April 18, 2024

Bhavana Tv

Its Your Channel

ಸೆಪ್ಟೆಂಬರ್ ೧೪ ರಂದು ಮೈಸೂರಿನಲ್ಲಿ ಬಹುಜನ ಸಮಾಜಪಕ್ಷದ ಕಾರ್ಯಕರ್ತರ ಮೈಸೂರು ವಿಭಾಗದ ಬೃಹತ್ ಸಮಾವೇಶ.

ಕೆ.ಆರ್.ಪೇಟೆ ; ದೇಶದಲ್ಲಿ ಬಿಜೆಪಿ ಕಾಂಗ್ರೆಸ್ ರಾಜಕೀಯ ಪಕ್ಷಗಳನ್ನು ಹಿಂದಿಕ್ಕಿ ತೃತೀಯ ಶಕ್ತಿಯಾಗಿ ಬಿ.ಎಸ್.ಪಿ ಪಕ್ಷ ಹೊರಹೊಮ್ಮುತ್ತಿದೆ ಎಂದು ಕೆ.ಆರ್.ಪೇಟೆ ತಾಲ್ಲೂಕು ಬಿ.ಎಸ್.ಪಿ ಅಧ್ಯಕ್ಷ ಪ್ರದೀಪ್ ಬಸ್ತಿ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಜಯಮ್ಮ ಗೋವಿಂದೇಗೌಡ ಸಮುದಾಯ ಭವನದಲ್ಲಿ ನಡೆಯುತ್ತಿರುವ ಬಿ.ಎಸ್.ಪಿ ವಿಭಾಗ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ತಾಲ್ಲೂಕಿನಿಂದ ೨೦೦ಕ್ಕೂ ಹೆಚ್ಚಿನ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಬಿ.ಎಸ್.ಪಿ ಪಕ್ಷವು ರಾಜ್ಯದಲ್ಲಿ ನಿರ್ಣಾಯಕ ಶಕ್ತಿಯಾಗಿ ಹೊರಹೊಮ್ಮಲಿದೆ. ಬಿಜೆಪಿ ಪಕ್ಷದ ಜನವಿರೋಧಿ ನೀತಿ, ಬೆಲೆ ಏರಿಕೆ, ದಿನಬಳಕೆ ವಸ್ತುಗಳ ಬೆಲೆಗಳು ಗಗನಕ್ಕೇರಿರುವುದು, ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಸಿಲಿಂಡರ್ ಬೆಲೆಯು ದುಭಾರಿಯಾಗಿರುವುದು ಹಾಗೂ ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಫಲವಾಗಿರುವುದರಿಂದ ಜಾತ್ಯಾತೀತ ನಿಲುವನ್ನು ಹೊಂದಿದ್ದು ದೇಶದಲ್ಲಿ ಅತೀ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿರುವ ಬಿಎಸ್ ಪಿ ಪಕ್ಷದ ಪರವಾದ ಅಲೆಯು ಬೀಸುತ್ತಿದೆ. ಈ ಬಗ್ಗೆ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸವನ್ನು ತುಂಬಿ ಸಜ್ಜುಗೊಳಿಸಲು ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ವಿವರಿಸಿದ ಪ್ರದೀಪ್ ಬಸ್ತಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಬಿಎಸ್ ಪಿ ಪಕ್ಷವನ್ನು ಸೇರ್ಪಡೆಯಾಗುತ್ತಿದ್ದಾರೆ ಎಂದರು…
ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ಸಂಯೋಜಕರಾದ ರಾಮ್ ಜಿ ಗೌತಮ್, ಕರ್ನಾಟಕದ ಉಸ್ತುವಾರಿಗಳಾದ ಡಾ.ಅಶೋಕ ಸಿದ್ಧಾರ್ಥ, ಸುರೇಂದ್ರ ಸಿಂಗ್ ಕಲೋರಿಯಾ, ಮಾರಸಂದ್ರಮುನಿಯಪ್ಪ, ದಿನೇಶ್ ಗೌತಮ್, ಎಂ.ಗೋಪಿನಾಥ್, ಪಕ್ಷದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿಗಳಾದ ನಾಗೇಂದ್ರ ಅರಕಲವಾಡಿ, ಜಾಕೀರ್ ಹುಸೇನ್, ಗಂಗಾಧರ ಬಹುಜನ ಸೇರಿದಂತೆ ನೂರಾರು ಮುಖಂಡರು ಭಾಗವಹಿಸಲಿದ್ದಾರೆ. ಆದ್ದರಿಂದ ಸೆಪ್ಟೆಂಬರ್ ೧೪ರಂದು ನಡೆಯಲಿರುವ ಬಹುಜನರ ಸಮಾವೇಶದಲ್ಲಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿಕೊಡಬೇಕು ಎಂದು ಪ್ರದೀಪ್ ಬಸ್ತಿ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಿ.ಎಸ್.ಪಿ ಪಕ್ಷದ ಜಿಲ್ಲಾ ಉಸ್ತುವಾರಿ ಚಲುವರಾಜು, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್, ಕೆ.ಆರ್.ಪೇಟೆ ತಾಲ್ಲೂಕು ಬಿಎಸ್ ಪಿ ಅಧ್ಯಕ್ಷ ಪ್ರದೀಪ್ ಬಸ್ತಿ, ಪ್ರಧಾನ ಕಾರ್ಯದರ್ಶಿ ಗಂಗಾಧರ, ಉಪಾಧ್ಯಕ್ಷ ಶಂಕರ್, ತಾಲ್ಲೂಕು ಸಂಯೋಜಕ ಶಶಿಧರ್, ತಾಲ್ಲೂಕು ಸಂಚಾಲಕ ಗಜೇಂದ್ರ, ಖಜಾಂಚಿ ಸುನೀಲ್, ಕಸಬಾ ಹೋಬಳಿ ಅಧ್ಯಕ್ಷ ಸುನೀಲ್, ಸಂತೇಬಾಚಹಳ್ಳಿ ಹೋಬಳಿ ಅಧ್ಯಕ್ಷ ಸ್ವಾಮಿ, ಊಚನಹಳ್ಳಿ ಶಶಿಕುಮಾರ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು…

ವರದಿ.. ಡಾ.ಕೆ.ಆರ್.ನೀಲಕಂಠ . ಕೃಷ್ಣರಾಜಪೇಟೆ .ಮಂಡ್ಯ.

error: