April 20, 2024

Bhavana Tv

Its Your Channel

ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆ ಅಂಗವಾಗಿ ಬೃಹತ್ ರಕ್ತದಾನ ಶಿಬಿರ

ಕೆ.ಆರ್.ಪೇಟೆ: ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆ ಅಂಗವಾಗಿ ಕೆ.ಆರ್.ಪೇಟೆ ತಾಲ್ಲೂಕಿನ ಮಡುವಿನಕೋಡಿ ಗ್ರಾಮದಲ್ಲಿ ಯುವಜನರಿಂದ ಬೆಂಗಳೂರು ರೋಟರಿ ಸೆಂಟ್ರಲ್ ಸಂಸ್ಥೆಯ ಸಹಯೋಗದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರ, ಸಾಮೂಹಿಕ ಅನ್ನಸಂತರ್ಪಣೆ, ಪುನೀತ್ ಭಾವಚಿತ್ರಕ್ಕೆ ಪುಷ್ಪಾರ್ಚನೆ..ಪುನೀತ್ ಸ್ಮರಣೆಯಲ್ಲಿ ಕಣ್ಣೀರು ಸುರಿಸಿ ಭಾವುಕರಾದ ಗ್ರಾಮಸ್ಥರು ..

ಕನ್ನಡದ ಮೇರುನಟ, ಹೃದಯವಂತ, ಆರೋಗ್ಯವಂತ ಸಮಾಜದ ನಿರ್ಮಾಣಕ್ಕಾಗಿ ಸದ್ದಿಲ್ಲದೇ ಸೇವೆ ಮಾಡಿ ತಾವು ಸತ್ತ ನಂತರವೂ ಜೀವಂತವಾಗಿರುವ ಯುವಜನರ ಆಶಾಕಿರಣ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಪುಣ್ಯಸ್ಮರಣೆ ಅಂಗವಾಗಿ ತಾಲ್ಲೂಕಿನ ಮಡುವಿನಕೋಡಿ ಗ್ರಾಮದಲ್ಲಿ ಸಾಮೂಹಿಕ ಅನ್ನಸಂತರ್ಪಣೆ ಹಾಗೂ ಬೃಹತ್ ರಕ್ತಧಾನ ಶಿಬಿರವು ಬೆಂಗಳೂರಿನ ರೋಟರಿ ಸೆಂಟ್ರಲ್ ಸಂಸ್ಥೆಯ ಸಹಯೋಗದಲ್ಲಿ ಅರ್ಥಪೂರ್ಣವಾಗಿ ನಡೆಯಿತು..

ಮಡುವಿನಕೋಡಿ ಗ್ರಾಮದ ಯುವಮುಖಂಡ ಪುನೀತ್ ಹಾಗೂ ಗ್ರಾಮದ ಮುಖಂಡರಾದ ಮಾರಿಗುಡಿ ಚಂದ್ರಶೇಖರ್, ವಿಜಯಕುಮಾರ್, ಸಾಗರ್, ನಾಗೇಶ್, ಗಂಗಾಧರ, ಎಂ.ಟಿ.ದೇವರಾಜು ಅವರ ನೇತೃತ್ವದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಭಾವ ಚಿತ್ರಕ್ಕೆ ವಿಶೇಷಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದ ಗ್ರಾಮಸ್ಥರು ರಕ್ತದಾನ ಮಾಡುವ ಮೂಲಕ ಪುನೀತ್ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ವಿಶೇಷ ರಂಗುತAದರು. ಯುವಕ ಯುವತಿಯರು ಸೇರಿದಂತೆ ಗ್ರಾಮಸ್ಥರು ಪೈಪೋಟಿಯ ಮೇಲೆ ರಕ್ತದಾನ ಶಿಬಿರಕ್ಕೆ ಆಗಮಿಸಿ ರಕ್ತದಾನ ಮಾಡಿ ಪುನೀತ್ ಅವರ ಆತ್ಮಕ್ಕೆ ಚಿರಶಾಂತಿ ಕೋರಿದರು.

ಗ್ರಾಮದ ಯುವಮುಖಂಡ ಪುನೀತ್ ಮಾತನಾಡಿ ಕನ್ನಡ ಚಲನಚಿತ್ರ ರಂಗದ ಮೇರು ನಟರಾದ ಪುನೀತ್ ರಾಜ್‌ಕುಮಾರ್ ಅವರ ಸಾವು ರಾಜ್ಯದ ಜನತೆಯನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಸರಳತೆ ಸಜ್ಜನಿಕೆಯನ್ನು ಮೈಗೂಡಿಸಿಕೊಂಡು ಹಿರಿಯರು ಹಾಗೂ ತಂದೆತಾಯಿಗಳ ಬಗ್ಗೆ ವಿಶೇಷ ಅಭಿಮಾನವನ್ನು ಬೆಳೆಸಿಕೊಂಡಿದ್ದ ಅಪ್ಪು ಸೇವೆ ಮತ್ತು ಪರೋಪಕಾರದ ಮೂಲಕ ತಮ್ಮ ಜೀವನದಲ್ಲಿ ಸಾರ್ಥಕತೆ ಕಂಡಿದ್ದಲ್ಲದೇ ಸತ್ತ ನಂತರವೂ ಒಬ್ಬ ವ್ಯಕ್ತಿಯು ಜನಮಾನಸದಲ್ಲಿ ಹೇಗೆ ಜೀವಂತವಾಗಿರಬಹುದು ಎಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ ಎಂದು ಪುನೀತ್ gಜ್ಜ್ಕುಮಾರ್ ಗುಣಗಾನ ಮಾಡಿದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: