April 26, 2024

Bhavana Tv

Its Your Channel

ಕನ್ನಡಿಗರು ಕನ್ನಡ ಭಾಷೆ ಹಾಗೂ ನೆಲ-ಜಲದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು-ವಿಶ್ರಾಂತ ಯೋಧ ಸುಕುಮಾರ್

ಕೆ.ಆರ್.ಪೇಟೆ: ಕನ್ನಡಿಗರು ಕನ್ನಡ ಭಾಷೆ ಹಾಗೂ ನೆಲ-ಜಲದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಕೇವಲ ತೋರಿಕೆಗಾಗಿ ನವೆಂಬರ್ ಕನ್ನಡಿಗರಾಗದೇ ವರ್ಷದ ೩೬೫ ದಿನಗಳು ಕನ್ನಡಾಭಿಮಾನವನ್ನು ಬೆಳೆಸಿಕೊಂಡು ನೈಜ ಕನ್ನಡಿಗರಾಗಿ ಹೊರಹೊಮ್ಮಬೇಕು ಎಂದು ವಿಶ್ರಾಂತ ಯೋಧ ಸುಕುಮಾರ್ ಕರೆ ನೀಡಿದರು.

ಅವರು ಪಟ್ಟಣದ ಬೀದಿ ಬದಿಯ ಹಣ್ಣಿನ ವ್ಯಾಪಾರಿಗಳು ಹಮ್ಮಿಕೊಂಡಿದ್ದ ಕನ್ನಡ ರಾಜ್ಯ ಸರ್ ಸಮಾರಂಭ ಹಾಗೂ ಕನ್ನಡ ಚಲನಚಿತ್ರ ರಂಗದ ಮೇರುನಟ ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಆಯೋಜಕರು ನೀಡಿದ ಹೃದಯಸ್ಪರ್ಷಿ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದರು.
ಕನ್ನಡಿಗರಾದ ನಾವು ನಮ್ಮ ತಾಯಿ ಭಾಷೆಯಾದ ಕನ್ನಡ ಹಾಗೂ ನೆಲ-ಜಲದ ಬಗ್ಗೆ ನಿರಭಿಮಾನಿ ಗಳಾಗುತ್ತಿರುವುದರಿಂದ ಕನ್ನಡದ ನೆಲದಲ್ಲಿಯೇ ಕನ್ನಡಿಗರಾದ ನಾವು ಅಲ್ಪಸಂಖ್ಯಾತರಾಗುತ್ತಿದ್ದೇವೆ. ಗಡಿನಾಡ ಕನ್ನಡಿಗರ ಮೇಲೆ ಅನ್ಯಭಾಷಿಕರು ದಬ್ಬಾಳಿಕೆ ದೌರ್ಜನ್ಯ ನಡೆಸುತ್ತಿದ್ದಾರೆ. ರಾಜ್ಯದ ಗಡಿ ಪ್ರದೇಶಗಳಾದ ಬೆಳಗಾಂ, ಚಾಮರಾಜನಗರದ ತಾಳವಾಡಿ ಪಿರ್ಕಾ, ಮಂಗಳೂರಿನ ಪಕ್ಕದ ಕಾಸರಗೋಡು, ಆಂದ್ರಪ್ರದೇಶದ ಗಡಿಗ್ರಾಮವಾದ ವೈ.ಎನ್.ಹೊಸಕೋಟೆ ಮುಂತಾದ ಪ್ರದೇಶಗಳಲ್ಲಿ ದಿನನಿತ್ಯವೂ ಕನ್ನಡಿಗರು ದಬ್ಬಾಳಿಕೆ ಹಾಗೂ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಕನ್ನಡಿಗರ ನೋವನ್ನು ಆಲಿಸುವವರೇ ಇಲ್ಲದಂತಾಗಿದೆ. ಕನ್ನಡಿಗರ ರಾಜಧಾನಿಯಾದ ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ಜಯಕರ್ನಾಟಕ ಸಂಘಟನೆ, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳು ಕೆಲಸ ಮಾಡದಿದ್ದರೆ ಐಟಿ-ಬಿಟಿ ಕಂಪನಿಗಳಲ್ಲಿ ಕನ್ನಡಿಗರು ಉದ್ಯೋಗ ಪಡೆಯಲು ಹರ ಸಾಹಸವನ್ನೇ ಮಾಡಬೇಕಾಗುತ್ತಿತ್ತು. ಭಾರತೀಯ ರೈಲ್ವೆಯಂತಹ
ಸAಸ್ಥೆಗಳಲ್ಲಿ ಇಂದು ಸಾವಿರಾರು ಕನ್ನಡಿಗರು ಉದ್ಯೋಗವನ್ನು ಪಡೆದುಕೊಂಡು ಕೆಲಸ
ಮಾಡಲು ಕನ್ನಡಪರ ಸಂಘಟನೆಗಳ ಹೋರಾಟವೇ ಮುಖ್ಯ ಕಾರಣವಾಗಿದೆ. ಆಟೋ ಚಾಲಕರು
ಹಾಗೂ ಹಣ್ಣಿನ ವ್ಯಾಪಾರಿಗಳ ನಿಸ್ವಾರ್ಥ ಕನ್ನಡ ಪ್ರೇಮವು ನಾಡಿನ ಸಮಸ್ತ ಜನತೆಗೆ ಮಾದರಿಯಾಗಿದೆ ಎಂದು ಸುಕುಮಾರ್ ಶ್ಲಾಘಿಸಿದರು.
ಪುರಸಭೆ ಸದಸ್ಯ ಹೆಚ್.ಆರ್.ಲೋಕೇಶ್ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಬೀದಿ ವ್ಯಾಪಾರಿಗಳು ಸಂಘಟಿತರಾಗಿ ತಮ್ಮ ನ್ಯಾಯಬದ್ಧವಾದ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ನಡೆಸಬೇಕು. ಬಿಸಿಲು ಮಳೆ ಗಾಳಿಯೆನ್ನದೇ ಬೀದಿ ಬದಿಯಲ್ಲಿ ಹಣ್ಣನ್ನು ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿರುವ ಬಡ ವ್ಯಾಪಾರಿಗಳು ಜೀವನ ನಿರ್ವಹಣೆಗೆ ಅನುಕೂಲವಾಗುವಂತೆ ಶಾಶ್ವತವಾಗಿ ಸ್ಟಾಲ್‌ಗಳನ್ನು ಪುರಸಭೆಯ ವತಿಯಿಂದ ನಿರ್ಮಿಸಿಕೊಡಲು ಪ್ರಾಮಾಣಿಕವಾಗಿ ಹೋರಾಟ ನಡೆಸುವುದಾಗಿ ತಿಳಿಸಿದ ಲೋಕೇಶ್ ಬೀದಿ ಬದಿಯ ಹಣ್ಣಿನ ವ್ಯಾಪಾರಿಗಳ ಕನ್ನಡತನ ಹಾಗೂ ಕನ್ನಡದ ಪ್ರೇಮವು ಎಲ್ಲರಿಗೂ ಮಾದರಿಯಾಗಿದೆ ಎಂದರು.

ಪಟ್ಟಣದ ಆಗ್ರೋ ಕೇಂದ್ರ ಸಂಸ್ಥೆಯ ವ್ಯವಸ್ಥಾಪಕ ಪ್ರಕಾಶ್ ಪುನೀತ್ ರಾಜ್‌ಕುಮಾರ್ ಅವರ
ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಿ ಪುನೀತ್ ಅವರ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು. ಶರಣರ ಸಾವನ್ನು ಮರಣದಲ್ಲಿ ನೋಡು ಎನ್ನುವಂತೆ ಪುನೀತ್ ಅವರು ಅಕಾಲಿಕವಾಗಿ
ಸಾವಿಗೆ ಶರಣಾದರೂ ಇಂದಿಗೂ ಜೀವಂತವಾಗಿದ್ದಾರೆ. ದಿನವಹಿ ಸಾವಿರಾರು ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಅವರ ಸಮಾಧಿಯನ್ನು ವೀಕ್ಷಿಸಿ ಭಕ್ತಿನಮನ ಸಲ್ಲಿಸಿ ತೆರಳುತ್ತಿದ್ದಾರೆ ಎಂದು ಗುಣಗಾನ ಮಾಡಿದರು.

ಜಯಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಸೋಮಶೇಖರ್, ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಪಡೆಯ ಜಿಲ್ಲಾ ಗೌರವಅಧ್ಯಕ್ಷ ಶೀಳನೆರೆ ವಿನಯ್, ಜಿಲ್ಲಾ ಉಪಾಧ್ಯಕ್ಷ ಸಮೀರ್, ತಾಲೂಕು ಅಧ್ಯಕ್ಷ ಸೈಯ್ಯದ್ ಜಬ್ಬಾರ್, ಗೌರವಾಧ್ಯಕ್ಷ ದೇವರಾಜು, ಕಾರ್ಯಧ್ಯಕ್ಷ ಜಮೀಲ್‌ಅಹಮದ್, ಸಮಾಜಸೇವಕರಾದ ಬಿ.ಸೋಮಶೇಖರ್, ಕೆಬಿಸಿ ಚಂದ್ರು, ಬೀದಿ ಬದಿ ಹಣ್ಣಿನವ್ಯಾಪಾರಿಗಳ ಸಂಘದ ಅಧ್ಯಕ್ಷ ಭಾವಾಜಿ ಚಂದ್ರು, ಗೌರವಾಧ್ಯಕ್ಷ ಚಿನ್ನವೆಂಕಟೇಶಣ್ಣ, ರತ್ನಮ್ಮ, ದ್ರಾಕ್ಷಾಯಿಣಿ, ಸ್ಟುಡಿಯೋ ಗಂಗಾಧರ್, ಅಭಿ, ಮುಬಾರಕ್, ದೇವರಾಜು, ಜಾವೀದ್, ರಾಣಿ,ಮಂಗಳಮ್ಮ, ವಿನೋದಮ್ಮ, ಬುಕ್‌ಡಿಪೋ ಸೋಮಣ್ಣ, ಕ್ಯಾಂಟೀನ್ ವಾಸಣ್ಣ, ಕೆ.ಆರ್.ನೀಲಕಂಠ ಮತ್ತಿತರರು ಉಪಸ್ಥಿತರಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: