April 25, 2024

Bhavana Tv

Its Your Channel

ಸಾಮಾನ್ಯ ಸೇವಾ ಕೇಂದ್ರಗಳನ್ನು ಆರಂಭಿಸಲು ಆಯ್ಕೆ ಮಾಡಿರುವ ಯುವಜನರಿಗೆ ಲ್ಯಾಪ್ ಟಾಪ್ ವಿತರಣೆ

ಕೆ.ಆರ್.ಪೇಟೆ :-ಸರ್ಕಾರದ ಯೋಜನೆಗಳ ಫಲವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ ಗ್ರಾಮೀಣ ಪ್ರದೇಶದ ಮುಗ್ಧ ಜನರಿಂದ ಬೇಷ್ ಎನಿಸಿಕೊಂಡು ಸಾಮಾನ್ಯ ಸೇವಾಕೇಂದ್ರದ ಕಾರ್ಯನಿರ್ವಾಹಕರು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಪ್ರಾದೇಶಿಕ ನಿರ್ದೇಶಕರಾದ ಗಂಗಾಧರರೈ ಮನವಿ ಮಾಡಿದರು .

ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ 10 ಸಾವಿರ ಸಾಮಾನ್ಯ ಸೇವಾ ಕೇಂದ್ರಗಳನ್ನು ರಾಜ್ಯ ಸರ್ಕಾರವು ಮಂಜೂರು ಮಾಡಿದೆ. ಈ ದಿಕ್ಕಿನಲ್ಲಿ ಯುವಜನರಿಗೆ ಸೂಕ್ತ ತರಬೇತಿ ಹಾಗೂ ಮಾರ್ಗದರ್ಶನವನ್ನು ನೀಡಿ ರಾಜ್ಯಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಯೋಜನೆಯ ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಕ ಪಿ.ಗಂಗಾಧರರೈ ಹೇಳಿದರು.

ಅವರು ಇಂದು ಕೆ.ಆರ್.ಪೇಟೆ ತಾಲೂಕಿನ ರಾಮದಾಸ್ ಹೋಟೆಲ್ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಾಮಾನ್ಯ ಸೇವಾ ಕೇಂದ್ರಗಳನ್ನು ಆರಂಭಿಸಲು ಆಯ್ಕೆ ಮಾಡಿರುವ ಯುವಜನರಿಗೆ ಲ್ಯಾಪ್ ಟಾಪ್ ಗಳು ಹಾಗೂ ಅಂತರ್ಜಾಲ ಸಂಪರ್ಕದ ಮೋಡಂಗಳನ್ನು ವಿತರಿಸಿ ಮಾತನಾಡಿದರು..

ನಂಬಿಕೆ ಮತ್ತು ವಿಶ್ವಾಸಾರ್ಹತೆಯ ಮತ್ತೊಂದು ಹೆಸರೇ ಧರ್ಮಸ್ಥಳ ಸಂಸ್ಥೆಯೆAಬ ಹೆಗ್ಗಳಿಕೆಗೆ ನಮ್ಮ ಸಂಸ್ಥೆಯು ಭಾಜನವಾಗಿದೆ ಯಾದ್ದರಿಂದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಆಯ್ಕೆಯಾಗಿರುವ ಸೇವಾ ಪ್ರತಿನಿಧಿಗಳು ಬದ್ಧತೆಯಿಂದ ಕೆಲಸ ಮಾಡಿ ಸರ್ಕಾರದ ವಿವಿಧ ಯೋಜನೆಗಳ ಫಲ ಹಾಗೂ ಸವಲತ್ತುಗಳನ್ನು ಅರ್ಹರಿಗೆ ಸರ್ಕಾರವು ನಿಗಧಿಪಡಿಸಿರುವ ಶುಲ್ಕವನ್ನು ಮಾತ್ರ ಪಡೆದುಕೊಂಡು ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಾಹಕರು ಕೆಲಸ ಮಾಡಿ ಸೈ ಎನಿಸಿಕೊಳ್ಳಬೇಕು ಹುಟ್ಟಿನಿಂದ ಸಾಯುವವರೆಗೆ ಸರ್ಕಾರದಿಂದ ದೊರೆಯುವ ಎಲ್ಲಾ ಬಗೆಯ ಸೌಲಭ್ಯಗಳು ಹಾಗೂ ವಿವಿಧ ಸೌಲಭ್ಯಗಳ ಗುರುತಿನ ಕಾರ್ಡುಗಳನ್ನು ನಿಗಧಿತ ಸಮಯದೊಳಗೆ ಮಾಡಿಕೊಡುವ ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮವಾದ ಸೇವೆಯನ್ನು ನೀಡಬೇಕು ಎಂದು ಗಂಗಾಧರರೈ ಕಿವಿಮಾತು ಹೇಳಿದರು.

ಸಾಮಾನ್ಯ ಸೇವಾ ಯೋಜನೆಯ ಜಿಲ್ಲಾ ತರಬೇತುದಾರರಾದ ಪುನೀತ್, ತಿಲಕ್, ಜಯಶ್ರೀ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಮಮತಾಶೆಟ್ಟಿ, ಮೇಲ್ವಿಚಾರಕರಾದ ಕಾವ್ಯಲೋಕೇಶ್, ಅನ್ನಪೂರ್ಣ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಾತ್ಸಲ್ಯ ಕಿಟ್ ಗಳ ವಿತರಣೆ…ಕೆ.ಆರ್.ಪೇಟೆ ತಾಲೂಕಿನ ವ್ಯಾಪ್ತಿಯ ಬಡಜನರು, ನಿರ್ಗತಿಕರು ಹಾಗೂ ಅನಾಥರಿಗೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ.ಡಿ.ವೀರೇಂದ್ರಹೆಗಡೆ ಅವರು ಕೊಡುಗೆಯಾಗಿ ನೀಡಿದ ದಿನಬಳಕೆಯ ಅಗತ್ಯ ವಸ್ತುಗಳ ವಾತ್ಸಲ್ಯ ಕಿಟ್ ಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಪಿ.ಗಂಗಾಧರರೈ ವಿತರಿಸಿ ಬಡಜನರಿಗೆ ಆತ್ಮವಿಶ್ವಾಸ ತುಂಬಿದರು.. ಈ ಸಂದರ್ಭದಲ್ಲಿ ಕೆ.ಆರ್.ಪೇಟೆ ವಿಭಾಗದಲ್ಲಿ ಯೋಜನಾಧಿಕಾರಿಗಳಾದ ಮಮತಾಶೆಟ್ಟಿ, ಕಿಕ್ಕೇರಿ ಭಾಗದ ಯೋಜನಾಧಿಕಾರಿ ವೀರೇಶಪ್ಪ, ಮೇಲ್ವಿಚಾರಕರಾದ ಅನ್ನಪೂರ್ಣ, ಕಾವ್ಯಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ.

error: