September 27, 2021

Bhavana Tv

Its Your Channel

ಕೆ.ಆರ್.ಪೇಟೆ ತಾಲೂಕು ಕಂದಾಯ ಇಲಾಖಾ ನೌಕರರ ಸಂಘದ ನೂತನ ಅಧ್ಯಕ್ಷೆಯಾಗಿ ಚಂದ್ರಕಲಾಪ್ರಕಾಶ್

ಕೆ.ಆರ್.ಪೇಟೆ: ರೈತರ ಜೀವನಾಡಿಯಾಗಿರುವ ಭೂಮಿಯ ಒಡೆತನಕ್ಕೆ ಸೇರಿದ ಕಂದಾಯ ಇಲಾಖೆಯ ಕೆಲಸ ಕಾರ್ಯಗಳನ್ನು ನಿಗಧಿತ ಅವಧಿಯೊಳಗೆ ಬದ್ಧತೆಯಿಂದ ಮಾಡಿಕೊಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಲು ಶ್ರಮಿಸಲಾಗುವುದು ಎಂದು ಕೆ.ಆರ್.ಪೇಟೆ ತಾಲೂಕು ಕಂದಾಯ ಇಲಾಖಾ ನೌಕರರ ಸಂಘದ ನೂತನ ಅಧ್ಯಕ್ಷೆ ಚಂದ್ರಕಲಾಪ್ರಕಾಶ್ ಹೇಳಿದರು.

ಕೆ.ಆರ್.ಪೇಟೆ ತಾಲೂಕು ಕಂದಾಯ ಇಲಾಖಾ ನೌಕರರ ಸಂಘದ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಚಂದ್ರಕಲಾಪ್ರಕಾಶ್ ಪತ್ರಕರ್ತರೊಂದಿಗೆ ಮಾತನಾಡಿ ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯಾದ ನನ್ನನ್ನು ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಮಾಡಿದ ಕಂದಾಯ ಇಲಾಖಾ ನೌಕರ ಬಂಧುಗಳಿಗೆ
ಕೃತಜ್ಞತೆಗಳನ್ನು ಸಮರ್ಪಿಸುವುದಾಗಿ ತಿಳಿಸಿದರು.

ಕೆ.ಆರ್.ಪೇಟೆ ತಾಲೂಕು ಕಂದಾಯ ಇಲಾಖಾ ನೌಕರರ ಸಂಘದ ನೂತನ ಪದಾಧಿಕಾರಿಗಳಾಗಿ ಚಂದ್ರಕಲಾಪ್ರಕಾಶ್(ಅಧ್ಯಕ್ಷರು), ಉಪತಹಶೀಲ್ದಾರ್ ಲಕ್ಷ್ಮೀಕಾಂತ್(ಗೌರವಾಧ್ಯಕ್ಷರು), ಜಯಸ್ವಾಮಿ, ರೂಪಶ್ರೀ, ಹರೀಶ್, ಅನಿತಾ, (ಉಪಾಧ್ಯಕ್ಷರು), ನರೇಂದ್ರ, ಕೆ.ಎಸ್.ಸೋಮಾಚಾರಿ(ಜಿಲ್ಲಾ ಪ್ರತಿನಿಧಿಗಳು), ಅಮೃತರಾಜ್(ಪ್ರಧಾನ ಕಾರ್ಯದರ್ಶಿ), ಮಧುಶ್ರೀ(ಖಜಾಂಚಿ), ವಾಣಿ, ಕಾಂತೇಶ್ ಬಾಗೇವಾಡಿ(ಸಹಕಾರ್ಯದರ್ಶಿಗಳು), ಗೋಪಾಲಕೃಷ್ಣ, ರಾಜಮೂರ್ತಿ, ಅನಿತಾ, ಬ್ರಹ್ಮರಾಜು(ಸಂಘಟನಾ ಕಾರ್ಯದರ್ಶಿಗಳು), ಹೊನ್ನೇಶ್, ಶಶಿಕುಮಾರ್‌ಮಡ್ಡಿ,ರಾಘವೇಂದ್ರ, ಆನಂದ, ಪೂಜಾ ಮತ್ತು ಶ್ವೇತ(ಕ್ರೀಡಾ ಕಾರ್ಯದರ್ಶಿಗಳು) ಸರ್ವಾನುತಮದಿಂದ ಆಯ್ಕೆಯಾದರು.
ಸಭೆಯಲ್ಲಿ ಮಂಡ್ಯ ಜಿಲ್ಲಾ ಗ್ರಾಮಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಮಧುಸೂಧನ್, ಜಿಲ್ಲಾ ಕಂದಾಯ ಇಲಾಖಾ ನೌಕರರ ಸಂಘದ ಪದಾಧಿಕಾರಿಗಳಾದ ವೆಂಕಟೇಶ್, ಮಹೇಶ್, ಮಂಜುನಾಥ, ಗೋವರ್ಧನ್, ಭಾಸ್ಕರ್ ಹಾಗೂ ಕೃಷ್ಣರಾಜಪೇಟೆ ತಾಲೂಕು ಗ್ರಾಮಲೆಕ್ಕಿಗರ ಸಂಘದ ಅಧ್ಯಕ್ಷ ಹರೀಶ್, ಉಪತಹಶೀಲ್ದಾರ್ ಗಳಾದ ಚಿಕ್ಕಲಕ್ಷ್ಮೀ, ಹಿರಿಯಣ್ಣ ಮತ್ತಿತರರು ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: