October 20, 2021

Bhavana Tv

Its Your Channel

ಜೆಡಿಎಸ್ ಯುವ ಘಟಕದ ವತಿಯಿಂದ ಕರೋನ ವಾರಿಯರ್ಸ್ ಗಳಿಗೆ ಸನ್ಮಾನ

ಕೃಷ್ಣರಾಜಪೇಟೆ ತಾಲೂಕಿನಾದ್ಯಂತ ಕೊರೋನ ಮೊದಲನೆಯ ಹಾಗೂ ಎರಡನೇ ಅಲೆಯಲ್ಲಿ ಕೊರೋನಾ ಸೋಂಕಿನಿAದ ಮೃತಪಟ್ಟ ವ್ಯಕ್ತಿಗಳ ಅಂತ್ಯಸAಸ್ಕಾರವನ್ನು ಅವರವರ ಧರ್ಮದ ಪ್ರಕಾರ ನಿರಂತರವಾಗಿ ನೆರವೇರಿಸುತ್ತಿರುವ ಕೆ.ಆರ್.ಪೇಟೆ ತಾಲ್ಲೂಕಿನ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಸೇವೆಯನ್ನು ಮೆಚ್ಚಿ ಇಂದು ಕೆ.ಆರ್.ಪೇಟೆ ತಾಲೂಕು ಜೆಡಿಎಸ್ ಯುವ ಘಟಕದ ವತಿಯಿಂದ ಕರೋನ ವಾರಿಯರ್ಸ್ ಗಳಿಗೆ ಹೃದಯಸ್ಪರ್ಶಿಯಾಗಿ ಸನ್ಮಾನಿಸಲಾಯಿತು .

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕು ಯುವ ಘಟಕದ ಅಧ್ಯಕ್ಷರಾದ ಕೆ.ಎಸ್. ಸಂತೋಷ್ ಕುಮಾರ್ ಸಂಘಟನೆಯ ಕಾರ್ಯಕರ್ತರು ತಮ್ಮ ಜೀವದ ಹಂಗನ್ನು ತೊರೆದು ಕೊರೋನ ಸೋಂಕಿನಿAದ ಮೃತಪಟ್ಟ ವ್ಯಕ್ತಿಗಳ ಅಂತ್ಯಸAಸ್ಕಾರವನ್ನು ತಾಲೂಕಿನಾದ್ಯಂತ ನೆರವೇರಿಸುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು ಹಾಗೂ ಸಂಘಟನೆಯ ಸೇವೆಯು ಇದೇ ರೀತಿ ಮುಂದುವರೆಯಲಿ ಎಂದು ಆಶಿಸಿದರು.

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ತಾಲೂಕು ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಅಧ್ಯಕ್ಷರಾದ ಶಫೀಉಲ್ಲಾ ನಮ್ಮ ಸೇವೆಯು ನಿರಂತರವಾಗಿ ಮುಂದುವರಿಯಲಿದೆ ಎಂದು ಹೇಳಿದರು ಹಾಗೂ ಆದಷ್ಟು ಬೇಗ ಪ್ರಪಂಚದಿAದ ಕೊರೋನಾ ಮಹಾಮಾರಿಯ ಮುಕ್ತಿಯಾಗಲಿ ಎಂದು ದಯಾಮಯನಾದ ಭಗವಂತನನ್ನು ಪ್ರಾರ್ಥಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಪಿಎಫ್ ಐ ಅಧ್ಯಕ್ಷರಾದ ಶಫಿವುಲ್ಲಾ ಹಾಗೂ ಸಂಗಡಿಗರು ತಾಲೂಕು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಕೆ.ಎಸ್.ಸಂತೋಷ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎನ್.ಜಿ.ಸಾಗರ್ ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: