April 24, 2024

Bhavana Tv

Its Your Channel

ಪಿಯುಸಿ ಫಲಿತಾಂಶ; ಗ್ರಾಮೀಣ ಪ್ರತಿಭೆ ಹರ್ಷಿತಾಗೆ ೫೯೯ ಅಂಕ

೬೦೦ ಅಂಕಗಳಿಗೆ ೫೯೯ ಅಂಕ ಪಡೆದ ಗ್ರಾಮೀಣ ಪ್ರತಿಭೆಯಾದ ಹರ್ಷಿತಾ ಸಾಧನೆಗೆ ಸಚಿವ ಡಾ.ನಾರಾಯಣಗೌಡರ ಶ್ಲಾಘನೆ

ಕೆ.ಆರ.ಪೇಟೆ: ಗ್ರಾಮೀಣ ಪ್ರತಿಭೆ, ಕೃಷಿ ಕೂಲಿ ಕಾರ್ಮಿಕ ದಂಪತಿಗಳ ಪುತ್ರಿ, ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿ ಶೀಳನೆರೆ ಗ್ರಾಮದ ಎಸ್.ಕೆ.ಹರ್ಷಿತಾ ಸಾಧನೆ.
ಕೆ.ಆರ್.ಪೇಟೆ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿದ್ದುಕೊಂಡು ಕ್ರೈಸ್ಟ್ ದ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದ ತಾಲ್ಲೂಕಿನ ಶೀಳನೆರೆ ಗ್ರಾಮದ ಕೃಷಿ ಕೂಲಿ ಕಾರ್ಮಿಕ ದಂಪತಿಗಳಾದ ಕುಮಾರ, ಮಂಗಳಮ್ಮ ದಂಪತಿಗಳ ಪುತ್ರಿ ಎಸ್.ಕೆ.ಹರ್ಷಿತಾ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ೬೦೦ ಅಂಕಗಳಿಗೆ ೫೯೯ ಅಂಕಗಳನ್ನು ಗಳಿಸಿ ಅದ್ವಿತೀಯ ಸಾಧನೆ ಮಾಡಿ ತಾಲ್ಲೂಕಿನ ಕೀರ್ತಿಯನ್ನು ಬೆಳಗಿದ್ದಾಳೆ.

ಗ್ರಾಮೀಣ ಪ್ರತಿಭೆಯಾಗಿರುವ ಶೀಳನೆರೆ ಗ್ರಾಮದ ಎಸ್.ಕೆ.ಹರ್ಷಿತಾ ಅವರ ಅದ್ವಿತೀಯ ಸಾಧನೆಯನ್ನು ಮಂಡ್ಯ ಜಿಲ್ಲಾ ಸಮಾಜಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ರಂಗೇಗೌಡ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಜಿ.ಆರ್.ಮಹೇಶ್, ನಿಲಯಪಾಲಕಿ ಮಹದೇವಮ್ಮ, ಕ್ರೈಸ್ಟ್ ದ ಕಿಂಗ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಆಂಥೋನಿಸ್ವಾಮಿ ಶ್ಲಾಘಿಸಿ ಅಭಿನಂದಿಸಿದ್ದಾರೆ .
ಗ್ರಾಮೀಣ ಪ್ರತಿಭೆ ಹರ್ಷಿತಾಳ ಮುಂದಿನ ಶೈಕ್ಷಣಿಕ ಪ್ರಗತಿ ಹಾಗೂ ಸಾಧನೆಗೆ ಬೇಕಾದ ಎಲ್ಲಾ ನೆರವನ್ನು ಸಮಾಜಕಲ್ಯಾಣ ಇಲಾಖೆಯ ವತಿಯಿಂದ ದೊರಕಿಸಿಕೊಡುವುದಾಗಿ ಕೆ.ಆರ್.ಪೇಟೆ ತಾಲ್ಲೂಕು ಸಮಾಜಕಲ್ಯಾಣಾಧಿಕಾರಿ ಜಿ.ಆರ್.ಮಹೇಶ್ ಅಭಿಮಾನದಿಂದ ಹೇಳಿದರು.

ವರದಿ: ಡಾ.ಕೆ.ಆರ್.ನೀಲಕಂಠ . ಕೃಷ್ಣರಾಜಪೇಟೆ . ಮಂಡ್ಯ

error: