April 20, 2024

Bhavana Tv

Its Your Channel

ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ಸೋಂಕಿತರಿಗೆ ೧೨ ಆಮ್ಲಜನಕ ಸಿಲಿಂಡರ್ ನೀಡಿದ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಪಿ.ಎಂ. ನರೇಂದ್ರಸ್ವಾಮಿ.

ಮಳವಳ್ಳಿ : ಪಟ್ಟಣದಲ್ಲಿ ಈ ಸಂಬAಧ ಸುದ್ದಿಗಾರರಿಗೆ ಅವರು ಮಾಹಿತಿ ನೀಡಿದರು. ತಾಲ್ಲೂಕಿನಲ್ಲಿ ಪ್ರತಿನಿತ್ಯ ನೂರಾರು ಮಂದಿ ಮಹಾಮಾರಿ ಕೊರೊನಾ ಸೋಂಕು ತಗುಲಿದ್ದು, ಹಲವು ಮಂದಿ ಸೋಂಕಿನಿAದ ಸಾವನ್ನಪ್ಪಿದ್ದಾರೆ. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಕೋವಿಡ್ ಕೇಂದ್ರವನ್ನಾಗಿ ತಾಲ್ಲೂಕು ಆಡಳಿತ ಮಾಡಿದ್ದು, ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವವರಿಗೆ ತುರ್ತಾಗಿ ೬ ಜಂಬೋ ಸಿಲಿಂಡರ್ ಹಾಗೂ ಆಂಬುಲೇನ್ಸ್ಗೆ ಅಳವಡಿಸಿ ಕೊಳ್ಳಲು ೬ ಮಿನಿ ಸಿಲಿಂಡರ್ ನ್ನು ತಾಲ್ಲೂಕು ಆಡಳಿತಕ್ಕೆ ನೀಡಲಾಗಿದೆ ಎಂದರು.


ತಾಲ್ಲೂಕಿನ ಜನರು ಸಹ ಅನವಶ್ಯಕವಾಗಿ ಮನೆಯಿಂದ ಹೊರಬಾರದೇ ತಮ್ಮ ಆರೋಗ್ಯದ ಕಡೆಗೆ ಗಮನ ನೀಡಬೇಕು, ಸೋಂಕಿನ ಬಗ್ಗೆ ಜಾಗೃತರಾಗಿರಬೇಕು. ತಾಲ್ಲೂಕಿನ ಕೋವಿಡ್ ಕೇಂದ್ರಗಳಿಗೆ ಸಿಬ್ಬಂದಿಗಳ ಅಗತ್ಯವಿದ್ದು, ಅಶಕ್ತ ಪ್ಯಾರಾ ಮೆಡಿಕಲ್ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳನ್ನು ತಾಲ್ಲೂಕು ಆಡಳಿತ ನೇಮಕ ಮಾಡಿಕೊಳ್ಳಲಿ, ಅವರಿಗೆ ಕೋವಿಡ್ ಸಮಸ್ಯೆ ಬಗೆಹರಿ ಯುವವರೆಗೂ ತಾವೇ ಗೌರವಧನ ನೀಡುತ್ತೇನೆ. ಈ ಬಗ್ಗೆ ತಾಲ್ಲೂಕು ಆಡಳಿತ ಗಮನ ಹರಿಸಲಿ ಎಂದ ಅವರು ಡಿ ಗ್ರೂಪ್ ನೌಕರರಿಗೆ ಮಧ್ಯಾಹ್ನ ಉಚಿತ ಊಟದ ವ್ಯವಸ್ಥೆ ಮಾಡಲಾಗುವುದು ಎಂದರು.
ದೇಶದಲ್ಲಿ ಲಸಿಕೆ ಕೊರತೆ ಉಂಟಾಗಿದ್ದು, ಕೇಂದ್ರ ಸರ್ಕಾರ ಹಂತ-ಹAತವಾಗಿ ಪೂರೈಕೆ ಮಾಡುತ್ತಿದ್ದು, ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಸೋಂಕಿನ ವಿಚಾರದಲ್ಲಿ ಯಾರೂ ನಿರ್ಲಕ್ಷ್ಯ ಮಾಡಬಾರದು. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಜನರು ಅಂತರ ಕಾಯ್ದುಕೊಂಡು, ಮಾಸ್ಕ್ ಬಳಸಬೇಕು. ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದರು.
ಕೋವಿಡ್-೧೯ ಸೋಂಕಿನಿAದ ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವವರು ಪಿಎಂ, ಸಿಎಂ ಪರಿಹಾರ ನಿಧಿಗೆ ನೀಡುವ ಬದಲು ನೇರವಾಗಿ ಜನರಿಗೇ ನೀಡಿ. ದೇಶವನ್ನು ಕಾಡುತ್ತಿರುವ ಕೊರೊನಾ ಸೋಂಕು ಕೋಟ್ಯಾಂತರ ಜನರನ್ನು ಬೀದಿಗೆ ತಳ್ಳಿದೆ. ಅಂತಹ ಜನರಿಗೆ ನೆರವಾಗುವ ದಾನಿಗಳು, ಮುಖಂಡರು, ಕಾರ್ಯಕರ್ತರು ನಿಮ್ಮ ಕೈಲಾದ ಸಹಾಯವನ್ನು ಸಂಕಷ್ಟದಲ್ಲಿ ಇರುವ ಜನರಿಗೆ ನೇರವಾಗಿ ನೀಡಿ ಎಂದು ಮನವಿ ಮಾಡಿದರು.
ಪಟ್ಟಣ ಹಾಗೂ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಜೂಜು ಅಡ್ಡೆಗಳು ವ್ಯಾಪಕವಾಗಿ ನಡೆಯುತ್ತಿದ್ದು, ಅವುಗಳಿಂದ ಕೋವಿಡ್ ಸೋಂಕು ಹರಡುವ ಸಾಧ್ಯತೆ ಇದೆ. ಜತೆಗೆ ಜನರನ್ನು ಬೀದಿಗೆ ತಳ್ಳುತ್ತಿದೆ. ಅಲ್ಲದೇ ಎಲ್ಲೆಡೆ ಅಕ್ರಮ ಮದ್ಯ ಪೂರೈಕೆ ಮಾಡಲಾಗುತ್ತಿದ್ದು, ಅದರ ಬಗ್ಗೆ ಪೊಲೀಸ್ ಇಲಾಖೆ ಗಮನ ಹರಿಸಲಿ ಎಂದು ಸಲಹೆ ನೀಡಿದರು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಸಿ.ಮಾಧು, ಮುಖಂಡರಾದ ಗಂಗರಾಜೇ ಅರಸು, ರವಿ ಸೇರಿದಂತೆ ಹಲವರು ಇದ್ದರು.

error: