April 26, 2024

Bhavana Tv

Its Your Channel

ಕೆ.ಆರ್.ಪೇಟೆ ತಾಲ್ಲೂಕಿನ ದಬ್ಬೇಘಟ್ಟದ ಬಳಿ ನರೇಂದ್ರಪ್ರಸಾದ್ ಕಬ್ಬಿನ ಗದ್ದೆಯಲ್ಲಿ ಬೋನಿಗೆ ಬಿದ್ದ ಭಾರೀ ಗಾತ್ರದ ಗಂಡು ಚಿರತೆ

ಕೆ.ಆರ್.ಪೇಟೆ: ಮೂರು ದಿನಗಳ ಅಂತರದಲ್ಲಿ ಬೋನಿಗೆ ಬಿದ್ದ ಎರಡನೇ ಚಿರತೆನೆಮ್ಮದಿನ ನಿಟ್ಟುಸಿರು ಬಿಟ್ಟ ಗ್ರಾಮಸ್ಥರುಅರಣ್ಯ ಇಲಾಖೆಯ ಕಾರ್ಯಾಚರಣೆಗೆ ಗ್ರಾಮಸ್ಥರು ಹಾಗೂ ಸಾರ್ವಜನಿಕರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದಬ್ಬೇಘಟ್ಟ ಭಾಗದಲ್ಲಿ ಹೆಚ್ಚಾಗಿದ್ದ ಚಿರತೆ ಹಾವಳಿಯ ನಿಯಂತ್ರಣಕ್ಕೆ ಮುಂದಾದ ಅರಣ್ಯ ಇಲಾಖೆ
ಕಬ್ಬು ಕಟಾವು ಮಾಡುವ ನೌಕರರು ಎಚ್ಚರವಾಗಿ, ಪಟಾಕಿ ಸಿಡಿಸಿ ಇಲ್ಲವೇ ಶಬ್ದಮಾಡಿ ಕಬ್ಬಿನ ಗದ್ದೆಗಳಲ್ಲಿ ಕಬ್ಬು ಕಡಿಯಲು ಮುಂದಾಗಬೇಕು, ಚಿರತೆ ಮರಿಗಳು ಸೇರಿದಂತೆ ಚಿರತೆಗಳು ಕಂಡು ಬಂದರೆ ಅರಣ್ಯ ಇಲಾಖೆಯ ಗಮನಕ್ಕೆ ತರಲು ತಾಲ್ಲೂಕು ವಲಯ ಅರಣ್ಯಾಧಿಕಾರಿ ಹೆಚ್.ಎಸ್.ಗಂಗಾಧರ ಮನವಿ ಮಾಡಿದ್ದಾರೆ…
ಚಿರತೆ ಸೆರೆಹಿಡಿದ ಕಾರ್ಯಾಚರಣೆಯಲ್ಲಿ ಸಹಾಯಕ ವಲಯ ಅರಣ್ಯಾಧಿಕಾರಿಗಳಾದ ರಮೇಶ್, ರಾಘವೇಂದ್ರ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.. ಸೆರೆ ಸಿಕ್ಕ ಭಾರೀ ಗಾತ್ರದ ಚಿರತೆಯನ್ನು ಕೊಳ್ಳೇಗಾಲದ ಕಾವೇರಿ ವನ್ಯಜೀವಿ ಅಭಯಾರಣ್ಯಕ್ಕೆ ಬಿಡಲಾಯಿತು..

ವರದಿ:. ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: