April 20, 2024

Bhavana Tv

Its Your Channel

ಮಾಕವಳ್ಳಿಯ ಕೋರಮಂಡಲ್ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ

ಕೆ.ಆರ್.ಪೇಟೆ ತಾಲ್ಲೂಕಿನ ರೈತರ ಜೀವನಾಡಿ ಮಾಕವಳ್ಳಿಯ ಕೋರಮಂಡಲ್ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಕಾರ್ಯಕ್ಕೆ ಕಾರ್ಖಾನೆಯ ಹಿರಿಯ ಉಪಾಧ್ಯಕ್ಷ ವಿ.ಜೆ.ರವಿರೆಡ್ಡಿ ಚಾಲನೆ ನೀಡಿದರು. ಕಬ್ಬು ಬೆಳೆಗಾರರ ಸಂತಸ, ಕಾರ್ಖಾನೆಯ ಆವರಣದಲ್ಲಿ ಹಬ್ಬದ ವಾತಾವರಣ ನೆಲೆಸಿತ್ತು..
ಚಂಡಿಕಾ ಹೋಮ ಮತ್ತು ಗಣಪತಿ ಹೋಮ ನಡೆಸಿ ಕಾರ್ಖಾನೆಯ ಯಂತ್ರೋಪಕರಣಗಳಿಗೆ ವಿಶೇಷಪೂಜೆ ಸಲ್ಲಿಸಿ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡಲಾಯಿತು…

ಕಳೆದ ಕಬ್ಬು ಹಂಗಾಮಿನಲ್ಲಿ ಆರೂವರೆ ಲಕ್ಷ ಟನ್ ಕಬ್ಬು ಅರೆದು ಕಬ್ಬಿನ ಬಾಕಿ ಹಣವನ್ನು ರೈತರಿಗೆ ಸಂಪೂರ್ಣವಾಗಿ ಪಾವತಿಸಿರುವ ದಕ್ಷಿಣ ಭಾರತದ ಏಕೈಕ ಸಕ್ಮರೆ ಕಾರ್ಖಾನೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೋರಮಂಡಲ್ ಸಕ್ಕರೆ ಕಾರ್ಖಾನೆಯು ಪ್ರಸಕ್ತ ೨೦೨೧-೨೨ನೇ ಸಾಲಿನಲ್ಲಿ ಏಳೂವರೆ ಲಕ್ಷ ಟನ್ ಕಬ್ಬು ಅರೆಯುವ ಗುರಿಯನ್ನು ಹೊಂದಿದೆ. ಪ್ರಸ್ತುತ ರೈತರು ಸರಬರಾಜು ಮಾಡುವ ಪ್ರತೀಟನ್ ಕಬ್ಬಿಗೆ ಕಾರ್ಖಾನೆಯ ಆಡಳಿತ ಮಂಡಳಿಯು ೨೬೫೦ರೂ ಮಂಗಡ ಹಣವನ್ನು ನೀಡಲು ಬದ್ಧವಾಗಿದ್ದು ತಾಲ್ಲೂಕಿನ ಕಬ್ಬು ಬೆಳೆಗಾರರು ಎಂದಿನAತೆ ಕಾರ್ಖಾನೆಗೆ ಕಬ್ಬನ್ನು ಸರಬರಾಜು ಮಾಡಬೇಕು ಎಂದು ರವಿರೆಡ್ಡಿ ಮನವಿ ಮಾಡಿದರು..

ಕೋರಮಂಡಲ್ ಸಕ್ಕರೆ ಕಾರ್ಖಾನೆಯು ಪರಿಸರ ಸ್ನೇಹಿಯಾಗಿದ್ದು ರೈತರ ಪರವಾಗಿ ಕೆಲಸ ನಿರ್ವಹಿಸುತ್ತಿದೆ. ರೈತರು ಹಾಗೂ ಕಬ್ಬು ಬೆಳೆಗಾರರ ಕಲ್ಯಾಣದಲ್ಲಿ ಕಾರ್ಖಾನೆಯ ಅಭಿವೃದ್ಧಿ ಅಡಗಿದೆ ಎಂಬ ಸತ್ಯವನ್ನು ಅರಿತಿರುವ ಕಾರ್ಖಾನೆಯ ಆಡಳಿತ ಮಂಡಳಿಯು ಕಾರ್ಖಾನೆಯು ಸತತವಾಗಿ ನಷ್ಠವನ್ನು ಅನುಭವಿಸುತ್ತಿದ್ದರೂ ರೈತರ ಬಾಕಿ ಹಣವನ್ನು ಸಂಪೂರ್ಣವಾಗಿ ಪಾವತಿಸುತ್ತಿದೆ. ಕಾರ್ಖಾನೆಯು ಕೋಜನರೇಷನ್ ಘಟಕ ಸೇರಿದಂತೆ ಉಪ ಉತ್ಪನ್ನಗಳ ತಯಾರಿಕೆಗೆ ಗಮನ ಹರಿಸಿದ್ದು ರಾಜ್ಯಸರ್ಕಾರದ ಅನುಮತಿಯನ್ನು ಪಡೆದುಕೊಂಡು ಎಥನಾಲ್ ಸೇರಿದಂತೆ ಇತರೆ ಉಪ ಉತ್ಪನ್ನಗಳ ಉತ್ಪಾದನೆಗೆ ಒತ್ತು ನೀಡಲಾಗುವುದು ಎಂದು ಕಾರ್ಖಾನೆಯ ಹಿರಿಯ ಉಪಾಧ್ಯಕ್ಷ ರವಿರೆಡ್ಡಿ ಹೇಳಿದರು..

ಕೋವಿಡ್ ೨ನೇ ಅಲೆಯ ಸಂಕಷ್ಠದ ಸಮಯದಲ್ಲಿಯೂ ಕಾರ್ಖಾನೆಯು ೧೫ ಲಕ್ಷರೂ ಬೆಲೆಬಾಳುವ ವೈದ್ಯಕೀಯ ಉಪಕರಣಗಳು, ಹಾಸಿಗೆ ಮಂಚಗಳು, ಇಸಿಜಿ ಯಂತ್ರ, ಆಂಬ್ಯುಲೆನ್ಸ್, ಆಕ್ಸಿಜನ್ ಘಟಕಕ್ಕೆ ಜನರೇಟರ್, ಜಂಬೋ ಆಕ್ಸಿಜನ್ ಸಿಲಿಂಡರ್ ಗಳನ್ನು ಸರಬರಾಜು ಮಾಡಿದ್ದು ಸಮಾಜ ಸೇವಾ ಕಾರ್ಯಗಳಿಗೂ ಉದಾರವಾಗಿ ಸಹಾಯ ಹಸ್ತವನ್ನು ಚಾಚಿದೆ ಎಂದು ವಿವರಿಸಿದರು..

ಈ ಸಂದರ್ಭದಲ್ಲಿ ತಾಲ್ಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಕುಮಾರ್, ಪ್ರಗತಿಪರ ಕಬ್ಬು ಬೆಳೆಗಾರರಾದ ಬೋರಾಪುರ ಎಸ್.ಬಿ.ಮಂಜುನಾಥ್, ಕಿಕ್ಕೇರಿ ಕಾಯಿಮಂಜೇಗೌಡ, ಮಾಕವಳ್ಳಿ ರಾಮೇಗೌಡ, ಕಾರ್ಖಾನೆಯ ಕಬ್ಬು ವಿಭಾಗದ ಹಿರಿಯ ಅಧಿಕಾರಿ ಕೆ.ಬಾಬೂರಾಜು, ಮಾನವಸಂಪನ್ಮೂಲ ವಿಭಾಗದ ಹಿರಿಯ ಉಪಾಧ್ಯಕ್ಷ ರಮೇಶ್, ಪರ್ಸೋನಲ್ ಮ್ಯಾನೇಜರ್ ಪದ್ಮನಾಭ, ಮಾಕವಳ್ಳಿ ಗ್ರಾಮ ಪಂಚಾಯತಿ ಮಾಜಿಅಧ್ಯಕ್ಷ ಬಲರಾಮೇಗೌಡ, ಮಂಜುನಾಥ್, ಸವಿತಾ ರಾಮೇಗೌಡ ಮತ್ತಿತರರು ಉಪಸ್ಥಿತರಿದ್ದರು.. ಶೃಂಗೇರಿ ಶಾರದಾ ಪೀಠದ ಆಗಮಿಕರು ಹಾಗೂ ವಿದ್ವಾಂಸರ ತಂಡದ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನಡೆದವು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: