April 20, 2024

Bhavana Tv

Its Your Channel

ಮನೆಯ ಗೋಡೆ ಕುಸಿದು ಮೃತಪಟ್ಟ ಕುಟುಂಬಕ್ಕೆ ೫ಲಕ್ಷ ರೂಪಾಯಿಗಳ ಚೆಕ್‌ನ್ನು ಹಸ್ತಾಂತರಿಸಿದ ಸಚಿವ ಡಾ. ನಾರಾಯಣಗೌಡ

ಕೃಷ್ಣರಾಜಪೇಟೆ ತಾಲೂಕು ಕಸಬಾ ಹೋಬಳಿಯ ಕತ್ತರಘಟ್ಟ ಗ್ರಾಮದ ನಿವಾಸಿಯಾದ ಬೋರೇಗೌಡ (೬೭) ಅವರು ಮೊನ್ನೆ ಸುರಿದ ಭಾರಿ ಮಳೆಗೆ ಮನೆಯ ಗೋಡೆ ಕುಸಿದು ಮಣ್ಣಿನಡಿ ಸಿಲುಕಿ ಮೃತಪಟ್ಟ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಅವರು ಪ್ರಕೃತಿ ವಿಕೋಪ ನಿಧಿಯಲ್ಲಿ ಒಂದೇ ದಿನಕ್ಕೆ ಮಂಜೂರು ಮಾಡಿಸಿದ ೫ಲಕ್ಷ ರೂಪಾಯಿಗಳ ಚೆಕ್ ಅನ್ನು ಮೃತರ ಕುಟುಂಬಕ್ಕೆ ನೀಡಿ ಸಾಂತ್ವನ ಹೇಳಿದರು

ಸಚಿವ ನಾರಾಯಣಗೌಡರು ಮಾತನಾಡಿ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಮನೆ ಕುಸಿದು ಮೃತಪಟ್ಟ ರೈತರಿಗೆ ೫ಲಕ್ಷ ರೂ ಪರಿಹಾರ ನೀಡುವ ಯೋಜನೆಯನ್ನು ನಮ್ಮ ಕೇಂದ್ರದ ನರೇಂದ್ರ ಮೋದಿ ಮತ್ತು ರಾಜ್ಯ ಯಡಿಯೂರಪ್ಪ ಅವರ ಸರ್ಕಾರವು ಜಾರಿಗೆ ತಂದಿಗೆ ಈ ಮೊದಲು ಕೇವಲ ೫೦ ಸಾವಿರ ಅಥವಾ ೧ಲಕ್ಷ ಪರಿಹಾರ ನೀಡಲಾಗುತ್ತಿತ್ತು. ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ರೈತರ ಮೇಲೆ ವಿಶೇಷ ಕಾಳಜಿಯಿಂದ ೫ಲಕ್ಷ ರೂಗಳಿಗೆ ಏರಿಕೆ ಮಾಡಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರವು ಕೈಜೋಡಿಸುತ್ತದೆ. ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಕೇಂದ್ರ ವಾರ್ಷಿಕ ೮ಸಾವಿರ, ರಾಜ್ಯ ಸರ್ಕಾರ ೪ಸಾವಿರ ಪರಿಹಾರವನ್ನು ಆರ್.ಟಿ.ಸಿ. ಹೊಂದಿದ ಎಲ್ಲಾ ಸಣ್ಣ ರೈತರ ನೀಡುತ್ತಿದೆ. ಇದಲ್ಲದೆ ಬೆಳೆ ವಿಮೆ ಯೋಜನೆ ಜಾರಿಗೆ ತಂದಿದೆ. ರಸಗೊಬ್ಬರಕ್ಕೆ ಸಬ್ಸಿಡಿಯನ್ನು ಮುಂದುವರೆಸಿದೆ. ಹನಿ ನೀರಾವರಿ, ತುಂತುರು ನೀರಾವರಿ ಸೇರಿದಂತೆ ಹಲವು ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ನೆರವಿಗಾಗಿ ಜಾರಿಗೆ ತಂದಿವೆ ಎಂದು ಸಚಿವರು ಹೆಮ್ಮೆಯಿಂದ ಹೇಳಿದರು.

ಈ ಸಂದರ್ಭದಲ್ಲಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಶ್ರೀನಿವಾಸ್, ಜಿ.ಪಂ.ಮಾಜಿ ಉಪಾಧ್ಯಕ್ಷರಾದ ಎಸ್.ಅಂಬರೀಶ್, ತಹಸೀಲ್ದಾರ್ ಎಂ.ಶಿವಮೂರ್ತಿ, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕರಾದ ಕಟ್ಟೆಕ್ಯಾತನಹಳ್ಳಿ ಪಾಪಣ್ಣ, ಎಪಿಎಂಸಿ ನಿರ್ದೇಶಕರಾದ ಹೊಸೂರು ಸೋಮಣ್ಣ, ಕಸಬಾ ಹೋಬಳಿ ರಾಜಸ್ವ ನಿರೀಕ್ಷಕಿ ಚಂದ್ರಕಲಾ, ಸೇರಿದಂತೆ ಬಿಜೆಪಿಯ ಮುಖಂಡರು ಹಾಜರಿದ್ದರು.
ವರದಿ.ಡಾ.ಕೆ.ಆರ್.ನೀಲಕಂಠ. ಕೃಷ್ಣರಾಜಪೇಟೆ . ಮಂಡ್ಯ

error: