April 20, 2024

Bhavana Tv

Its Your Channel

ಆಟೋ ಚಾಲಕರು ಹಾಗೂ ವರ್ತಕರಿಂದ ಅರ್ಥಪೂರ್ಣವಾಗಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭ ಹಾಗೂ ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆ ಕಾರ್ಯಕ್ರಮ

ಕೃಷ್ಣರಾಜಪೇಟೆ ಪಟ್ಟಣದಲ್ಲಿ ಆಟೋ ಚಾಲಕರು ಹಾಗೂ ವರ್ತಕರಿಂದ ಅರ್ಥಪೂರ್ಣವಾಗಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭ ಹಾಗೂ ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆ ಕಾರ್ಯಕ್ರಮ …
ಸಾಮೂಹಿಕ ಅನ್ನಸಂತರ್ಪಣೆ, ಆಟೋ ಚಾಲಕರಿಂದ ಪುನೀತ್ ಪುಣ್ಯಸ್ಮರಣೆ ಅಂಗವಾಗಿ ನಡೆದ ಸಾಮೂಹಿಕ ಅನ್ನಸಂತರ್ಪಣೆ ಕಾರ್ಯಕ್ರಮ …. ಕನ್ನಡ ಭಾವುಟಗಳಿಂದ ಸಿಂಗಾರಗೊAಡ ಆಟೋಗಳು..ಪುನೀತ್ ನೆನಪಿನಲ್ಲಿ ಕಣ್ಣೀರು ಹಾಕಿದ ಅಭಿಮಾನಿಗಳು ..

ಕೆ.ಆರ್.ಪೇಟೆ ಪಟ್ಟಣದ ನಾಗಮಂಗಲ ವೃತ್ತ, ಶ್ರವಣಬೆಳಗೊಳ ರಸ್ತೆಯ ವಿನಾಯಕ ಆಟೋ ಚಾಲಕರು ಮತ್ತು ಮಾಲೀಕರು ಮತ್ತು ಪುರಸಭೆಯ ಪಕ್ಕದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಷ್ಪನಮನ ಸಲ್ಲಿಸಿದ ತಹಶೀಲ್ದಾರ್ ಶಿವಮೂರ್ತಿ, ಸರ್ಕಲ್ ಇನ್ಸ್ ಪೆಕ್ಟರ್ ಎಂ.ಕೆ.ದೀಪಕ್, ಪುರಸಭೆ ಮುಖ್ಯಾಧಿಕಾರಿ ಕುಮಾರ್, ಉಧ್ಯಮಿ ಕೆ.ಆರ್.ಚಂದ್ರಶೇಖರ್, ಪುರಸಭೆ ಮಾಜಿಅಧ್ಯಕ್ಷ ಕೆ.ಬಿ.ಮಹೇಶ್, ಸದಸ್ಯ ನಟರಾಜು, ನಂದೀಶ್ ಮತ್ತು ತಾಲ್ಲೂಕು ಆಟೋ ಚಾಲಕರ ಸಂಘದ ಅಧ್ಯಕ್ಷ ವಾಸುದೇವ..ಕನ್ನಡ ಧ್ವಜಾರೋಹಣ ಮಾಡಿದ ತಹಶೀಲ್ದಾರ್ ಶಿವಮೂರ್ತಿ..

ಕನ್ನಡಿಗರಾದ ನಾವು ನವೆಂಬರ್ ಕನ್ನಡಿಗರಾಗಿ ತೋರಿಕೆಗಾಗಿ ಕನ್ನಡ ಪ್ರೇಮವನ್ನು ಪ್ರಕಟಿಸದೇ ನಮ್ಮ ನಡೆನುಡಿ, ಆಚಾರವಿಚಾರಗಳಲ್ಲಿ ಕನ್ನಡತನವನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು. ಕನ್ನಡ ನಾಡುನುಡಿಯ ಬಗ್ಗೆ ನಿರಭಿಮಾನಿಗಳಾಗದೇ ಕನ್ನಡ ನೆಲಜಲ ಹಾಗೂ ಭಾಷೆಯ ಬಗ್ಗೆ ಅಭಿಮಾನವನ್ನು ಬೆಳೆಸಿಕೊಂಡು ಕನ್ನಡ ಭಾಷೆಯ ಬಗ್ಗೆ ತಿಳಿಯದ ಅನ್ಯ ಭಾಷಿಕರಿಗೆ ಕನ್ನಡವನ್ನು ಕಲಿಸಿಕೊಡುವ ಕೆಲಸವನ್ನು ಅಭಿಮಾನದಿಂದ ಮಾಡಬೇಕು ಎಂದು ತಹಶೀಲ್ದಾರ್ ಎಂ.ಶಿವಮೂರ್ತಿ ಮನವಿ ಮಾಡಿದರು..

ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅಭಿಮಾನಿಗಳಾದ ಗಂಗೇಗೌಡ, ನಂದಣ್ಣ, ಬೋರೇಗೌಡ, ನವೀದ್ ಅಹಮದ್, ಕರ್ನಾಟಕ ರಕ್ಷಣಾ ಪಡೆಯ ಜಿಲ್ಲಾ ಉಪಾಧ್ಯಕ್ಷ ಸಮೀರ್, ಕೆ.ಪಿ.ದಿನೇಶ್, ಹಣ್ಣಿನ ಅಂಗಡಿ ರಾಮಣ್ಣ, ಶಿವಸ್ವಾಮಿ, ಲಕ್ಷ್ಮಮ್ಮ, ಕೆ.ಎನ್.ರಮೇಶ್, ಮೈಲಾರಿ ರವಿ, ಅಪ್ಸರ್, ಕುಮಾರ, ರಾಕೇಶ್, ತರುಣ್, ಮಲ್ಲಾರಾಮ್, ಸಾಧೀಕ್, ಮಂಟೇಮAಜು ಮತ್ತಿತರರು ಭಾಗವಹಿಸಿದ್ದರು..

ವರದಿ.ಡಾ.ಕೆ.ಆರ್.ನೀಲಕಂಠ.
ಕೃಷ್ಣರಾಜಪೇಟೆ, ಮಂಡ್ಯ.

error: