March 26, 2024

Bhavana Tv

Its Your Channel

ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳನ್ನು ಲೋಕಾರ್ಪಣೆ ಮಾಡಿದ ಸಚಿವ ಡಾ.ನಾರಾಯಣಗೌಡ

ಕೃಷ್ಣರಾಜಪೇಟೆ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳನ್ನು ಲೋಕಾರ್ಪಣೆ ಮಾಡಿದ ಸಚಿವ ಡಾ.ನಾರಾಯಣಗೌಡ.. ಎಪಿಎಂಸಿ ಆಡಳಿತ ಮಂಡಳಿಯ ಕಾರ್ಯವೈಖರಿ ಬಗ್ಗೆ ಸಚಿವರ ಮೆಚ್ಚುಗೆ. ರೈತರಿಗೆ ತೂಕ ಅಳತೆಯಲ್ಲಿ ಮೋಸ ಮಾಡುವ ದಲ್ಲಾಳಿಗಳು ಹಾಗೂ ಮಧ್ಯವರ್ತಿಗಳು ಹಿಡಿದು ಮಟ್ಟಹಾಕಿ..ರೈತರಿಗೆ ಅನುಕೂಲ ಮಾಡಿಕೊಡಿ ಎಂದು ಸಚಿವ ನಾರಾಯಣ ಗೌಡ ಅವರು ಖಡಕ್ ಆದೇಶ ..

ಕೆ.ಆರ್.ಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷೆ ಮಾಲತಿ ಬಸವೇಗೌಡ ಅವರಿಂದ ಸಚಿವ ಡಾ.ನಾರಾಯಣಗೌಡ ಅವರಿಗೆ ಹೃದಯಸ್ಪರ್ಶಿ ಸನ್ಮಾನಿಸಿದರು .ಎಪಿಎಂಸಿ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆ ಮಾಡಿಸಿಕೊಡುವಂತೆ ಮನವಿ ಸಲ್ಲಿಸಿದ ಅಧ್ಯಕ್ಷೆ ಹಾಗೂ ಆಡಳಿತ ಮಂಡಳಿಯ ಸದಸ್ಯರು…

ಕೆ.ಆರ್. ಪೇಟೆ ಪಟ್ಟಣದ ಎಪಿಎಂಸಿ ವತಿಯಿಂದ ಸಮಿತಿಯ ಆವರಣದಲ್ಲಿನ ಮೈಸೂರು ಚನ್ನರಾಯಪಟ್ಟಣ ಮುಖ್ಯ ರಸ್ತೆಗೆ ಹೊಂದಿಕೊAಡAತೆ ನಿರ್ಮಿಸಿರುವ 50 ಲಕ್ಷರೂ ವೆಚ್ಚದ 06 ವಾಣಿಜ್ಯ ಮಳಿಗೆಗಳನ್ನು ಲೋಕಾರ್ಪಣೆ ಗೊಳಿಸಿದ ಸಚಿವ ಡಾ.ನಾರಾಯಣ ಗೌಡ ಎಪಿಎಂಸಿ ಆವರಣದಲ್ಲಿ ರೈತರು ಬೆಳೆದಿರುವ ಹಣ್ಣು, ತರಕಾರಿಗಳು ಹಾಗೂ ಹೂವುಗಳನ್ನು ಸಂರಕ್ಷಿಸಲು ಅಗತ್ಯವಾಗಿ ಬೇಕಾದ ಅತ್ಯಂತ ಸುಸಜ್ಜಿತವಾದ ಕೋಲ್ಡ್ ಸ್ಟೋರೇಜ್ ಅನ್ನು ನಿರ್ಮಿಸಲು 5ಕೋಟಿ ರೂಪಾಯಿ ಅನುದಾನವನ್ನು ಅತೀ ಶೀಘ್ರವಾಗಿ ಬಿಡುಗಡೆ ಮಾಡಿಸಿ ಕೋಲ್ಡ್ ಸ್ಟೋರೇಜ್ ಕಾಮಗಾರಿ ಆರಂಭಕ್ಕೆ ಚಾಲನೆ ನೀಡುವುದಾಗಿ ತಿಳಿಸಿದರು.

ಮಂಡ್ಯ ಜಿಲ್ಲೆಯ ಮಂಡ್ಯ ಮದ್ದೂರು ತಾಲ್ಲೂಕುಗಳನ್ನು ಹೊರತುಪಡಿಸಿದರೆ ಕೆ.ಆರ್.ಪೇಟೆ ಎಪಿಎಂಸಿ ಮಾರುಕಟ್ಟೆಯಲ್ಲಿ ಎಳನೀರು, ತೆಂಗಿನಕಾಯಿ, ಅಡಿಕೆ ಸೇರಿದಂತೆ ತರಕಾರಿಗಳ ವ್ಯಾಪಾರವು ಅತೀ ಹೆಚ್ಚಾಗಿ ನಡೆಯುತ್ತಿದ್ದು ರೈತರು ಬೆಳೆದ ಉತ್ಪನ್ನಗಳಿಗೆ ವೈಜ್ಞಾನಿಕವಾಗಿ ಬೆಲೆಯು ದೊರೆಯುತ್ತಿದೆ. ದಲ್ಲಾಳಿಗಳ ಹಾವಳಿಯನ್ನು ಸಂಪೂರ್ಣವಾಗಿ ನಿಯಂತ್ರಿಸಿರುವ ಅಧ್ಯಕ್ಷೆ ಮಾಲತಿ ಬಸವೇಗೌಡರ ನೇತೃತ್ವದ ಆಡಳಿತ ಮಂಡಳಿಯು ರೈತರ ಪರವಾಗಿ ಕೆಲಸ ಮಾಡುತ್ತಾ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಸಚಿವ ನಾರಾಯಣಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉಪಾಧ್ಯಕ್ಷೆ ಮಂಜಮ್ಮ, ಆಡಳಿತ ಮಂಡಳಿಯ ನಿರ್ದೇಶಕರಾದ ಮಹೇಶ್ವರಿನರಸೇಗೌಡ, ಪ್ರಮೀಳಾ ವರದರಾಜೇಗೌಡ, ಎಂ.ಪಿ.ಲೋಕೇಶ್, ಸಂಗಾಪುರ ಶಶಿಧರ್, ಸಿಂದಘಟ್ಟ ಸೋಮಸುಂದರ್, ಹೊಸೂರು ಸ್ವಾಮಿಗೌಡ, ಕರ್ತೇನಹಳ್ಳಿ ಸುರೇಶ್, ಅಕ್ಕಿಹೆಬ್ಬಾಳು ನಾಗರಾಜು, ಕಾರ್ಯದರ್ಶಿ ಸೈಯ್ಯದ್ ರಫೀಕ್ ಅಹಮದ್, ಸಹಾಯಕ ಕಾರ್ಯದರ್ಶಿ ಸತೀಶ್, ತಹಶೀಲ್ದಾರ್ ಎಂ.ವಿ.ರೂಪ, ಪುರಸಭೆಯ ಅಧ್ಯಕ್ಷೆ ಮಹಾದೇವಿನಂಜುAಡ, ರಾಜಶ್ವನಿರೀಕ್ಷಕರಾದ ಚಂದ್ರಕಲಾ, ಹರೀಶ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಕಟ್ಟೇಕ್ಯಾತನಹಳ್ಳಿ ಪಾಪಣ್ಣ, ಕೆ.ಎಸ್.ಬಸವೇಗೌಡ, ಎಳನೀರು ವ್ಯಾಪಾರಿ ಭಾರತೀಪುರ ಪುಟ್ಟಣ್ಣ, ಮತ್ತಿತರರು ಉಪಸ್ಥಿತರಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ.

error: