April 23, 2024

Bhavana Tv

Its Your Channel

ಸಮಗ್ರ ಕೃಷಿ ಅಭಿಯಾನ ಪ್ರಚಾರ ರಥಕ್ಕೆ ಸಚಿವ ಡಾ.ನಾರಾಯಣಗೌಡ ಹಸಿರು ನಿಶಾನೆಯನ್ನು ತೋರಿಸುವ ಮೂಲಕ ಚಾಲನೆ

ಕೃಷ್ಣರಾಜಪೇಟೆ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಿ ಕೇಂದ್ರಗಳಲ್ಲಿ ಇಂದಿನಿAದ ಮೂರು ದಿನಗಳ ಕಾಲ ಸಂಚರಿಸಲಿರುವ ಸಮಗ್ರ ಕೃಷಿ ಅಭಿಯಾನ ಪ್ರಚಾರ ರಥಕ್ಕೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಹಸಿರು ನಿಶಾನೆಯನ್ನು ತೋರಿಸುವ ಮೂಲಕ ಚಾಲನೆ ನೀಡಿದರು …

ಕೆ.ಆರ್.ಪೇಟೆ ಪಟ್ಟಣದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿಯ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕೃಷಿ ಇಲಾಖೆಯ ವತಿಯಿಂದ ಹೊರತಂದ ವೈಜ್ಞಾನಿಕ ಕೃಷಿ ಪದ್ದತಿ, ಸಿರಿ ಧಾನ್ಯಗಳ ಬೇಸಾಯ ಕುರಿತ ಪ್ರಚಾರದ ಕರಪತ್ರಗಳು ಹಾಗೂ ಪೋಸ್ಟರ್ ಗಳನ್ನು ಬಿಡುಗಡೆಗೊಳಿಸಿ ನೆರೆದಿದ್ದ ಪ್ರಗತಿಪರ ರೈತರು ಹಾಗೂ ಜನಪ್ರತಿನಿಧಿಗಳನ್ನು ಕುರಿತು ಮಾತನಾಡಿದರು…

ಕೃಷಿ ಅಧಿಕಾರಿಗಳು ಕೇವಲ ಸಂಬಳದ ಹಣಕ್ಕಾಗಿ ಕಾಟಾಚಾರಕ್ಕೆ ಕೆಲಸ ಮಾಡದೇ ಅನ್ನಧಾತನಾದ ರೈತರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಬೇಸಾಯ ಕ್ರಮಗಳ ಬಗ್ಗೆ ಅರಿವಿನ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಹಳ್ಳಿಗಳಿಗೆ ತೆರಳಿ ಜಾಗೃತಿ ಮಾಡಿಸಬೇಕು.. ಕೃಷಿಯನ್ನು ಲಾಭದಾಯಕ ಉದ್ಯಮವಾಗುವ ರೀತಿಯಲ್ಲಿ ರೈತಬಾಂಧವರಿಗೆ ವೈಜ್ಞಾನಿಕ ಬೇಸಾಯ ಪದ್ಧತಿ, ಸಾವಯವ ಹಾಗೂ ನೈಸರ್ಗಿಕ ಕೃಷಿಯ ಬಗ್ಗೆ ಬೇಸಾಯ ಮಾಡಲು ಪೂರಕವಾದ ಮಾಹಿತಿಯನ್ನು ನೀಡಿ ಸಹಕರಿಸಬೇಕು. ಕೃಷಿ ಅಧಿಕಾರಿಗಳು ರೈತರ ಪರವಾದ ಕಾಳಜಿ, ಕಳಕಳಿ ಹಾಗೂ ಬದ್ಧತೆಯನ್ನು ಇಟ್ಟುಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು..ರೈತವಿರೋಧಿ ಅಧಿಕಾರಿಗಳು ತಮ್ಮ ಕಾರ್ಯವೈಖರಿಯನ್ನು ಬದಲಾಯಿಸಿಕೊಂಡು ಕೆಲಸ ಮಾಡಬೇಕು.ಇಲ್ಲದಿದ್ದರೆ ನಾನು ತಕ್ಕಪಾಠವನ್ನು ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು..

ಕೃಷ್ಣರಾಜಪೇಟೆ ತಾಲ್ಲೂಕಿನ ರೈತ ಬಾಂಧವರು ಪ್ರಗತಿಪರ ರೈತರಾದ ಲಕ್ಷ್ಮೀದೇವಮ್ಮ ಹಾಗೂ ವಿಠಲಾಪುರ ಸುಬ್ಬೇಗೌಡ ಅವರಂತೆ ವೈಜ್ಞಾನಿಕವಾಗಿ ಬೇಸಾಯ ಮಾಡಿ ಹೆಚ್ಚಿನ ಲಾಭಗಳಿಸಿ ಮುನ್ನಡೆಯಬೇಕು ಎಂದು ಸಚಿವ ಡಾ.ನಾರಾಯಣಗೌಡ ಮನವಿ ಮಾಡಿದರು..

ಮಂಡ್ಯ ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ಕೆ.ಎಸ್.ಪ್ರಭಾಕರ್, ಶೀಳನೆರೆ ಅಂಬರೀಶ್, ತಾಲ್ಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಕುಮಾರ್, ಎಪಿಎಂಸಿ ಅಧ್ಯಕ್ಷೆ ಮಾಲತಿಬಸವೇಗೌಡ, ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಮನ್ ಮುಲ್ ನಿರ್ದೇಶಕ ಕೆ.ಜಿ.ತಮ್ಮಣ್ಣ, ಕೃಷಿ ಇಲಾಖೆಯ ಪಾಂಡವಪುರ ಉಪವಿಭಾಗದ ಉಪನಿರ್ದೇಶಕಿ ಕ್ಯಾತನಹಳ್ಳಿ ಮಮತಾ , ತಾಲ್ಲೂಕು ಸಹಾಯಕ ಕೃಷಿನಿರ್ದೇಶಕ ಮಂಜುನಾಥ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಲೋಕೇಶ್, ತಾಲ್ಲೂಕು ಕೃಷಿಕ ಸಮಾಜದ ಮಾಜಿಅಧ್ಯಕ್ಷ ಹೆತ್ತಗೋನಹಳ್ಳಿ ನಾರಾಯಣಗೌಡ, ಪದಾಧಿಕಾರಿಗಳಾದ ವಿಠಲಾಪುರ ಸುಬ್ಬೇಗೌಡ, ಜಾಗಿನಕೆರೆ ನಾರಾಯಣಗೌಡ, ಅಕ್ಕಿಹೆಬ್ಬಾಳು ರಾಮಸ್ವಾಮಿ, ಪುರಸಭೆ ಅಧ್ಯಕ್ಷೆ ಮಹಾದೇವಿನಂಜುAಡ, ಸದಸ್ಯೆ ಶುಭಾಗಿರೀಶ್, ಕೃಷಿ ಅಧಿಕಾರಿಗಳಾದ ಶ್ರೀಧರ್, ಸತೀಶ್ ಚಂದ್ರ ಮತ್ತಿತರರು ಉಪಸ್ಥಿತರಿದ್ದರು..
ಇದೇ ಸಂದರ್ಭದಲ್ಲಿ ರೈತರಿಗೆ ರೋಟೋವೇಟರ್, ಟಿಲ್ಲರ್ ಗಳು, ಚಾಪ್ ಕಟರ್ ಗಳನ್ನು ವಿತರಿಸಲಾಯಿತು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: