April 25, 2024

Bhavana Tv

Its Your Channel

ಪುರಸಭೆಯ ಸದಸ್ಯರಾದರೂ ವಾಸಿಸಲು ಸ್ವಂತ ಮನೆಯಿಲ್ಲದೇ ಸಾಮಾನ್ಯ ಕೂಲಿಯಂತೆ ಕಾಯಕ ಮಾಡುತ್ತಲೇ ಜೀವನ ನಡೆಸುತ್ತಿರುವ ದಲಿತ ಮುಖಂಡ ಸಣ್ಣಯ್ಯ

ಕೆ.ಆರ್.ಪೇಟೆ ಪುರಸಭೆಗೆ ಮೂರು ಅವಧಿಗೆ ಸದಸ್ಯರಾದರೂ ವಾಸಿಸಲು ಸ್ವಂತ ಮನೆಯಿಲ್ಲದೇ ಇಂದಿಗೂ ಸಾಮಾನ್ಯ ಕೂಲಿಯಂತೆ ಕಾಯಕ ಮಾಡುತ್ತಲೇ ಜೀವನ ನಡೆಸುತ್ತಿರುವ ದಲಿತ ಮುಖಂಡ ಸಣ್ಣಯ್ಯ …

ದಲಿತ ಸಮಾಜಕ್ಕೆ ಸೇರಿರುವ ಸಣ್ಣಯ್ಯ ಇಂದಿಗೂ ಸ್ವಂತ ಮನೆಯಿಲ್ಲದೇ ಕೆ.ಆರ್.ಪೇಟೆ ಪಟ್ಟಣದ ಅಂಬೇಡ್ಕರ್ ನಗರದ ಗುಡಿಸಲಿನಲ್ಲಿ ಜೀವನ ನಡೆಸುತ್ತಿದ್ದಾರೆ. ಕೆ.ಆರ್.ಪೇಟೆ ಪಟ್ಟಣದ ಚನ್ನರಾಯಪಟ್ಟಣ ಮೈಸೂರು ರಸ್ತೆಯಲ್ಲಿರುವ ಕರ್ನಾಟಕ ಸಾಮಿಲ್ ನಲ್ಲಿ ಕೆಲಸ ಮಾಡುತ್ತಿರುವ ಸಣ್ಣಯ್ಯ ಒಬ್ಬ ಸಾಮಾನ್ಯ ಕೂಲಿ ಕಾರ್ಮಿಕರಂತೆ ದುಡಿಯುತ್ತಿದ್ದಾರೆ. ದುಡಿಮೆ ಮಾಡಿದರೆ ತುತ್ತಿನ ಚೀಲಕ್ಕೆ ಆಹಾರ ಇಲ್ಲದಿದ್ದರೆ ಹಸಿವಿನಿಂದ ಬಳಲಬೇಕಾದ ದಯನೀಯ ಸ್ಥಿತಿಯಲ್ಲಿ ಸಣ್ಣಯ್ಯ ಇದ್ದಾರೆ.

೬೦೦ ರೂಪಾಯಿ ವೃದ್ಧಾಪ್ಯ ವೇತನದ ಗೌರವ ಧನ ಹಾಗೂ ಕೂಲಿ ಮಾಡಿ ಬರುವ ಅಲ್ಪಸ್ವಲ್ಪ ಹಣದಿಂದ ಬದುಕಿನ ಬಂಡಿಯನ್ನು ನಡೆಸುತ್ತಿರುವ ಸಣ್ಣಯ್ಯ ಸರ್ಕಾರದಿಂದ ಏನಾದರೂ ಸಹಾಯ ದೊರೆಯಬಹುದೇ ಎಂಬ ಆಶಾ ಭಾವನೆಯಲ್ಲಿಯೇ ದಿನ ಕಳೆಯುತ್ತಿದ್ದಾರೆ.

ಕರ್ನಾಟಕ ಸಾಮಿಲ್ ಮಾಲೀಕ ಉಮ್ಮರ್ ಬೇಗ್ ಮಾತನಾಡಿ ಸಣ್ಣಯ್ಯ ಒಬ್ಬರು ಸಚ್ಚಾರಿತ್ಯ ಹೊಂದಿರುವ ಸಜ್ಜನ ವ್ಯಕ್ತಿಯಾಗಿದ್ದಾರೆ. ಪತ್ನಿಯನ್ನು ಕಳೆದುಕೊಂಡು ಏಕಾಂಗಿಯಾಗಿ ಜೀವನ ನಡೆಸುತ್ತಿರುವ ಸಣ್ಣಯ್ಯ ಸರ್ಕಾರದ ಸಹಾಯಕ್ಕಾಗಿ ಎದುರು ನೋಡುತ್ತಿದ್ದಾರೆ. ಕ್ಷೇತ್ರದ ಶಾಸಕರಾದ ಮಾನ್ಯ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಅವರು ಸಣ್ಣಯ್ಯ ಅವರು ಸ್ವಂತ ಸೂರು ಹೊಂದಲು ಸಹಾಯವಾಗುವಂತೆ ಪುರಸಭೆಯ ವತಿಯಿಂದ ನಿವೇಶನ ಕೊಡಿಸಿ ಮನೆಯನ್ನು ನಿರ್ಮಿಸಿಕೊಡುವ ಮೂಲಕ ಆಸರೆಯಾಗಬೇಕು ಎಂದು ಮನವಿ ಮಾಡಿದರು.
ಶ್ರಮಜೀವಿಯಾಗಿ ದುಡಿಮೆಯನ್ನೇ ನಂಬಿಕೊAಡು ಜೀವನ ನಡೆಸುತ್ತಿರುವ ಸಣ್ಣಯ್ಯ ಅವರ ಬದುಕಿಗೆ ಕಾಯಕಲ್ಪ ನೀಡಬೇಕು ಎನ್ನುವುದು ಕೆ.ಆರ್.ಪೇಟೆ ಪಟ್ಟಣದ ಜನತೆಯ ಆಶಯವಾಗಿದೆ.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ. ಮಂಡ್ಯ

error: