April 17, 2024

Bhavana Tv

Its Your Channel

ಮಹಾತ್ಮ ವೇಮನ ಮಹರ್ಷಿಗಳ ಜಯಂತ್ಯೋತ್ಸವ ಕಾರ್ಯಕ್ರಮ

ಕೆ.ಆರ್.ಪೇಟೆ :- ಮಹಾನ್ ಸಂತರಾದ ಸರ್ವಜ್ಞ ರಂತೆ 12ನೇ ಶತಮಾನದಲ್ಲಿ ತಮ್ಮ ತ್ರಿಪದಿ ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿದ ಮಹರ್ಷಿ ವೇಮನರ ಜೀವನದ ಆದರ್ಶಗಳು ಸಾರ್ವಕಾಲಿಕ ಸತ್ಯವಾಗಿವೆಯಲ್ಲದೇ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ದಾರಿ ದೀಪವಾಗಿವೆ ಎಂದು ತಹಶೀಲ್ದಾರ್ ಎಂ.ವಿ.ರೂಪ ಹೇಳಿದರು..

ಅವರು ಇಂದು ಕೆ.ಆರ್.ಪೇಟೆ ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ತಾಲೂಕು ಆಡಳಿತವು ಆಯೋಜಿಸಿದ್ದ ಮಹಾತ್ಮ ವೇಮನ ಮಹರ್ಷಿಗಳ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ವೇಮನರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು…

12ನೇ ಶತಮಾನದಲ್ಲಿಯೇ ಕಾಯಕಯೋಗಿ ಅಣ್ಣ ಬಸವಣ್ಣ ಅವರಂತೆ ಸಾಮಾಜಿಕ ಜಾಗೃತಿ ಮೂಡಿಸಿ ವಚನ ಕ್ರಾಂತಿಯನ್ನು ಮಾಡಿ ದೈವದ ಸಾಕ್ಷಾತ್ಕಾರ ಹಾಗೂ ದೇವರ ಅನುಗ್ರಹಕ್ಕೆ ಬೇಕಾಗಿರುವುದು ಆಡಂಬರದ ಪೂಜೆ ಪುರಸ್ಕಾರಗಳಲ್ಲ.ಭಗವಂತನ ಒಲುಮೆಗೆ ಬೇಕಾಗಿರುವುದು ನಿಷ್ಕಲ್ಮಷವಾದ ಭಕ್ತಿ.. ನಿಜವಾದ ಭಕ್ತಿಯಿಂದ ಭಗವಂತನ ಸಾಕ್ಷಾತ್ಕಾರ ಹೊಂದಬಹುದು. ಜಾತಿ, ಮತ ಪಂಥಗಳಿAದ ಮುಕ್ತವಾದ ಸಮ ಸಮಾಜವು ನಿರ್ಮಾಣವಾಗಬೇಕು. ಅಸಮಾನತೆಯಿಂದ ಕೂಡಿರುವ ಸಮಾಜವು ದೂರಾಗಿ ಸಮ ಸಮಾಜದ ನಿರ್ಮಾಣಕ್ಕಾಗಿ ವಚನಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿದ ಮಹಾಕವಿ ವೇಮನರ ಜೀವನದ ಆದರ್ಶಗಳನ್ನು ಯುವಜನರು ಪಾಲಿಸುವ ಮೂಲಕ ಜಾತ್ಯಾತೀತ ಸಮ ಸಮಾಜದ ನಿರ್ಮಾಣಕ್ಕೆ ನಾಂಧಿ ಮಾಡಬೇಕು ಎಂದು ತಹಶೀಲ್ದಾರ್ ರೂಪ ಕರೆ ನೀಡಿದರು.

ತಾಲೂಕು ಕಸಾಪ ಮಾಜಿಅಧ್ಯಕ್ಷ ಹರಿಚರಣತಿಲಕ್ ಮಹರ್ಷಿ ವೇಮನರ ತತ್ವ ಸಂದೇಶಗಳು ಹಾಗೂ ಜೀವನ ಸಾಧನೆಗಳನ್ನು ಕುರಿತು ಮಾತನಾಡಿ ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಇಓ ಚಂದ್ರಶೇಖರ್, ಬಿಸಿಎಂ ಅಧಿಕಾರಿ ವೆಂಕಟೇಶ್, ತಾಲೂಕು ಸಮಾಜಕಲ್ಯಾಣ ಅಧಿಕಾರಿ ಮಹೇಶ್, ಸಿಡಿಪಿಓ ಪದ್ಮಾ, ಅಭ್ಕಾರಿ ನಿರೀಕ್ಷಕಿ ಭವ್ಯಾ, ಅಗ್ನಿಶಾಮಕ ಠಾಣಾಧಿಕಾರಿ ಶಿವಣ್ಣ, ತಾಲೂಕು ನಯನಜ ಕ್ಷತ್ರಿಯ ಸಮಾಜದ ಅಧ್ಯಕ್ಷ ಡಾ.ಶಿವಪ್ಪ, ಪುರಸಭೆಯ ಮುಖ್ಯಾಧಿಕಾರಿದ ಕುಮಾರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು…

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: