April 25, 2024

Bhavana Tv

Its Your Channel

ಕೋರಂ ಅಭಾವ ಕೆ.ಆರ್.ಪೇಟೆ ಪುರಸಭೆಯ ಸಾಮಾನ್ಯ ಸಭೆ ಮುಂದಕ್ಕೆ

ಪುರಸಭೆಯ ಆಡಳಿತ ಪಕ್ಷದ ಉಪಾಧ್ಯಕ್ಷೆ ಗಾಯತ್ರಿ ಸೇರಿದಂತೆ ಬಿಜೆಪಿ ಬೆಂಬಲಿತ ಸ್ವಪಕ್ಷೀಯ ಸದಸ್ಯರ ಗೈರು, ಕಾಂಗ್ರೆಸ್ ಸದಸ್ಯರಿಂದ ಸಭೆ ಬಹಿಷ್ಕಾರ, ಪುರಸಭೆ ಅಧ್ಯಕ್ಷೆ ಸರ್ವಾಧಿಕಾರಿ ಧೋರಣೆಗೆ ಖಂಡನೆ .


ರಾಜಕೀಯ ದುರುದ್ಧೇಶದಿಂದ ಕಾಂಗ್ರೆಸ್ ಸದಸ್ಯರು ಸಭೆ ಬಹಿಷ್ಕರಿಸಿದ್ದಾರೆ, ಕಾಂಗ್ರೆಸ್ ಸದಸ್ಯರ ಆರೋಪಗಳು ಸತ್ಯಕ್ಕೆ ದೂರ ಪುರಸಭೆ ಅಧ್ಯಕ್ಷೆ ಮಹಾದೇವಿನಂಜುAಡ ತಿರುಗೇಟು.

ಕೆ.ಆರ್.ಪೇಟೆ: ಕೆ.ಆರ್.ಪೇಟೆ ಪುರಸಭೆಯ ಸಾಮಾನ್ಯ ಸಭೆಯು ಪುರಸಭೆ ಅಧ್ಯಕ್ಷೆ ಮಹಾದೇವಿನಂಜುoಡ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು. ಕಾಂಗ್ರೆಸ್ ಸದಸ್ಯರು ಸಭೆಯನ್ನು ಬಹಿಷ್ಕರಿಸಿ ಸಭೆಯಿಂದ ಹೊರ ನಡೆದರೆ ಬಿಜೆಪಿ ಬೆಂಬಲಿತ ಜೆಡಿಎಸ್ ಸದಸ್ಯರು ಉಪಾಧ್ಯಕ್ಷೆ ಗಾಯತ್ರಿ ಅವರೊಂದಿಗೆ ೬ಸದಸ್ಯರು ಸಭೆಗೆ ಗೈರಾಗಿದ್ದರು.ಕೋರಂ ಅಭಾವದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಸಭೆ ಮುಂದೂಡಿದ ಅಧ್ಯಕ್ಷೆ ಮಹಾದೇವಿನಂಜುoಡ…
ಪುರಸಭೆಯ ಆಡಳಿತದಲ್ಲಿ ಮಹಿಳಾ ಸದಸ್ಯರ ಬದಲಾಗಿ ಅವರ ಪತಿಯರು ಸದಸ್ಯರೆಂದು ದರ್ಬಾರು ನಡೆಸುತ್ತಿದ್ದಾರೆ. ಪುರಸಭೆಯ ಆಡಳಿತವು ಹಳ್ಳ ಹಿಡಿದಿದ್ದು, ಅಧ್ಯಕ್ಷೆ ಮಹಾದೇವಿ ಅವರು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಸರ್ವಾಧಿಕಾರಿ ಧೋರಣೆಯಿಂದ ವರ್ತಿಸುತ್ತಿದ್ದಾರೆ. ಮಹಾದೇವಿ ಅವರ ಅಧ್ಯಕ್ಷತೆಯಲ್ಲಿ ಕೆ.ಆರ್.ಪೇಟೆ ಪಟ್ಟಣದ ಅಭಿವೃದ್ಧಿಗೆ ಹಿನ್ನಡೆಯಾಗಿದ್ದು ಮರೀಚಿಕೆಯಾಗಿದೆ. ಕ್ಷೇತ್ರದ ಶಾಸಕರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ನಾರಾಯಣಗೌಡ ಅವರು ಪಟ್ಟಣದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಸುಳ್ಳು ಹೇಳಿಕೊಂಡು ಜನರನ್ನು ದಿಕ್ಕುತಪ್ಪಿಸುತ್ತಿರುವ ಸಚಿವರು ಪಟ್ಟಣದ ಅಭಿವೃದ್ಧಿಗೆ ಯಾವುದೇ ವಿಶೇಷ ಅನುದಾನವನ್ನು ತಂದಿಲ್ಲ, ಇಂತಹ ಕೆಟ್ಟ ಆಡಳಿತ ಮಂಡಳಿಯನ್ನು ಈ ಹಿಂದೆAದೂ ಕಂಡಿರಲಿಲ್ಲ, ಅಭಿವೃದ್ಧಿ ನಿರ್ಲಕ್ಷಿಸಿ ಸ್ವಾರ್ಥಸಾಧನೆ ಮಾಡುತ್ತಿರುವ ಅಧ್ಯಕ್ಷೆ ಮಹಾದೇವಿ ನೈತಿಕ ಹೊಣೆಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪುರಸಭೆಯ ವಿಪಕ್ಷದ ಸದಸ್ಯರಾದ ಕೆ.ಸಿ.ಮಂಜುನಾಥ್ ಆಗ್ರಹಿಸಿದರು.

ಕಾಂಗ್ರೆಸ್ ಸದಸ್ಯರಾದ ಕೆ.ಬಿ.ಮಹೇಶ್, ಡಿ.ಪ್ರೇಮಕುಮಾರ್, ಹೆಚ್.ಎನ್.ಪ್ರವೀಣ್, ಖಮ್ಮರಬೇಗಂಸಲ್ಲೂ, ಸುಗುಣರಮೇಶ್, ಸೌಭಾಗ್ಯ ಉಮೇಶ್, ಪಂಕಜಾಪ್ರಕಾಶ್, ಕೆ.ಆರ್.ರವೀಂದ್ರಬಾಬು ಸಭೆ ಬಹಿಷ್ಕರಿಸಿ ಹೊರನಡೆದರು…

ಇಂದಿನ ಸಾಮಾನ್ಯ ಸಭೆಗೆ ಉಪಾಧ್ಯಕ್ಷೆ ಗಾಯತ್ರಿ, ಜೆಡಿಎಸ್ ಸದಸ್ಯರಾದ ಶೋಭಾದಿನೇಶ್, ಇಂದ್ರಾಣಿವಿಶ್ವನಾಥ್, ಹೆಚ್.ಡಿ.ಅಶೋಕ, ಗಿರೀಶ್, ಬಿಜೆಪಿ ಬೆಂಬಲಿತ ಕಾಂಗ್ರೆಸ್ ಸದಸ್ಯೆ ಕಲ್ಪನಾ ದೇವರಾಜು ಇಂದಿನ ಸಭೆಗೆ ಗೈರುಹಾಜರಾಗಿದ್ದರು ..

ಸದಸ್ಯರ ಸಭೆ ಬಹಿಷ್ಕಾರದ ನಂತರ ಸಾಮಾನ್ಯ ಸಭೆಯನ್ನು ಮುಂದೂಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಪುರಸಭೆ ಅಧ್ಯಕ್ಷೆ ಮಹಾದೇವಿ, ಸದಸ್ಯರಾದ ಕೆ.ಎಸ್.ಪ್ರಮೋದ್, ಹೆಚ್.ಆರ್.ಲೋಕೇಶ್, ಶಾಮಿಯಾನ ತಿಮ್ಮೇಗೌಡ, ಶುಭಾಗಿರೀಶ್, ಪದ್ಮಾರಾಜು ಹಾಗೂ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಪುರಸಭೆ ಸದಸ್ಯರಾದ ಕೆ.ಎಸ್.ಸಂತೋಷ್ ಮಾತನಾಡಿ ರಾಜಕೀಯ ದುರುದ್ದೇಶದಿಂದ ಕಾಂಗ್ರೆಸ್ ಸದಸ್ಯರು ಇಂದಿನ ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ ಸಚಿವ ನಾರಾಯಣಗೌಡರ ಹೆಸರಿಗೆ ಕಳಂಕ ತರಲು ಸಂಚು ನಡೆಸಿದ್ದಾರೆ. ಕೆ.ಆರ್.ಪೇಟೆ ಪಟ್ಟಣದ ಅಭಿವೃದ್ಧಿ ಕುಂಠಿತವಾಗಲು ಕಳೆದ ೩೫ ವರ್ಷಗಳಿಂದ ಪುರಸಭೆಯ ಆಡಳಿತ ನಡೆಸಿರುವ ಕಾಂಗ್ರೆಸ್ ಪಕ್ಷವೇ ಕಾರಣವಾಗಿದೆ. ಅಧಿಕಾರವಿಲ್ಲದೇ ಅಧಿಕಾರದಿಂದ ವಂಚಿತವಾಗಿ ವಿಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್ ಬೆಂಬಲಿತ ಸದಸ್ಯರು ತಮ್ಮ ದುರಾಡಳಿತಕ್ಕೆ ಸಹಕಾರ ನೀಡದ ಅಧ್ಯಕ್ಷೆ ಮಹಾದೇವಿ ಅವರಿಗೆ ಕೆಟ್ಟಹೆಸರು ತರಲು ಮಾಡಿರುವ ಕುತಂತ್ರವಾಗಿದೆ. ಕಾಂಗ್ರೆಸ್ ಸದಸ್ಯರ ಅಭಿವೃದ್ಧಿ ಕುಂಠಿತ ಆರೋಪವು ದೆವ್ವದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗಿದೆ ಎಂದು ಪ್ರಮೋದ್ ವ್ಯಂಗ್ಯವಾಡಿದರು …

ಏಕನಿವೇಶನವನ್ನು ಬಹುನಿವೇಶನ ಮಾಡಿ ಪುರಸಭೆಗೆ ಬರಬೇಕಾದ ಆದಾಯವನ್ನು ವಂಚಿಸಿರುವುದು, ಗ್ರಾವೆಲ್ ಗುಂಡಿಗಳ ಒತ್ತುವರಿ ತೆರವು ಮಾಡಿಸದಿರುವುದು ಮುಂತಾದ ಆರೋಪಗಳು ನಿರಾಧಾರವಾಗಿವೆ ಎಂದು ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ಹೇಳಿದರು…

ಬಿಜೆಪಿ ಪರ ಬ್ಯಾಟಿಂಗ್ ಮಾಡಿದ ಜೆಡಿಎಸ್ ಸದಸ್ಯ ಸಂತೋಷ್ ..
ಸಚಿವ ನಾರಾಯಣಗೌಡರ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದ ತಾಲ್ಲೂಕು ಜೆಡಿಎಸ್ ಸದಸ್ಯ ಪುರಸಭೆ ಸದಸ್ಯ ಬಸ್ ಸಂತೋಷ್ ಇಂದಿನ ಸಭೆಯಲ್ಲಿ ಬಿಜೆಪಿ ಬೆಂಬಲಿತ ಅಧ್ಯಕ್ಷೆ ಮಹಾದೇವಿ ಅವರ ಪರವಾಗಿ ಬ್ಯಾಟಿಂಗ್ ಮಾಡಿದ್ದಲ್ಲದೇ, ಸಾಮಾನ್ಯ ಸಭೆಯಲ್ಲಿ ಭಾಗವಹಿಸದೇ ಸಭೆ ಬಹಿಷ್ಕರಿಸಿದ ಕಾಂಗ್ರೆಸ್ ಸದಸ್ಯರ ನಡೆಯನ್ನು ಸಂತೋಷ್ ಖಂಡಿಸಿದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ.

error: