April 24, 2024

Bhavana Tv

Its Your Channel

ಸಬ್ ಇನ್ಸ್ಪೆಕ್ಟರ್ ಬ್ಯಾಟರಾಯಗೌಡರನ್ನು ಸೇವೆಯಿಂದ ಅಮಾನತ್ತುಗೊಳಿಸುವಂತೆ ಆಗ್ರಹ.

ಕೃಷ್ಣರಾಜಪೇಟೆ :- ಅಮಾಯಕ ಯುವಜನರ ಮೇಲೆ ದೌರ್ಜನ್ಯ ನಡೆಸಿ ದಬ್ಬಾಳಿಕೆ ಮಾಡಿರುವ ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ತನಿಖೆ ನಡೆಸಿ ಶಿಕ್ಷೆ ವಿಧಿಸಬೇಕು ಎಂದು ಪತ್ರಿಕಾಗೋಷ್ಠಿ ನಡೆಸಲಾಯಿತು

ಕೆ.ಆರ್.ಪೇಟೆ ಪಟ್ಟಣ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ ಅವರು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡದೇ ಅಮಾಯಕ ವ್ಯಕ್ತಿಗಳೊಂದಿಗೆ ಅಸಭ್ಯವಾಗಿ ವರ್ತಿಸುತ್ತ ದೌರ್ಜನ್ಯ ನಡೆಸಿದ್ದಾರೆ. ಇಂತಹ ಜನವಿರೋಧಿ ಅಧಿಕಾರಿಗಳು ನಮ್ಮ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಕೆಲಸ ಮಾಡುವ ಅಗತ್ಯವಿಲ್ಲ. ಸಿಂದಘಟ್ಟ ಗ್ರಾಮದಲ್ಲಿ ಗಣೇಶ ಮೂರ್ತಿಯ ವಿಸರ್ಜನೆಯ ಸಂದರ್ಭದಲ್ಲಿ ಅಮಾಯಕ ಯುವಜನರ ಮೇಲೆ ದೌರ್ಜನ್ಯ ನಡೆಸಿ ದಬ್ಬಾಳಿಕೆ ಮಾಡಿರುವ ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ತನಿಖೆ ನಡೆಸಿ ಶಿಕ್ಷೆ ವಿಧಿಸಬೇಕು ಎಂದು ನೊಂದ ಜನರು ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು…

ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ ಅವರಿಂದ ದೌರ್ಜನ್ಯಕ್ಕೊಳಗಾಗಿ ತೊಂದರೆ ಅನುಭವಿಸಿರುವ ಕೆ.ಆರ್.ಪೇಟೆಯ ಗೌಡರಾಜು, ಜ್ಯೋತಿ ದೇವರಾಜು, ಕರ್ನಾಟಕ ರಕ್ಷಣಾ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಶಾಂತ್ ಗೌಡ, ಮಾನವ ಹಕ್ಕುಗಳ ಹೋರಾಟ ಸಮಿತಿಯ ತಾಲ್ಲೂಕು ಸಂಚಾಲಕ ಪೃಥ್ವಿ, ದೊಡ್ಡಕ್ಯಾತನಹಳ್ಳಿಯ ಸತ್ಯ, ರಾಯಸಮುದ್ರ ಗ್ರಾಮದ ಪುಟ್ಟಸ್ವಾಮಿಗೌಡ, ಹೊನ್ನೇಗೌಡ ಮತ್ತು ಕೆ.ಆರ್.ಪೇಟೆ ಪಟ್ಟಣದ ಹಳೇ ಮೈಸೂರು ರಸ್ತೆಯ ನಿವಾಸಿ ಮಧು ಬ್ಯಾಟರಾಯಗೌಡ ಹಾಗೂ ಆಸರೆ ಸಮಾಜಸೇವಾ ಟ್ರಸ್ಟಿನ ಅಧ್ಯಕ್ಷ ಹೆಚ್.ಬಿ.ಮಂಜುನಾಥ್ ತಮಗಾಗಿರುವ ತೊಂದರೆಗಳನ್ನು ಎಳೆ ಎಳೆಯಾಗಿ ವಿವರಿಸಿ ಗಂಭೀರ ಆರೋಪ ಮಾಡಿದರಲ್ಲದೇ ಮರಳು ದಂಧೆಗೆ ಪ್ರೋತ್ಸಾಹ ನೀಡಿರುವ, ಹಿಂಧೂ ಧರ್ಮದ ವಿರೋಧಿಯಾಗಿರುವ, ಬಡವರು ಶ್ರೀಮಂತರು ಎಂದು ಬೇಧಭಾವ ಮಾಡುವ ಪೋಲಿಸ್ ಅಧಿಕಾರಿ ಬ್ಯಾಟರಾಯಗೌಡ ಅವರನ್ನು ತಾಲ್ಲೂಕಿನಿಂದ ವರ್ಗಾವಣೆ ಮಾಡುವ ಜೊತೆಗೆ ಸಿಂದಘಟ್ಟ ಗ್ರಾಮದಲ್ಲಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯದರ್ಶಿ ಸತೀಶ್ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಬ್ಯಾಟರಾಯಗೌಡ ಅವರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು…
ವರದಿ: ಡಾ.ಕೆ.ಆರ್.ನೀಲಕಂಠ. ಕೃಷ್ಣರಾಜಪೇಟೆ. ಮಂಡ್ಯ

error: