April 20, 2024

Bhavana Tv

Its Your Channel

ಜೆಡಿಎಸ್ ಸೇರ್ಪಡೆಯ ಸುದ್ಧಿಯನ್ನು ನಿರಾಕರಿಸಿದ ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್ ಮತ್ತು ಜಿಲ್ಲಾ ಪಂಚಾಯತಿ ಮಾಜಿಸದಸ್ಯ ಅಘಲಯ ಮಂಜುನಾಥ್

ಕೆ.ಆರ.ಪೇಟೆ: ನಾವು ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿಗಳು, ಬಿಜೆಪಿ ಪಕ್ಷವನ್ನು ಬಿಟ್ಟು ಬೇರೆ ಪಕ್ಷಕ್ಕೆ ವಲಸೆ ಹೋಗುವ ಪ್ರಶ್ನೆಯೇ ಇಲ್ಲ. ಕಿಡಿಗೇಡಿಗಳು ವದಂತಿ ಹಬ್ಬಿಸಿ ನಮ್ಮನ್ನು ತೇಜೋವಧೆ ಮಾಡುತ್ತಿದ್ದಾರೆ ಜಿಲ್ಲಾ ಪಂಚಾಯತಿ ಮಾಜಿಉಪಾಧ್ಯಕ್ಷ ಶೀಳನೆರೆ ಅಂಬರೀಶ್ ಮತ್ತು ಜಿಲ್ಲಾ ಪಂಚಾಯತಿ ಮಾಜಿಸದಸ್ಯ ಅಘಲಯ ಮಂಜುನಾಥ್ ಸ್ಪಷ್ಠನೆ …

ನಮ್ಮ ಅಳಿವು ಉಳಿವು ಬಿಜೆಪಿ ಪಕ್ಷದಲ್ಲಿ ಮಾತ್ರ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ನಾರಾಯಣಗೌಡರು ನಮ್ಮ ನಾಯಕರು, ಕೆ.ಆರ್.ಪೇಟೆ ತಾಲ್ಲೂಕಿನ ಸಮಗ್ರವಾದ ಅಭಿವೃದ್ಧಿ ಗಾಗಿ ಕಳೆದ ವಿಧಾನಸಭಾ ಉಪಚುನಾವಣೆಯಲ್ಲಿ ಮಾಜಿ ಸ್ಪೀಕರ್ ಕೃಷ್ಣ ಅವರ ಬೆಂಬಲಿಗರೆಲ್ಲರೂ ಬೇಷರತ್ತಾಗಿ ಬಿಜೆಪಿ ಸೇರಿದ್ದೇವೆ, ಕೆಲವು ಪತ್ರಿಕೆಗಳಲ್ಲಿ ನಮ್ಮನ್ನು ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ ಎಂದು ವರದಿ ಪ್ರಕಟವಾಗಿರುವುದು ಸಂಪೂರ್ಣವಾಗಿ ನಿರಾಧಾರವಾಗಿದೆ ಎಂದು ಬಿಜೆಪಿ ಮುಖಂಡರಾದ ಶೀಳನೆರೆ ಅಂಬರೀಶ್ ಮತ್ತು ಅಘಲಯ ಮಂಜುನಾಥ್ ಸ್ಪಷ್ಟಪಡಿಸಿದರು..

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಜೆಡಿಎಸ್ ಸೇರ್ಪಡೆಯ ಸುದ್ಧಿಯನ್ನು ನಿರಾಕರಿಸಿದರು..

ಕಳೆದ ಉಪಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ನಾರಾಯಣಗೌಡ ಅವರನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷದಲ್ಲಿದ್ದ ನಾವು ಸೇರಿದಂತೆ ಮಾಜಿಸ್ಪೀಕರ್ ಕೃಷ್ಣ ಅವರ ಬೆಂಬಲಿಗರೆಲ್ಲರೂ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಅವರ ಮನವಿಯ ಮೇರೆಗೆ ತಾಲೂಕಿನ ಅಭಿವೃದ್ಧಿಗಾಗಿ ಬೇಷರತ್ತಾಗಿ ಬಿಜೆಪಿ ಪಕ್ಷವನ್ನು ಸೇರಿದ್ದೇವೆ. ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಈ ಹಿಂದೆAದೂ ಕಾಣದಂತಹ ಅಭಿವೃದ್ಧಿ ಕೆಲಸ ಕಾರ್ಯಗಳು, ಏತ ನೀರಾವರಿ ಯೋಜನೆಗಳು ಮಂಜೂರಾಗಿದ್ದು ಕಾಮಗಾರಿಯು ಆರಂಭವಾಗಿದೆ. ಇನ್ನಾರು ತಿಂಗಳಲ್ಲಿ ತಾಲ್ಲೂಕಿನಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳು ಎದ್ದು ಕಾಣಲಿವೆ. ತಾಲ್ಲೂಕಿನ ಅಭಿವೃದ್ಧಿಯನ್ನು ಮುಖ್ಯ ಗುರಿಯನ್ನಾಗಿಸಿಕೊಂಡು ನಾವು ಬಿಜೆಪಿ ಪಕ್ಷವನ್ನು ಸೇರಿದ್ದೇವೆ. ನಮ್ಮ ವಿರುದ್ದ ನಮ್ಮ ಸ್ವಪಕ್ಷೀಯರೇ ಅಪಪ್ರಚಾರ ಮಾಡುತ್ತಿದ್ದಾರೆ. ಪತ್ರಕರ್ತರು ಸತ್ಯಾಸತ್ಯತೆಯನ್ನು ಅವಲೋಕನ ಮಾಡಿ ನಿಜಾಂಶವನ್ನು ಮಾತ್ರ ವರದಿ ಮಾಡಬೇಕು. ಒಬ್ಬರ ಮನಸ್ಸಿಗೆ ನೋವಾಗುವ, ತೇಜೋವಧೆ ಮಾಡುವ ವರದಿಯನ್ನು ಮಾಡಬಾರದು ಎಂದು ಅಂಬರೀಶ್ ಮತ್ತು ಮಂಜುನಾಥ್ ಮನವಿ ಮಾಡಿದರು.
ಸುಳ್ಳು ಸುದ್ದಿಯನ್ನು ಪ್ರಕಟಿಸಿ ತೇಜೋವಧೆ ಮಾಡಿ ಚಾರಿತ್ರ‍್ಯಹರಣ ಮಾಡಿದರೆ ಮಾನನಷ್ಠ ಮೊಕದ್ದಮೆಯನ್ನು ದಾಖಲಿಸಿ ಹೋರಾಟ ನಡೆಸಬೇಕಾಗುತ್ತದೆ ಎಂದು ಅಘಲಯಮಂಜುನಾಥ್ ಎಚ್ಚರಿಕೆ ನೀಡಿದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: