April 25, 2024

Bhavana Tv

Its Your Channel

ಕೆ.ಆರ್.ಪೇಟೆ ಪಟ್ಟಣದ ಬಸವೇಶ್ವರ ಚಿತ್ರಮಂದಿರದಲ್ಲಿ ಕಪೋಕಲ್ಪಿತ ಕನ್ನಡ ಚಲನಚಿತ್ರ ಪ್ರದರ್ಶನಕ್ಕೆ ಚಾಲನೆ

ಕೆ.ಆರ್.ಪೇಟೆ ಪಟ್ಟಣದ ಬಸವೇಶ್ವರ ಚಿತ್ರಮಂದಿರದಲ್ಲಿ ಕಪೋಕಲ್ಪಿತ ಕನ್ನಡ ಚಲನಚಿತ್ರ ಪ್ರದರ್ಶನಕ್ಕೆ ಚಾಲನೆ. ಕೆ.ಆರ್.ಪೇಟೆ ತಾಲ್ಲೂಕಿನ ಪ್ರತಿಭೆ ನಾಯಕನಟಿ ಸುಮಿತ್ರಗೌಡ ಅವರ ಬೃಹತ್ ಕಟೌಟ್ ಗೆ ಕ್ಷೀರಾಭಿಷೇಕ ಮಾಡಿ ಸಂಭ್ರಮಿಸಿದ ಅಭಿಮಾನಿಗಳು ..

ಕೃಷ್ಣರಾಜಪೇಟೆ ತಾಲ್ಲೂಕಿನ ಹಿರಿಕಳಲೆ ಗ್ರಾಮದ “ಸುಮಿತ್ರಗೌಡ” ಅವರು ನಾಯಕ ನಟಿಯಾಗಿ ನಟಿಸಿ ನಿರ್ದೇಶನ ಮಾಡಿರುವ ಕಪೋಕಲ್ಪಿತಂ ಸಿನಿಮಾದ ಪ್ರಥಮ ಪ್ರದರ್ಶನಕ್ಕೆ ಪಟ್ಟಣದ ಬಸವೇಶ್ವರ ಚಿತ್ರಮಂದಿರದಲ್ಲಿ ನಡೆದ ಸರಳ ಸಮಾರಂಭದಲ್ಲಿ ತಾಲ್ಲೂಕಿನ ಬೆಡದಹಳ್ಳಿಯ ಪಂಚಭೂತೇಶ್ವರ ಕ್ಷೇತ್ರದ ಪೀಠಾಧಿಪತಿ ಶ್ರೀ ರುದ್ರಮುನಿಸ್ವಾಮೀಜಿ ಅವರು ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಹೊಸ ಪ್ರತಿಭೆಯಾದ ಸುಮಿತ್ರಗೌಡ ಅವರನ್ನು ಪ್ರೋತ್ಸಾಹಿಸಿ ಆಶೀರ್ವದಿಸುವಂತೆ ಕನ್ನಡ ಪ್ರೇಕ್ಷಕರಲ್ಲಿ ಮನವಿ ಮಾಡಿದರು..

ದೇವು ಗಣಿ ಕಾರ್ಕಳ ಅವರು ನಿರ್ಮಾಣ ಮಾಡಿ ಸಂಗೀತ ನೀಡಿರುವ ಕಪೋಕಲ್ಪಿತ ಕನ್ನಡ ಚಿತ್ರವು ಸಂಪೂರ್ಣವಾಗಿ ಹೊಸ ಕನ್ನಡದ ಪ್ರತಿಭೆಗಳನ್ನು ಬಳಸಿಕೊಂಡು ನಿರ್ಮಿಸಿರುವ ಕನ್ನಡ ಚಿತ್ರವಾಗಿದ್ದು ಚಿತ್ರಕಥೆ ಹಾಗೂ ಛಾಯಾಗ್ರಹಣವು ಚಿತ್ರಕ್ಕೆ ವಿಶೇಷ ರಂಗು ನೀಡಿದೆ ಎಂದು ತಿಳಿಸಿದ ನಾಯಕನಟಿ ಸುಮಿತ್ರಗೌಡ ಇದೇ ಮೊದಲ ಬಾರಿಗೆ ನಾಯಕನಟಿಯಾಗಿ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದೇನೆ. ಕಪೋಪಲ್ಪಿತ ಕನ್ನಡ ಚಿತ್ರವು ಅತ್ಯುತ್ತಮವಾದ ಸದಬಿರುಚಿಯ ಚಿತ್ರವಾಗಿದ್ದು ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ವೀಕ್ಷಿಸಬಹುದಾದ ಸುಂದರ ಚಲನಚಿತ್ರವಾಗಿದೆ ಎಂದು ತಿಳಿಸಿದ ಸುಮಿತ್ರ ಕೋವಿಡ್ ಹಿನ್ನೆಲೆಯಲ್ಲಿ ಚಲನಚಿತ್ರದ ಬಿಡುಗಡೆಯು ಸ್ವಲ್ಪ ವಿಳಂಬವಾಯಿತು..ಒಳ್ಳೆಯ ಸಂಸಾರಿಕ ಕಥಾ ಹಂದರ ಹೊಂದಿರುವ ಕಪೋಕಲ್ಪಿತ ಚಿತ್ರವು ಖಂಡಿತವಾಗಿಯೂ ಯಶಸ್ವಿಯಾಗಿ ನಾಡಿನಾದ್ಯಂತ ಪ್ರದರ್ಶನವಾಗಲಿದೆ ಎಂದು ತಿಳಿಸಿದ ಸುಮಿತ್ರಗೌಡ ನನ್ನ ತಂದೆತಾಯಿಗಳ ಪರಿಶ್ರಮವು ಚಿತ್ರದಲ್ಲಿದೆ ಸಹ ನಿರ್ಮಾಪಕರಾಗಿ ಚಿತ್ರವು ಸಂಪೂರ್ಣಗೊಳ್ಳಲು ತಂದೆ ರಮೇಶಗೌಡ ಅವರ ಪರಿಶ್ರಮವು ಹೆಚ್ಚಾಗಿದೆ. ಕಾರ್ಕಳದ ದೇವುಗಣಿ ಅವರು ನಿರ್ಮಾಪಕರಾಗಿ ನನ್ನ ಮೇಲೆ ನಂಬಿಕೆಯಿಟ್ಟು ಹಣ ಹೂಡಿದ್ದಾರೆ. ಚಿತ್ರದ ಯಶಸ್ಸಿಗೆ ಕನ್ನಡ ಚಿತ್ರ ಪ್ರೇಮಿಗಳು ಚಿತ್ರಮಂದಿರಕ್ಕೆ ಆಗಮಿಸಿ ಚಿತ್ರ ವೀಕ್ಷಿಸಿ ಆಶೀರ್ವದಿಸಬೇಕು ಎಂದು ಸುಮಿತ್ರಗೌಡ ಕೈಮುಗಿದು ಮನವಿ ಮಾಡಿದರು .

ನಾಡಿನ ಖ್ಯಾತ ಜನಪದ ಕಲಾವಿದರು ಹಾಗೂ ವೀರಗಾಸೆ ಕಲೆಯ ಪ್ರದರ್ಶನಕ್ಕೆ ನಾಗಮಂಗಲದ ವೀರಭದ್ರ ನೃತ್ಯಪಟು ಡಾ.ರುದ್ರೇಶ್ ಪ್ರಸಾದ್ ಚಿತ್ರದ ಆರಂಭಕ್ಕೆ ಶುಭ ಹಾರೈಸಿದರಲ್ಲದೇ ನೃತ್ಯಪ್ರದರ್ಶನ ನೀಡಿ ಚಿತ್ರತಂಡಕ್ಕೆ ಹಾಗೂ ನಾಯಕನಟಿ ಸುಮಿತ್ರಗೌಡ ಅವರಿಗೆ ಶುಭ ಹಾರೈಸಿದರು.

ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್ ಸಮೀಪದಲ್ಲಿರುವ ಶನಿಸಿಂಗಾಪುರ ಕ್ಷೇತ್ರದ ಆಡಳಿತಾಧಿಕಾರಿ ಚಂದ್ರಕಲಾ, ರಾಜ್ಯ ಹಿಂದುಳಿದ ವರ್ಗಗಳ ಮಾನ್ಯತೆಪಡೆದ ಸಂಪಾದಕರ ವರದಿಗಾರರ ಸಂಘದ ರಾಜ್ಯಾಧ್ಯಕ್ಷ ಕೆ.ಆರ್.ನೀಲಕಂಠ, ಬಸವೇಶ್ವರ ಚಿತ್ರಮಂದಿರದ ವ್ಯವಸ್ಥಾಪಕರಾದ ನಾಗರಾಜು, ಚಂದ್ರಶೇಖರ್, ಪತ್ರಕರ್ತರಾದ ಟಿ.ವೈ.ಆನಂದ, ಸೈಯ್ಯದ್ ಖಲೀಲ್, ಮನು ಮಾಕವಳ್ಳಿ, ಸಿನಿಮಾದ ಪ್ರಚಾರಕರ್ತ ಮಂಗಳೂರು ಪ್ರೇಮ್ ಸೇರಿದಂತೆ ನೂರಾರು ಜನರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.

ಕಪೋಕಲ್ಪಿತ ಚಲನಚಿತ್ರದ ಆರಂಭ ಪ್ರದರ್ಶನದ ಹಿನ್ನೆಲೆಯಲ್ಲಿ ಡಾ.ರುದ್ರೇಶ್ ಪ್ರಸಾದ್ ವೀರಭದ್ರ ನೃತ್ಯಪ್ರದರ್ಶನ ನೀಡಿ ರಂಜಿಸಿದರೆ, ನಾಯಕನಹಳ್ಳಿಯ ದೇವರ ಬಸವಗಳು ಆಗಮಿಸಿ ನಾಯಕನಟಿ ಸುಮಿತ್ರಗೌಡ ಅವರಿಗೆ ಶುಭ ಕೋರಿದವು..ಕೆ.ಆರ್.ಪೇಟೆ ತಾಲ್ಲೂಕಿನ ಪ್ರತಿಭೆಯಾದ ಚಿತ್ರ ನಿರ್ದೇಶಕಿ ಹಾಗೂ ನಾಯಕನಟಿಯಾದ ಸುಮಿತ್ರಗೌಡ ಅವರ ಬೃಹತ್ ಕಟೌಟ್ ಗೆ ಕ್ಷೀರಾಭಿಷೇಕ ಮಾಡಿದ ಅಭಿಮಾನಿಗಳು ಸಂಭ್ರಮಿಸಿದರು. ಚಿತ್ರ ಪ್ರದರ್ಶನದ ಆರಂಭಕ್ಕೂ ಮುನ್ನ ಇತ್ತೀಚೆಗೆ ನಮ್ಮನ್ನಗಲಿದ ಪವರ್ ಸ್ಟಾರ್ ಪುನೀತ್ ರಾ???ಕುಮಾರ್ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಮರ್ಪಿಸಲಾಯಿತು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ.

error: