January 25, 2022

Bhavana Tv

Its Your Channel

ಬೂಕನಕೆರೆ ಹೋಬಳಿ ಕರವೇ ಘಟಕ ಅಸ್ತಿತ್ವಕ್ಕೆ; ಬೂಕನಕೆರೆ ಹೋಬಳಿಯ ಅಧ್ಯಕ್ಷರಾಗಿ ಯುವಮುಖಂಡ ಮಧು ಸರ್ವಾನುಮತದಿಂದ ಆಯ್ಕೆ

ಕೆ.ಆರ್.ಪೇಟೆ: ಕರ್ನಾಟಕ ರಕ್ಷಣಾ ವೇದಿಕೆಯು ಕನ್ನಡ ನಾಡು, ನುಡಿ ಹಾಗೂ ಭಾಷೆಯ ಉಳಿವಿಗಾಗಿ ಹೋರಾಟ ನಡೆಸುತ್ತಿರುವ ನಾಡಿನ ಸಮಸ್ತ ಕನ್ನಡಿಗರ ಸ್ವಾಭಿಮಾನದ ಸಂಸ್ಥೆಯಾಗಿದೆ. ಕರವೇ ಪದಾಧಿಕಾರಿಗಳಾಗಿ, ಕಾರ್ಯಕರ್ತರಾಗಿ ಕೆಲಸ ಮಾಡುವ ಕಾರ್ಯಕರ್ತರು ಸ್ವಾರ್ಥವನ್ನು ಬದಿಗಿಟ್ಟು ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದು ಕರವೇ ಕೃಷ್ಣರಾಜಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ಹೊನ್ನೇನಹಳ್ಳಿ ವೇಣು ಕರೆ ನೀಡಿದರು..

ಇದೇ ಸಂದರ್ಭದಲ್ಲಿ ಬೂಕನಕೆರೆ ಹೋಬಳಿ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಮಧು, ಉಪಾಧ್ಯಕ್ಷ ಮತ್ತಿಘಟ್ಟ ಅಶ್ವಥ್ ಹಾಗೂ ಕಾರ್ಯದರ್ಶಿಯಾದ ಅಗಸರಹಳ್ಳಿ ದೀಪು ಸರ್ವಾನುಮತದಿಂದ ಆಯ್ಕೆಯಾದ ಹಿನ್ನೆಲೆಯಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡುವಂತೆ ಕಿವಿಮಾತು ಹೇಳಿ ಕನ್ನಡ ಭಾವುಟವನ್ನು ನೀಡಿ ಅಧಿಕಾರ ಹಸ್ತಾಂತರಿಸಲಾಯಿತು..

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕರವೇ ನಗರ ಘಟಕದ ಅಧ್ಯಕ್ಷ ಮದನಗೌಡ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿಅಧ್ಯಕ್ಷ ಕೆ.ಆರ್.ನೀಲಕಂಠ ಸಭೆಯಲ್ಲಿ ಮಾತನಾಡಿದರು.

ಕರವೇ ತಾಲ್ಲೂಕು ಹಿರಿಯ ಉಪಾಧ್ಯಕ್ಷ ಶ್ರೀನಿಧಿ ಶ್ರೀನಿವಾಸ್, ಉಪಾಧ್ಯಕ್ಷ ಅಮ್ಮು ಶ್ರೀಧರ್, ಕಾರ್ಯದರ್ಶಿ ಮನು, ಸಂಚಾಲಕರಾದ ಜಹೀರ್ ಅಹಮದ್ ಸೇರಿದಂತೆ ನೂರಾರು ಕರವೇ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: