March 29, 2024

Bhavana Tv

Its Your Channel

ರಸ್ತೆ ಬದಿಯ ಹಳ್ಳಕ್ಕೆ ಉರುಳಿ ಬಿದ್ದ ಬೊಲೇರೋ ವಾಹನ; ಕ್ಲೀನರ್‌ಗೆ ತೀವ್ರ ಗಾಯ

ಮಳವಳ್ಳಿ : ಬೊಲೇರೋ ವಾಹನವೊಂದು ರಸ್ತೆ ಬದಿಯ ಹಳ್ಳಕ್ಕೆ ಉರುಳಿಬಿದ್ದ ಪರಿಣಾಮವಾಗಿ ವಾಹನದ ತಳಭಾಗಕ್ಕೆ ಸಿಕ್ಕು ಅದರ ಕ್ಲೀನರ್ ತೀವ್ರವಾಗಿ ಗಾಯಗೊಂಡ ಘಟನೆಯೊಂದು ಮಳವಳ್ಳಿ ತಾಲೂಕಿನ ನೆಲ್ಲೂರು ಗ್ರಾಮದ ಬಳಿ ಜರುಗಿದೆ.
ಇಂದು ಬೆಳಿಗ್ಗೆ ೧೦.೩೦ ರ ಸಮಯದಲ್ಲಿ ನೆಲ್ಲೂರು ಗ್ರಾಮದ ಬಳಿ ಹೋಗುತ್ತಿದ್ದ ಈ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಉರುಳಿ ಬಿತ್ತೆನ್ನಲಾಗಿದೆ.


ವಾಹನದ ತಳಭಾಗಕ್ಕೆ ಸಿಕ್ಕು ವಾಹನದ ಕ್ಲೀನರ್ ತಲಕಾಡು ಮೂಲದ ಚಿಕ್ಕಮಲ್ಲಣ್ಣ ಎಂಬಾತ ತೀವ್ರವಾಗಿ ಗಾಯ ಗೊಂಡಿದ್ದು ಗಂಭೀರವಾಗಿ ಸ್ಥಿತಿ ಯಲ್ಲಿರುವ ಈತನನ್ನು ಮೈಸೂರಿನ ಕೆ ಆರ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿ ದ್ದಾರೆ.

ವರದಿ ಮಲ್ಲಿಕಾರ್ಜುನ ಮಲವಳ್ಳಿ

error: