March 29, 2024

Bhavana Tv

Its Your Channel

ಯೋಗವೇ ಉಸಿರು, ಯೋಗವೇ ಜೀವನ. ಕಳೆದ ೬ ವರ್ಷಗಳಿಂದ ನಿರಂತರವಾಗಿ ಯೋಗದ ಅಭ್ಯಾಸ. ಯೋಗ ಗುರುವಾಗಿ ಹೊರಹೊಮ್ಮಿದ ಅಲ್ಲಮಪ್ರಭು .

ಕೃಷ್ಣರಾಜಪೇಟೆ ; ೨೨ ವರ್ಷದ ಯುವಕನ ಅದ್ವಿತೀಯ ಸಾಧನೆ. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಅಲ್ಲಮಪ್ರಭು ಯೋಗವನ್ನೇ ತನ್ನ ಸಾಧನೆಯ ಮೆಟ್ಟಿಲುಗಳನ್ನಾಗಿಸಿಕೊಂಡು ಸಾರ್ಥಕ ಜೀವನ ನಡೆಸುತ್ತಿದ್ದಾರೆ.

ಮುಂದಿನ ಅಗಷ್ಟ್ ತಿಂಗಳಿನಲ್ಲಿ ನೇಪಾಳ ರಾಷ್ಟ್ರದ ಕಟ್ಮಂಡುವಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗಸ್ಪರ್ಧೆಗೆ ಆಯ್ಕೆಯಾಗಿರುವ ಅಲ್ಲಮಪ್ರಭು ಅಲ್ಲಿಯೂ ಬಹುಮಾನವನ್ನು ಗೆದ್ದು ತರುವ ವಿಶ್ವಾಸ ಹೊಂದಿದ್ದಾರೆ.

ನಾಳೆ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಎಲ್ಲರೂ ಯೋಗವನ್ನು ಕೋವಿಡ್ ಹಿನ್ನೆಲೆಯಲ್ಲಿ ನಿಮ್ಮ ನಿಮ್ಮ ಮನೆಯಲ್ಲಿಯೇ ಅಭ್ಯಾಸ ಮಾಡಿ ಯೋಗ ಪ್ರದರ್ಶನ ಮಾಡಿ ಯುವಜನರು ಯೋಗವನ್ನು ಜೀವನದ ಒಂದು ಭಾಗವನ್ನಾಗಿ ಮಾಡಿಕೊಳ್ಳಬೇಕು ಎಂದು ಅಲ್ಲಮಪ್ರಭು ಮನವಿ ಮಾಡಿದ್ದಾರೆ.

ಯೋಗ ಮತ್ತು ಪ್ರಾಣಾಯಾಮದಿಂದ ಆರೋಗ್ಯ, ಬದುಕಿನಲ್ಲಿ ಹೊಸತನ ಹಾಗೂ ಕ್ರಿಯಾಶೀಲತೆಯು ಲಭ್ಯವಾಗುವುದಲ್ಲದೇ ಕೋವಿಡ್ ಸೇರಿದಂತೆ ಯಾವುದೇ ಸೋಂಕು ನಮ್ಮ ಹತ್ತಿರ ಸುಳಿಯದಂತೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಯುವಜನರು ಸತತವಾಗಿ ಯೋಗಾಭ್ಯಾಸ ಮಾಡಿ ಕೋವಿಡ್ ವಿರುದ್ಧದ ಯುದ್ಧವನ್ನು ಗೆಲ್ಲಲು ಪ್ರಯತ್ನ ಮಾಡಬೇಕು ಎಂದು ಅಲ್ಲಮಪ್ರಭು ಹೇಳಿದರು.

ಭಾರತ ದೇಶ ಸೇರಿದಂತೆ ವಿಶ್ವದ ಇನ್ನೂರಕ್ಕೂ ಹೆಚ್ಚಿನ ರಾಷ್ಟ್ರಗಳು ವಿಶ್ವಯೋಗ ದಿನವನ್ನು ಆಚರಿಸುತ್ತಿವೆ. ನಮ್ಮ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರಮೋಧಿ ಅವರು ಸ್ವತಃ ಯೋಗಾಭ್ಯಾಸವನ್ನು ಮಾಡುವ ಮೂಲಕ ಯೋಗದಿನಕ್ಕೆ ಅರ್ಥಪೂರ್ಣ ಚಾಲನೆ ನೀಡಲಿದ್ದಾರೆ. ಯೋಗ ಮತ್ತು ಆಯುರ್ವೇದ ಚಿಕಿತ್ಸೆಗೆ ವಿಶ್ವಗುರುವಾಗಿರುವ ಭಾರತ ದೇಶದಲ್ಲಿ ವಾಸಮಾಡುತ್ತಿರುವ ನಾವು ಯೋಗವನ್ನು ಬದುಕಿನ ಒಂದು ಭಾಗವನ್ನಾಗಿಸಿಕೊಂಡು ರೋಗಗಳಿಂದ ಮುಕ್ತರಾಗಿ ಆರೋಗ್ಯವಂತರಾಗಿ ನೆಮ್ಮದಿಯ ಜೀವನ ನಡೆಸಬೇಕು ಎಂದು ಅಲ್ಲಮಪ್ರಭು ಕರೆ ನೀಡಿದರು.

ತಮ್ಮ ಮಗನ ಸಾಧನೆಯ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ ಮೋದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರಾದ ವೀರಭದ್ರಯ್ಯ ನಾಡಿನ ಚಿಂತಕರಾದ ಚಕ್ರವರ್ತಿ ಸೂಲಿಬೆಲೆ ಅವರ ಪರಿಚಯವಾದ ನಂತರ ಅಲ್ಲಮಪ್ರಭು ಯೋಗ ಕ್ಷೇತ್ರದಲ್ಲಿಯೇ ನಿರಂತರವಾದ ತರಭೇತಿ ಪಡೆದುಕೊಂಡು ಕೇವಲ ೨೨ ವರ್ಷ ಪ್ರಾಯದಲ್ಲಿಯೇ ಅದ್ವಿತೀಯ ಸಾಧನೆ ಮಾಡುತ್ತಿದ್ದಾನೆ. ಕೋವಿಡ್ ಸಂಕಷ್ಠದ ಸಮಯದಲ್ಲಿ ಕೋವಿಡ್ ಹೆಲ್ತ್ ಕೇರ್ ಸೆಂಟರ್ ಗೆ ಹೋಗಿ ಸೋಂಕಿತರಿಗೆ ಆತ್ಮವಿಶ್ವಾಸ ತುಂಬಿ ಯೋಗ ಪ್ರಾಣಾಯಾಮದ ಬಗ್ಗೆ ತರಬೇತಿ ನೀಡಿ ಕಲಿಸುತ್ತಿರುವ ಅಲ್ಲಮಪ್ರಭು ಯೋಗ ಜಾಗೃತಿ ಮೂಡಿಸುತ್ತಿದ್ದಾನೆ ಎಂದು ಹೇಳಿದರು.

ವಿಶೇಷ ವರದಿ ; ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ . ಮಂಡ್ಯ.

error: