March 26, 2024

Bhavana Tv

Its Your Channel

ನಾಳೆ ಕೆ.ಆರ್.ಪೇಟೆಗೆ ಆಗಮಿಸುತ್ತಿರುವ ಡಾ.ನಾರಾಯಣಗೌಡರವರನ್ನು ಹೃದಯಸ್ಪರ್ಶಿಯಾಗಿ ಸ್ವಾಗತಿಸಲು ಅಭಿಮಾನಿಗಳ ನಿರ್ಧಾರ

ಕೆ.ಆರ್.ಪೇಟೆ: ರಾಜ್ಯದ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಸಚಿವ ಸಂಪುಟದಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿಸಿ ದಿನಾಂಕ ೬ರ(ನಾಳೆ) ಶುಕ್ರವಾರ ಸಂಜೆ ೪ಗಂಟೆಗೆ ಕೆ.ಆರ್.ಪೇಟೆಗೆ ಆಗಮಿಸುತ್ತಿರುವ ಡಾ.ನಾರಾಯಣಗೌಡ ಅವರನ್ನು ಹೃದಯಸ್ಪರ್ಶಿಯಾಗಿ ಸ್ವಾಗತಿಸಲು ಅಭಿಮಾನಿಗಳ ನಿರ್ಧಾರ.

ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಇದೇ ಪ್ರಥಮ ಬಾರಿಗೆ ಕೆ.ಆರ್.ಪೇಟೆಗೆ ಆಗಮಿಸುತ್ತಿರುವ ಡಾ.ನಾರಾಯಣಗೌಡ ಅವರನ್ನು ಹೃದಯಸ್ಪರ್ಶಿಯಾಗಿ ಸ್ವಾಗತಿಸಲು ನಾರಾಯಣಗೌಡರ ಅಭಿಮಾನಿಗಳು ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಿದರು…

ಕೆ.ಆರ್.ಪೇಟೆ ತಾಲ್ಲೂಕು ಬಿಜೆಪಿ ಅಧ್ಯಕ್ಷ ಪರಮೇಶ್ ಅರವಿಂದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಜಿಪಂ ಮಾಜಿಉಪಾಧ್ಯಕ್ಷ ಕೆ.ಎಸ್.ಪ್ರಭಾಕರ್, ಮನ್ ಮುಲ್ ನಿರ್ದೇಶಕ ಕೆ.ಜಿ.ತಮ್ಮಣ್ಣ, ತಾ.ಪಂ ಮಾಜಿಅಧ್ಯಕ್ಷ ಬಿ.ಜವರಾಯಿಗೌಡ, ಮಾಜಿಸದಸ್ಯ ಬಿಲ್ಲೇನಹಳ್ಳಿ ಕುಮಾರ್, ಸಚಿವ ನಾರಾಯಣಗೌಡ ಅಭಿಮಾನಿ ಬಳಗದ ಅಧ್ಯಕ್ಷ ಚಂದ್ರಮೋಹನ್, ಗೌರವಾಧ್ಯಕ್ಷ ಕೆ.ಆರ್.ನೀಲಕಂಠ, ಉಪಾಧ್ಯಕ್ಷ ಕರ್ತೇನಹಳ್ಳಿ ಸುರೇಶ್, ತಾಲ್ಲೂಕು ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಲತಾಮುರಳಿ, ನಗರ ಅಧ್ಯಕ್ಷೆ ಚಂದ್ರಕಲಾ, ಪ್ರಧಾನ ಕಾರ್ಯದರ್ಶಿ ಭಾರತಿಪುರ ಪುಟ್ಟಣ್ಣ ಪೂರ್ವಬಾವಿ ಸಭೆಯಲ್ಲಿ ಮಾತನಾಡಿ ಎರಡನೇ ಅವಧಿಗೆ ಸಚಿವರಾಗಿ ಅಧಿಕಾರ ಸ್ವೀಕರಿಸಿ ಕೆ.ಆರ್.ಪೇಟೆಗೆ ತೆಂಡೇಕೆರೆಯ ಮೂಲಕ ಆಗಮಿಸುತ್ತಿರುವ ಸಚಿವರನ್ನು ಅಶೋಕನಗರದಿಂದ ಬೈಕ್ ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲು ತೀರ್ಮಾನಿಸಲಾಯಿತು.

ಶುಕ್ರವಾರ ಕೆ.ಆರ್.ಪೇಟೆ ಪುರಸಭಾ ವ್ಯಾಪ್ತಿಯ ಕೆ.ಆರ್.ಪೇಟೆ ಮತ್ತು ಹೊಸಹೊಳಲು ಗ್ರಾಮದಲ್ಲಿ ಅಭಿನಂದನೆ ಹಾಗೂ ಶನಿವಾರ ಬೆಳಿಗ್ಗೆ ೧೧ ಗಂಟೆಯಿAದ ಸಂಜೆ ೫ಗಂಟೆಯವರೆಗೆ ತಾಲ್ಲೂಕಿನ ಸಂತೇಬಾಚಹಳ್ಳಿ, ಶೀಳನೆರೆ, ಬೂಕನಕೆರೆ, ಅಕ್ಕಿಹೆಬ್ಬಾಳು, ಕಿಕ್ಕೇರಿ ಹೋಬಳಿ ಕೇಂದ್ರಗಳಲ್ಲಿ ಸಾಮಾಜಿಕ ಅಂತರದೊAದಿಗೆ ಸಚಿವರಿಗೆ ಹೃದಯಸ್ಪರ್ಶಿ ಅಭಿನಂದನೆ ಸಲ್ಲಿಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಎಸ್.ಸಿ ಮೋರ್ಚಾ ಅಧ್ಯಕ್ಷ ರವಿಶಿವಕುಮಾರ್, ಎಸ್.ಟಿ ಮೋರ್ಚಾ ಅಧ್ಯಕ್ಷ ಮಹೇಶನಾಯಕ್, ಯುವ ಘಟಕದ ಅಧ್ಯಕ್ಷ ದಿಲೀಪ್, ಓಬಿಸಿ ಘಟಕದ ಅಧ್ಯಕ್ಷ ಸಾರಂಗಿನಾಗರಾಜು, ಯಡಿಯೂರಪ್ಪ ಅಭಿಮಾನಿ ಬಳಗದ ಅಧ್ಯಕ್ಷ ಬೂಕನಕೆರೆ ಮಧುಸೂಧನ್, ಪುರಸಭಾ ಅಧ್ಯಕ್ಷೆ ಮಹಾದೇವಿನಂಜುAಡ, ಮುಖಂಡರಾದ ಶ್ರೀನಿವಾಸಕೇಸರಿ, ದೇವರಾಜು, ಬಣ್ಣೇನಹಳ್ಳಿ ಶ್ರೀನಿವಾಸ್, ಏಜಾಸ್ ಪಾಶ, ಚೋಕನಹಳ್ಳಿ ಪ್ರಕಾಶ್, ಕೈಗೋನಹಳ್ಳಿ ಕುಮಾರ್, ಹೊಸೂರು ಸ್ವಾಮಿಗೌಡ, ಬೀರವಳ್ಳಿ ಕುಮಾರ್ ಸೇರಿದಂತೆ ನೂರಾರು ಕಾರ್ಯಕರ್ತರು ಅಭಿಮಾನಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: