April 23, 2024

Bhavana Tv

Its Your Channel

ಹಡಪದ ಅಪ್ಪಣ್ಣ ಜಯಂತಿ ಹಾಗೂ ನಯನಜಕ್ಷತ್ರಿಯ ಕ್ಷೌರಿಕ ಜನಾಂಗದ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ

ಕೃಷ್ಣರಾಜಪೇಟೆ : ನಯನಜ ಕ್ಷತ್ರಿಯ ಕ್ಷೌರಿಕ ಸಮಾಜದ ಬಂಧುಗಳು ಸಂಘಟಿತರಾಗಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬಂಧು ಸಾಧನೆ ಮಾಡಬೇಕು ಎಂದು ಪಟ್ಟಣದ ಬಸವನಗುಡಿ ಕಲ್ಲುಮಠದ ಶ್ರೀ ಡಾ. ವಿರೂಪಾಕ್ಷರಾಜಯೋಗಿ ಸಂಗಯ್ಯಹಿರೇಮಠ ಕರೆ ನೀಡಿದರು .

ಅವರು ಇಂದು ಕೆ.ಆರ್.ಪೇಟೆ ಪಟ್ಟಣದ ಹಳೇಕಿಕ್ಕೇರಿ ರಸ್ತೆಯಲ್ಲಿರುವ ಸಿಂಗಮ್ಮದೇವಿ ದೇವಾಲಯದ ಆವರಣದಲ್ಲಿ ನಡೆದ ಹಡಪದ ಅಪ್ಪಣ್ಣ ಜಯಂತಿ ಹಾಗೂ ನಯನಜಕ್ಷತ್ರಿಯ ಕ್ಷೌರಿಕ ಜನಾಂಗದ ಕ್ಷೇಮಾಭಿವೃದ್ಧಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಅಸಂಘಟಿತರಾಗಿರುವ ನಯನಜಕ್ಷತ್ರಿಯ ಸಮಾಜದ ಬಂಧುಗಳು ಸಂಘಟಿತರಾಗಿ ತಮಗೆ ಸಂವಿಧಾನ ಬದ್ಧವಾಗಿ ದೊರೆಯಬೇಕಾದ ಸೌಲಭ್ಯಗಳನ್ನು ಕೇಳಿ ಪಡೆದುಕೊಂಡು ಆರ್ಥಿಕವಾಗಿ ಸಬಲೀಕರಣ ಸಾಧಿಸಿ ಸಮಾಜದ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡಬೇಕು ಎಂದು ಮನವಿ ಮಾಡಿದ ಶ್ರೀ ವಿರೂಪಾಕ್ಷರಾಜಯೋಗಿಗಳು ನಯನಜಕ್ಷತ್ರಿಯ ಸಮಾಜದ ಬಂಧುಗಳು ದುಶ್ಚಟಗಳಿಂದ ದೂರವಿದ್ದು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳಿಸಿ ವಿದ್ಯಾವಂತರನ್ನಾಗಿ ಮಾಡಬೇಕು. ಕಾಯಕಯೋಗಿ ಬಸವಣ್ಣನವರ ಆಪ್ತಶಿಷ್ಯರಾಗಿದ್ದ ಹಡಪದ ಅಪ್ಪಣ್ಣನವರ ಆದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು. ಪಟ್ಟಣದ ಸಿಂಗಮ್ಮದೇವಿ ದೇವಾಲಯದ ಆವರಣದಲ್ಲಿ ಹಡಪದ ಅಪ್ಪಣ್ಣನವರ ಶಿಲಾಮೂರ್ತಿಯನ್ನು ಸ್ಥಾಪಿಸಿ ಪೂಜೆ ಪುರಸ್ಕಾರ ಮಾಡುವ ಮೂಲಕ ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು..

ಕೆ.ಆರ್.ಪೇಟೆ ತಾಲ್ಲೂಕಿನ ನಯನಜ ಕ್ಷತ್ರಿಯ ಸಮಾಜದ ಸಂಸ್ಥಾಪಕ ಅಧ್ಯಕ್ಷರಾದ ಡಾ.ಶಿವಪ್ಪ, ಈರುಳ್ಳಿರಾಮಣ್ಣ, ಪುರಸಭಾ ಸದಸ್ಯರಾದ ನಟರಾಜ್, ಹೆಚ್.ಆರ್.ಲೋಕೇಶ್, ವಿಶ್ವನಾಥ, ಸಮಾಜದ ಮುಖಂಡರಾದ ಸಂತೇಬಾಚಹಳ್ಳಿ ಮಂಜುನಾಥ್, ಸಿದ್ಧರಾಜು, ಲೋಕೇಶ್, ಮೋದೂರು ಮಂಜುನಾಥ್, ಶಿವಣ್ಣ, ರಾಮಣ್ಣ, ವೆಂಕಟಪ್ಪ, ಅಚ್ಚಣ್ಣ, ಗೋವಿಂದರಾಜು, ಕೆ.ಪಿ.ನಾಗರಾಜು, ದೊಡ್ಡಯ್ಯ, ಶಿವರಾಮು, ನಯನಜಕ್ಷತ್ರಿಯ ಕ್ಷೌರಿಕ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷ ಕೆ.ಆರ್.ದಿನೇಶ್, ಉಪಾಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ಕೆ.ವಿ.ಸೋಮಶೇಖರ್, ಸಹಕಾರ್ಯದರ್ಶಿ ಎನ್.ವಾಸು, ಖಜಾಂಚಿ ಹೆಚ್.ವಿ.ಸತೀಶ್ ಹಾಗೂ ಸಂಘದ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಸಮಾಜದ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: