December 3, 2021

Bhavana Tv

Its Your Channel

ಹೆಬ್ಬಾವನ್ನು ಸಂರಕ್ಷಿಸಿದ ಉರಗತಜ್ಞ ಸ್ನೇಕ್ ಮುನ್ನಾ

ಕೆ.ಆರ್.ಪೇಟೆಯ ಬಿ.ಬಿ.ಕಾವಲು ಗ್ರಾಮದ ಗೋಪಾಲ್ ಅವರ ಮನೆಯ ಬಳಿ ೮ವರ್ಷ ಪ್ರಾಯದ ಗಂಡು ಹೆಬ್ಬಾವನ್ನು ಸಂರಕ್ಷಿಸಿದ ಉರಗತಜ್ಞ ಸ್ನೇಕ್ ಮುನ್ನಾ

ಕೃಷ್ಣರಾಜಪೇಟೆ ತಾಲ್ಲೂಕಿನ ಬಿ.ಬಿ.ಕಾವಲು ಗ್ರಾಮದ ಗೋಪಾಲ್ ಅವರ ಮನೆಯ ಬಳಿ ಪತ್ತೆಯಾದ ೮ ವರ್ಷದ ಗಂಡು ಹೆಬ್ಬಾವನ್ನು ಉರಗತಜ್ಞ ಸ್ನೇಕ್ ಮುನ್ನಾ ಸುರಕ್ಷಿತವಾಗಿ ಹಿಡಿದು ಸಂರಕ್ಷಣೆ ಮಾಡಿದ್ದಾರೆ. ಸುಮಾರು ೮ಅಡಿಗಳಷ್ಟು ಉದ್ದವಿರುವ ಈ ಹೆಬ್ಬಾವನ್ನು ತಾಲ್ಲೂಕು ವಲಯ ಅರಣ್ಯಾಧಿಕಾರಿಗಳ ಸಮಕ್ಷಮದಲ್ಲಿ ಹೇಮಾವತಿ ನದಿಯ ನೀರಿನಿಂದ ಸುತ್ತುವರೆದಿರುವ ಪ್ರಾಕೃತಿಕ ರಮ್ಯ ರಮಣೀಯ ತಾಣವಾದ ಹೊಸಪಟ್ಟಣ ದ್ವೀಪಕ್ಕೆ ಬಿಟ್ಟು ಸಂರಕ್ಷಣೆ ಮಾಡಲಾಗುವುದು ಎಂದು ಸ್ನೇಕ್ ಮುನ್ನಾ ಪತ್ರಕರ್ತರಿಗೆ ತಿಳಿಸಿದರು.

ಸ್ನೇಕ್ ಮುನ್ನಾ ಅವರು ಈವರೆಗೆ ೧೦ಕ್ಕೂ ಹೆಚ್ಚಿನ ಹೆಬ್ಬಾವುಗಳನ್ನು ಹಿಡಿದು ಸಂರಕ್ಷಣೆ ಮಾಡಿದ್ದು. ನಾಗರಹಾವು, ಕೇರೆ ಹಾವು, ಹಸಿರುಹಾವು, ಮಂಡಲದ ಹಾವು, ಕಟ್ಟು ಹಾವು ಸೇರಿದಂತೆ ಐದು ಸಾವಿರಕ್ಕೂ ಹೆಚ್ಚಿನ ಹಾವುಗಳನ್ನು ಹಿಡಿದು ಸಂರಕ್ಷಣೆ ಮಾಡಿದ್ದಲ್ಲದೇ ಹಲವಾರು ಬಾರಿ ಹಾವುಗಳಿಂದ ಕಚ್ವಿಸಿಕೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸಿ ಸಾವನ್ನು ಗೆದ್ದು ಬಂದಿದ್ದಾರೆ, ಆದರೂ ಹಾವುಗಳನ್ನು ಹಿಡಿಯುವ ಹವ್ಯಾಸವನ್ನು ಮಾತ್ರ ಬಿಟ್ಟಿಲ್ಲ. ಎಲ್ಲಾ ಹಾವುಗಳು ವಿಷಪೂರಿತವಲ್ಲ, ಕೇರೆ ಹಾವು, ನಾಗರಹಾವು ಮುಂತಾದ ಪ್ರಬೇಧದ ಹಾವುಗಳು ರೈತಸ್ನೇಹಿಯಾಗಿವೆ. ತಾಲ್ಲೂಕು ಆಡಳಿತವು ಹಾವುಗಳ ಸಂರಕ್ಷಣೆ ಮಾಡುತ್ತಿರುವ ತಮಗೆ ಸಹಾಯ ಮಾಡಬೇಕು ಎಂದು ಸ್ನೇಕ್ ಮುನ್ನಾ ವಿನಮ್ರವಾಗಿ ಮನವಿ ಮಾಡುತ್ತಾರೆ.

ಪ್ರಾಕೃತಿಕ ಸಮತೋಲನವನ್ನು ಕಾಪಾಡುವ ನಿಟ್ಟಿನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿರುವ ಹಾವುಗಳನ್ನು ಸಾರ್ವಜನಿಕರು ಹಾಗೂ ರೈತಬಾಂಧವರು ಕೊಲ್ಲದೇ ಸಂರಕ್ಷಿಸಿ ಜೋಪಾನ ಮಾಡಬೇಕು ಎಂದು ಮನವಿ ಮಾಡಿದ ಮುನ್ನ ತಾಲ್ಲೂಕಿನ ಗ್ರಾಮಗಳಲ್ಲಿ ಹಾಗೂ ಮನೆಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹಾವುಗಳು ಕಂಡುಬAದರೆ ತಮಗೆ ತಿಳಿಸಿದರೆ ಸುರಕ್ಷಿತವಾಗಿ ಹಿಡಿದು ಸಂರಕ್ಷಿಸಿ ಜೋಪಾನ ಮಾಡುವುದಾಗಿ ಮುನ್ನಾ ತಿಳಿಸಿದರು..
ಮಂಡ್ಯ ಜಿಲ್ಲಾ ನೇಕಾರ ಪ್ರಕೋಷ್ಠ ಅಧ್ಯಕ್ಷರಾದ ಬಿಗ್ ಬಾಸ್ ಮೋಹನ್ ಮಾತನಾಡಿ ಉರಗಗಳ ಸಂರಕ್ಷಣೆಗೆ ತಮ್ಮ ಜೀವಿತವನ್ನೇ ಮುಡುಪಾಗಿಟ್ಟಿರುವ ಸ್ನೇಕ್ ಮುನ್ನಾ ಅವರಿಗೆ ಸರ್ಕಾರ ಹಾಗೂ ತಾಲ್ಲೂಕು ಆಡಳಿತವು ಸಹಾಯ ಮಾಡಬೇಕೆಂದು ಮನವಿ ಮಾಡಿದ್ದಾರೆ.

ಡಾ.ಕೆ.ಆರ್.ನೀಲಕಂಠ . ಕೃಷ್ಣರಾಜಪೇಟೆ .

error: