧಿ ಗಳಿಗೆ ಅತ್ಯಂತ ಉಪಯುಕ್ತ ವಾದ ಕೋವಿಡ್ ಕಿಟ್ ಗಳನ್ನು ವಿತರಿಸಿದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು ಐದು ಮಂದಿಗೆ ಮಾತ್ರ ಆಸ್ಪತ್ರೆ ಯ ಅಗತ್ಯವಿದ್ದರಿಂದ ಅವರಿಗೆ ಕೂಡಲೇ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡಿ ಅವರ ಆರೋಗ್ಯ ರಕ್ಷಣೆಗೆ ಹೆಚ್ಚಿನ ನಿಗಾ ವಹಿಸಲಾ ಗಿದ್ದು ಎಲ್ಲರು ಚೇತರಿಸಿಕೊಳ್ಳು ತ್ತಿದ್ದಾರೆ ಎಂದು ತಿಳಿಸಿದರು.
ಇದಲ್ಲದೆ ಹೋಂ ಐಸೋಲೇ ಷನ್ ನಲ್ಲಿ ಇರುವ ಸಿಬ್ಬಂದಿಯ ಆರೋಗ್ಯ ರಕ್ಷಣೆಗೆ ಹೆಚ್ಚಿನ ನಿಗಾ ವಹಿಸಲಾಗಿದ್ದು ಪ್ರತಿನಿತ್ಯ ಇವರ ಆರೋಗ್ಯ ವಿಚಾರಣೆಗಾಗಿಯೇ ನಮ್ಮ ಕಚೇರಿಯಲ್ಲಿ ಪ್ರತ್ಯೇಕ ಹೆಲ್ಪ್ ಲೈನ್ ವೊಂದನ್ನು ತೆರೆದು ನಿರಂತರವಾಗಿ ಅವರ ಆರೋಗ್ಯ ವಿಚಾರಣೆ ನಡೆಸಲಾಗುತ್ತಿದ್ದು ಯಾವುದೇ ಸಂದರ್ಭದಲ್ಲಿ ಅವರಿಗೆ ಮತ್ತು ಅವರ ಕುಟುಂಬದವರಿಗೆ ಆಸ್ಪತ್ರೆ ಚಿಕಿತ್ಸೆ ಅಗತ್ಯ ಬಿದ್ದರೆ ಎಲ್ಲಾ ರೀತಿಯ ಚಿಕಿತ್ಸೆ ಕೊಡಿಸಲು ತಕ್ಷಣ ಕ್ರಮ ವಹಿಸುವುದಾಗಿ ತಿಳಿಸಿದರು.
ಮಳವಳ್ಳಿ ಗ್ರಾಮಾಂತರ ಸರ್ಕಲ್ ಇನ್ಸ್ ಪೆಕ್ಟರ್ ಧನರಾಜ್ ಅವರು ಡಿವೈಎಸ್ಪಿ ಲಕ್ಷ್ಮಿ ನಾರಾಯಣ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ವೃತ್ತದ ಎಲ್ಲಾ ಪೊಲೀಸ್ ಸಿಬ್ಬಂದಿಗೆ ಹಾಗೂ ಪತ್ರಕರ್ತ ರಿಗೆ ಅತ್ಯಂತ ಉಪಯುಕ್ತವಾದ ಕೋವಿಡ್ ಕಿಟ್ ನೀಡಿದ್ದು ಈ ಕಿಟ್ ನಲ್ಲಿ ಸಿಬ್ಬಂದಿಗೆ ಅತ್ಯಗತ್ಯವಾದ ಮಾಸ್ಕ್ , ಫೇಸ್ ಕವರ್, ಸ್ಯಾನಿಟೈಸರ್, ಡ್ರೈಫುಡ್ ಪ್ಯಾಕೆಟ್, ಮಾತ್ರೆಗಳನ್ನು ಒಳಗೊಂಡಿದ್ದು ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಇದು ತುಂಬಾ ಉಪಯುಕ್ತವಾಗಿದ್ದು ಜಿಲ್ಲೆಯಲ್ಲಿ ಇದು ಅಪರೂಪವಾದ ಕಾರ್ಯಕ್ರಮ ಎಂದು ಪ್ರಶಂಸಿಸಿದರು.
ಸಾರ್ವಜನಿಕರಿಗೆ ದಂಡ ಹಾಕುವ ಅವರನ್ನು ದಂಡಿಸಬೇಕೆನ್ನುವ ಉದ್ದೇಶ ಪೋಲಿಸರಿಗೆ ಇಲ್ಲ ಬದಲಾಗಿ ಮಹಾಮಾರಿ ಕೊರೋನ ನಿಯಂತ್ರಿಸಬೇಕು ಎನ್ನುವುದು ನಮ್ಮ ಹಾಗೂ ಎಲ್ಲಾ ಇಲಾಖೆ ಯವರ ಗುರಿಯಾಗಿದ್ದು ಇದಕ್ಕೆ ಎಲ್ಲಾ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಕೋರಿದರು,
ಡಿವೈಎಸ್ಪಿ ಲಕ್ಷ್ಮಿ ನಾರಾಯಣ ಪ್ರಸಾದ್, ಸರ್ಕಲ್ ಇನ್ಸ್ ಪೆಕ್ಟರ್ ಧನರಾಜ್ , ಎ ಕೆ ರಾಜೇಶ್, ಸಬ್ ಇನ್ಸ್ ಪೆಕ್ಟರ್ ರವಿಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

error: