March 29, 2024

Bhavana Tv

Its Your Channel

ಕೋಟೆ ಭೈರವೇಶ್ವರ ವ್ಯಾಪಾರಸ್ಥರ ಪತ್ತಿನ ಸಹಕಾರ ಬ್ಯಾಂಕ್ ನ ಚಿನ್ನದ ಆಭರಣಗಳ ಸಾಲ ಸೌಲಭ್ಯ ಶಾಖೆಯ ಉದ್ಘಾಟನೆ

ವರದಿ: ಡಾ.ಕೆ.ಆರ್.ನೀಲಕಂಠ.ಕೃಷ್ಣರಾಜಪೇಟೆ. ಮಂಡ್ಯ

ಮoಡ್ಯ: ಕೋಟೆ ಭೈರವೇಶ್ವರ ವ್ಯಾಪಾರಸ್ಥರ ಪತ್ತಿನ ಸಹಕಾರ ಬ್ಯಾಂಕ್ ನ ಚಿನ್ನದ ಆಭರಣಗಳ ಸಾಲ ಸೌಲಭ್ಯ ಶಾಖೆಯ , ಚಿನ್ನಾಭರಣಗಳಿಡುವ ಭದ್ರತಾ ಲಾಕರ್ ಲೋಕಾರ್ಪಣೆಗೊಳಿಸಿ ಪೂಜೆ ಸಲ್ಲಿಸಿದ ತಹಶೀಲ್ದಾರ್ ಎಂ.ಶಿವಮೂರ್ತಿ ಮತ್ತು ಬ್ಯಾಂಕ್ ಅಧ್ಯಕ್ಷೆ ಕೆ.ಮಂಜುಳಾಚನ್ನಕೇಶವ …

ರೈತ ಬಂಧುಗಳು ಹಾಗೂ ವ್ಯಾಪಾರಸ್ಥರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲಸೌಲಭ್ಯವನ್ನು ನೀಡಿ ರೈತರ ಆರ್ಥಿಕ ವ್ಯವಹಾರಗಳ ಅಭ್ಯುದಯಕ್ಕೆ ತಮ್ಮದೇ ಕಾಣಿಕೆಯನ್ನು ನೀಡುತ್ತಿರುವ ಸಹಕಾರ ಸಂಘಗಳು ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದು ತಹಶೀಲ್ದಾರ್ ಎಂ.ಶಿವಮೂರ್ತಿ ಕರೆ ನೀಡಿದರು.

ಅವರು ಇಂದು ಪಟ್ಟಣದ ಬಿಜಿಎಸ್ ವಾಣಿಜ್ಯ ಸಮುಚ್ಛಯದಲ್ಲಿರುವ ಶ್ರೀ ಕೋಟೆಭೈರವೇಶ್ವರ ಪತ್ತಿನ ಸಹಕಾರ ಸಂಘದ ಚಿನ್ನಾಭರಣ ಶಾಖೆಯನ್ನು ಚಾಲನೆಗೊಳಿಸಿ ಭದ್ರತಾ ಲಾಕರ್ ಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು..

ರೈತರ ಕೃಷಿ ಚಟುವಟಿಕೆಗಳಿಗೆ ಬೇಕಾದ ಭಿತ್ತನೆ ಬೀಜಗಳು, ರಸಗೊಬ್ಬರ ಹಾಗೂ ಕೃಷಿ ಹುಟ್ಟುವಳಿಗಳನ್ನು ಸಕಾಲದಲ್ಲಿ ಒದಗಿಸಿ ಕಡಿಮೆ ಬಡ್ಡಿ ದರದಲ್ಲಿ ಸಾಲಸೌಲಭ್ಯವನ್ನು ನೀಡಿ ಮಾರ್ವಾಡಿಗಳು ಹಾಗೂ ದಳ್ಳಾಳಿಗಳ ಮೀಟರ್ ಬಡ್ಡಿಯ ಸಾಲಕ್ಕೆ ಅಂಕುಶ ಹಾಕಿರುವ ಸಹಕಾರ ಸಂಘಗಳು ಪಕ್ಷಾತೀತವಾಗಿ ಬದ್ಧತೆಯಿಂದ ಕೆಲಸ ಮಾಡಿ ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ ನೆರವಾಗಬೇಕು. ಈ ನಿಟ್ಟಿನಲ್ಲಿ ೬೦೦ಕ್ಕೂ ಹೆಚ್ಚಿನ ಶೇರುದಾರರನ್ನು ಹೊಂದಿರುವ ಬ್ಯಾಂಕ್ ಲಾಭಗಳಿಸಿ ಅಭಿವೃದ್ಧಿಯ ಪಥದತ್ತ ಸಾಗುತ್ತಿರುವುದಲ್ಲದೆ ಪ್ರಸ್ತುತ ಚಿನ್ನಾಭರಣ ವಿಭಾಗವನ್ನು ಆರಂಬಿಸಿ ಕಡಿಮೆ ಬಡ್ಡಿ ದರದಲ್ಲಿ ಸಾಲಸೌಲಭ್ಯ ನೀಡುತ್ತಿರುವ ಬ್ಯಾಂಕ್ ಬೆಳೆದು ಹೆಮ್ಮರವಾಗಲಿ, ಶೇರುದಾರರ ಸಂಖ್ಯೆಯೂ ಹೆಚ್ಚಾಗಲಿ ಎಂದು ಶುಭ ಹಾರೈಸಿದರು…

ಕೆ.ಆರ್.ಪೇಟೆ ಪಟ್ಟಣ ಪೋಲಿಸ್ ಠಾಣೆಯ ಇನ್ಸ್ ಪೆಕ್ಟರ್ ಎಂ.ಕೆ.ದೀಪಕ್, ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ, ಬ್ಯಾಂಕ್ ಅಧ್ಯಕ್ಷೆ ಕೆ.ಮಂಜುಳಾ, ಉಪಾಧ್ಯಕ್ಷ ಬೋರೇಗೌಡ, ನಿರ್ದೇಶಕರಾದ ಕೆ.ಎಸ್.ರಾಮೇಗೌಡ, ಕೈಗೋನಹಳ್ಳಿ ಕುಮಾರ್, ಚಿಕ್ಕೇ ಗೌಡ, ಮಂಜುನಾಥ್, ಬ್ಯಾಂಕ್ ನ ಸಿಇಓ ಅಶ್ವಿನಿ, ಕಾನೂನು ಸಲಹೆಗಾರ ಎನ್.ಆರ್.ರವಿಶಂಕರ್, ತಾಂತ್ರಿಕ ಸಲಹೆಗಾರ ತಿಮ್ಮಯ್ಯ, ಪಿಗ್ಮಿ ಸಂಗ್ರಹಕಾರ ಮಂಜುನಾಥ್ ಮತ್ತು ಬ್ಯಾಂಕಿನ ಗ್ರಾಹಕರು ಉಪಸ್ಥಿತರಿದ್ದರು.

error: