April 20, 2024

Bhavana Tv

Its Your Channel

ಯಶಸ್ವಿನಿ ಸಮುದಾಯ ಭವನದಲ್ಲಿ ಯಶಸ್ವಿ ಗುರುಪೂರ್ಣಿಮಾ ಕಾರ್ಯಕ್ರಮ

ಕೃಷ್ಣರಾಜಪೇಟೆ ಪಟ್ಟಣದ ಯಶಸ್ವಿನಿ ಸಮುದಾಯ ಭವನದಲ್ಲಿ ಯಶಸ್ವಿ ಗುರುಪೂರ್ಣಿಮಾ ಕಾರ್ಯಕ್ರಮ. ಸಚಿವ ನಾರಾಯಣಗೌಡ ಭಾಗಿ, ಭಗವಾಧ್ವಜಕ್ಕೆ ನಮಿಸಿ ಗುರುಕಾಣಿಕೆ ಸಮರ್ಪಿಸಿದ ಸಚಿವರು .

ಕೆ.ಆರ್.ಪೇಟೆ ಪಟ್ಟಣದ ಯಶಸ್ವಿನಿ ಸಮುದಾಯ ಭವನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಗುರುಪೂರ್ಣಿಮೆಯ ಅಂಗವಾಗಿ ಬೌದ್ಧಿಕ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಆರ್.ಎಸ್.ಎಸ್ ಮೈಸೂರು ವಿಭಾಗದ ಪ್ರಚಾರಕರಾದ ಅಕ್ಷಯ್ ಜೀ ಗುರುಪೂರ್ಣಿಮಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಗವಾಧ್ವಜಕ್ಕೆ ನಮನ ಸಲ್ಲಿಸಿ ಉಪನ್ಯಾಸ ನೀಡಿ ಗುರುಕಾಣಿಕೆ ಸಮರ್ಪಿಸಿದರು.. ವಿಶ್ವದ ಎಲ್ಲಾ ಹಿಂದೂಗಳನ್ನು ಒಗ್ಗೂಡಿಸಿ ಸಮಾಜಮುಖಿಯಾಗಿ ಮುನ್ನಡೆಸುವ ಶಕ್ತಿ ಹಾಗೂ ಸಾಮರ್ಥ್ಯವು ಭಗವಾಧ್ವಜಕ್ಕಿದೆ. ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಯಾವುದೇ ಧರ್ಮದ ಒಡೆದ ಮನಸ್ಸುಗಳನ್ನು ಒಗ್ಗೂಡಿಸುವ, ರಾಷ್ಟ್ರಭಕ್ತಿ ಹಾಗೂ ರಾಷ್ಟ್ರಪ್ರೇಮವನ್ನು ತುಂಬಿ ಹಿಂದೂ ಧರ್ಮದ ತಾಯಿ ಪ್ರೀತಿಯ ಬಗ್ಗೆ ಅರಿವಿನ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಬದ್ಧತೆಯಿಂದ ಮಾಡುತ್ತಿದೆ. ಗುರುಹಿರಿಯರು, ತಂದೆತಾಯಿಗಳು ಹಾಗೂ ನಮ್ಮ ಭಾರತ ದೇಶದ ನೆಲದ ಶ್ರೇಷ್ಠತೆಯ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ನಿಸ್ವಾರ್ಥ ಮನೋಭಾವದಿಂದ ಸಮಾಜಕ್ಕೆ ಹೊರೆಯಾಗದೇ ನಮ್ಮ ಪಾಲಿನ ಕೆಲಸವನ್ನು ನಾವು ಮಾಡುವ ಮೂಲಕ ಇತರರಿಗೆ ಮಾದರಿಯಾಗಬೇಕು. ನಮ್ಮ ರಕ್ತದ ಪ್ರತೀ ಕಣ ಕಣದಲ್ಲಿಯೂ ದೇಶಭಕ್ತಿ ಹಾಗೂ ದೇಶಾಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದ ಅಕ್ಷಯ್ ಜಿ ನಮ್ಮ ನಡೆನುಡಿ ಹಾಗೂ ಆದರ್ಶ ಗುಣಗಳು ಇತರರಿಗೆ ಮಾದರಿಯಾಗಿರಬೇಕು ಎಂದು ಕರೆ ನೀಡಿದರು.

ಆರ್ ಎಸ್ ಎಸ್ ಜಿಲ್ಲಾ ಪ್ರಚಾರಕ ರವಿಕುಮಾರ್, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ, ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಜೆ.ವಿಜಯಕುಮಾರ್, ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಆರ್.ಎಸ್.ಎಸ್ ಸ್ವಯಂಸೇವಕರಾದ ಮುರುಗೇಶ್, ಹೆಚ್.ಬಿ.ಮಂಜುನಾಥ್, ತಾಲೂಕು ಬಿಜೆಪಿ ಅಧ್ಯಕ್ಷ ಪರಮೇಶ್ ಅರವಿಂದ್, ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಶಿವರಾಮೇಗೌಡ, ಓಬಿಸಿ ಘಟಕದ ಅಧ್ಯಕ್ಷ ಸಾರಂಗಿನಾಗರಾಜು, ಎಸ್.ಸಿ ಮೋರ್ಚಾ ಅಧ್ಯಕ್ಷ ರವಿಶಿವಕುಮಾರ್, ಉಧ್ಯಮಿಗಳಾದ ಕೆ.ಆರ್.ಚಂದ್ರಶೇಖರ್, ಕೆ.ಪಿ.ಜಯಂತ್, ಕುಮಾರ್ , ಪುರಸಭೆ ಸದಸ್ಯ ನಟರಾಜ್ ಸೇರಿದಂತೆ ಐವತ್ತಕ್ಕೂ ಹೆಚ್ಚು ಸ್ವಯಂ ಸೇವಕರು ಭಾಗವಹಿಸಿ ಗುರುಕಾಣಿಕೆ ಸಮರ್ಪಿಸಿದರು..

ಗುರುಪೂರ್ಣಿಮಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್ಯದ ಯುವಜನಸೇವೆ, ಕ್ರೀಡೆ ಹಾಗೂ ರೇಷ್ಮೆ ಖಾತೆಗಳ ಸಚಿವರಾದ ಡಾ.ನಾರಾಯಣಗೌಡ ಗುರುಕಾಣಿಕೆ ಸಮರ್ಪಿಸಿ, ಬೌದ್ಧಿಕ್ ಕಾರ್ಯಕ್ರಮ ಮುಗಿಯುವವರೆಗೂ ಉಪಸ್ಥಿತರಿದ್ದು ನಂತರ ಬೆಂಗಳೂರಿಗೆ ತೆರಳಿದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: